Webdunia - Bharat's app for daily news and videos

Install App

ಸಂತಸವಾಗಿರುವ ಮಕ್ಕಳು ಆರೋಗ್ಯಕರ ಭಾವೀ ಪ್ರಜೆಗಳು

Webdunia
WD
ಮಕ್ಕಳಿಗೆ ಚಿಕ್ಕಂದಿನಲ್ಲಿ ಹೆಚ್ಚು ಒತ್ತು ನೀಡಿದರೆ ಹಾಗೂ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರೆ, ಅವರ ಹರೆಯದ ಜೀವನ ತುಂಬ ಸೊಗಸಾಗಿರುತ್ತದೆ ಎನ್ನುತ್ತದೆ ಹೊಸ ಸಮೀಕ್ಷೆ.

ಹರೆಯದ ಕೆಲವು ಗುಣಲಕ್ಷಣಗಳು ಮಕ್ಕಳಿಗೆ ತಮ್ಮ ಹಳೆಯ ಅಂದರೆ ಬಾಲ್ಯ ಜೀವನದ ಪ್ರತಿಫಲದಿಂದಲೇ ಬರುತ್ತದೆ. ಪಾಸಿಟಿವ್ ಆಗಲಿ, ನೆಗೆಟಿವ್ ಆಗಲಿ, ಯಾವುದೇ ಅನುಭವಗಳು ಹರೆಯದ ಜೀವನದ ಮೇಲೆ ತನ್ನ ಪ್ರಭಾವ ಬೀರದೆ ಇರುವುದಿಲ್ಲ. ಒತ್ತಡದಲ್ಲಿ ವರ್ತಿಸುವ ಪರಿಯೂ ಆತನ ಬಾಲ್ಯವನ್ನು ಅವಲಂಬಿಸಿರುತ್ತದೆ ಎನ್ನುತ್ತಾರೆ ಅಮೆರಿಕದ ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಂಶೋಧನಾ ಅಧ್ಯಯನದ ಸಹ ಬರಹಗಾರರಾದ ಲಾರಾ ಡಿ.ಕುಬ‌ಜಾನ್‌ಸ್ಕೈ.

ಕೆಲವು ಸ್ವಭಾವ ಲಕ್ಷಣಗಳು ಮಧ್ಯ ವಯಸ್ಸಿನಲ್ಲಿ ಆರೋಗ್ಯಕರ ಜೀವನವನ್ನು ಹಾಗೂ ಆರೋಗ್ಯಕರ ಸಾಮಾಜಿಕ ಸಂಬಂಧಗಳನ್ನು ಹೊಂದಲು ಸಹಕಾರಿಯಾಗುತ್ತದೆ. ಇದು ಸಹಜ ಕೂಡಾ. ಇದನ್ನು ಸಂಶೋಧನೆಗಳಿಂದಲೂ ಪತ್ತೆ ಹಚ್ಚಲಾಗಿದೆ. ಈ ಐಡಿಯಾದ ತಳಹದಿಯಲ್ಲಿ ಕೆಲವು ಮಕ್ಕಳನ್ನು ಆಯ್ದುಕೊಂಡು ಅವರ ಏಳನೇ ವಯಸ್ಸಿನಲ್ಲಿ ಅವರನ್ನು ಹೆಚ್ಚು ಫೋಕಸ್ ಮಾಡುವ ಜತೆಗೆ ಕಡಿಮೆ ನೆಗೆಟಿವ್ ವಿಚಾರಗಳನ್ನು ಅವರೆದುರು ಚರ್ಚಿಸದೆ ಅಥವಾ ಅವರ ಮೇಲೆ ಹೇರದೆ ಇದ್ದರೆ ಅವರ ಮಧ್ಯವಯಸ್ಸಿನ ಜೀವನ ಬೇರೆಯವರಿಗಿಂತ ಉತ್ತಮವಾಗಿರುತ್ತದೆ ಎಂಬುದು ಅಧ್ಯಯನದಿಂದ ಪತ್ತೆ ಹಚ್ಚಲಾಗಿದೆ. ಏಳನೇ ವಯಸ್ಸಿನಲಲ್ಿ ಮಾಡಿದ ಪ್ರಯೋಗದ ಫಲ 30ನೇ ವಯಸ್ಸಿನಲ್ಲಿ ಕಂಡಿದೆ ಎಂದರು ಲಾರಾ.

569 ಮಕ್ಕಳ ಮೇಲೆ ಈ ಪ್ರಯೋಗ ಮಾಡಲಾಗಿದ್ದು ಅವರೆಲ್ಲರಿಗೂ ಈ ಪ್ರಭಾವವನ್ನು ಅವರ ಮಧ್ಯವಯಸ್ಸಿನಲ್ಲಿ ಗಮನಿಸಲಾಗಿದೆ. ತರಬೇತಿ ನೀಡಲಾದ ಮನೋ ವಿಜ್ಞಾನಿಗಳು ಏಳರ ಹರೆಯದ ಮಕ್ಕಳಿಗೆ 15 ಬಗೆಯ ನಡವಳಿಕೆ‌ಗಳನ್ನು ಹೇರಲಾಗಿದೆ. ಈ ಸ್ಯಾಂಪಲ್‌ನಲ್ಲಿ ಶೇ.60ರಷ್ಟು ಪುರುಷರು ಹಾಗೂ ಶೇ.40ರಷ್ಟು ಮಹಿಳೆಯರು ಇದ್ದರು. ಅಲ್ಲದೆ ಶೇ.80ರಷ್ಟು ಬಿಳಿಯರು ಹಾಗೂ ಶೇ.20ರಷ್ಟು ಕರಿಯರು ಸಂಶೋದನೆಯಲ್ಲಿ ಭಾಗಿಗಳಾಗಿದ್ದರು. ಇದರಲ್ಲಿ ಶೇ.76 ಮಂದಿಗೆ ಉತ್ತಮ ಹಾಗೂ ಅತಿ ಉತ್ತಮ ಆರೋಗ್ಯವಿದ್ದು, ಶೇ.18 ಮಂದಿಗೆ ಮಾತ್ರ ವ್ಯಾಧಿಗಳಿದ್ದವು.

ಈ ಸಂಶೋಧನಾ ಸಮೀಕ್ಷೆಯಿಂದ ಸಾಮಾಜಿಕ ವರ್ತನೆ ಹಾಗೂ ಭಾವನಾತ್ಮಕ ನಡವಳಿಕೆ ಪ್ರಯೋಗಗಳು ಜೀವನದುದ್ದಕ್ಕೂ ಸಾಕಷ್ಟು ಸಹಾಯವಾಗುತ್ತದೆ. ಅಲ್ಲದೆ ಉತ್ತಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ ಎಂಬುದು ಈಗ ಸಂಶೋಧನೆಯಿಂದ ಬಹಿರಂಗವಾಗಿದೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments