Select Your Language

Notifications

webdunia
webdunia
webdunia
webdunia

ಈsssss ಕಿಸ್ಸಲಿ... ಏನೋ ಇದೆ...!

ಈsssss ಕಿಸ್ಸಲಿ... ಏನೋ ಇದೆ...!
WD
ಉಮ್‌ಮ್‌ಮ್‌ಮ್ಮ.... ಆzzzzzzಹ ಮುಂತಾದ ಸದ್ದುಗಳು ಮಾತ್ರವೇ ಈ ಪ್ರೀತಿಯ ಚುಂಬನದೊಂದಿಗೆ ಮೇಳೈಸಿರುವುದಲ್ಲ, ತುಟಿಗೆ ತುಟಿ ಬೆಸೆಯುವ ಈ ಗಾಢ ಚುಂಬನದೊಂದಿಗೆ, ನಿಮ್ಮ ತಲೆ, ಮನಸ್ಸು, ಭಾವನೆಗಳನ್ನು ಬದಲಾಯಿಸಬಲ್ಲ ರಾಸಾಯನಿಕ ಪ್ರಕ್ರಿಯೆಯೂ ನಡೀತದೆ!

ಹೌದು. ವ್ಯಾಲೆಂಟೈನ್ಸ್ ದಿನದ ಸಡಗರ ನಿಧಾನವಾಗಿ ಬಿಸಿಯಾಗತೊಡಗಿದೆ. ಹೀಗಾಗಿ ಪೆನ್ಸಿಲ್ವೇನಿಯಾದ ಲಾಫಾಯೆಟ್ ಕಾಲೇಜಿನ ಮನಃಶಾಸ್ತ್ರ ಪ್ರೊಫೆಸರ್ ವೆಂಡಿ ಹಿಲ್ ಅವರು ಈ ಸಂಶೋಧನೆ ಮಾಡಿ, ಪ್ರೀತಿ ವ್ಯಕ್ತಪಡಿಸುವ ನಡವಳಿಕೆಗಳಲ್ಲಿ ಅತ್ಯಂತ ಆಪ್ಯಾಯಮಾನವೆಂದೂ, ಅತ್ಯಂತ ಮೂಲಭೂತವಾದುದೆಂದೂ ಪರಿಗಣಿಸಲ್ಪಟ್ಟಿರುವ - ಬರಸೆಳೆದು ಮುತ್ತಿಡುವ ಚುಂಬನದ ಮೇಲೆ ಬೆಳಕು ಚೆಲ್ಲುವ ಸಾಹಸಕ್ಕೆ ಕೈಹಚ್ಚಿದ್ದಾರೆ.

ಎರಡು ತುಟಿಗಳ ಸಮ್ಮಿಲನವು ಸಂಕೀರ್ಣವಾದ ರಾಸಾಯನಿಕವೊಂದು ಮೆದುಳಿಗೆ ಧಾವಿಸುವಂತೆ ಮಾಡುತ್ತದೆ ಮತ್ತು ಇದರಿಂದಾಗಿ ಪ್ರೇಮಿ ಯಾ ಪ್ರೇಯಸಿ ಸುಖಾನುಭವಸ, ಹಿತಾನುಭವ, ರೋಮಾಂಚನದ ಅನುಭವ ಪಡೆಯುತ್ತಾರೆ ಎಂದು ಆಕೆ ಪತ್ತೆ ಹಚ್ಚಿದ್ದಾರೆ.

ಮಾತ್ರವಲ್ಲ, ಲಾಲಾರಸದಲ್ಲಿರುವ ಲೈಂಗಿಕತೆ ಪ್ರಚೋದಕ ಫಿರಮೋನ್‌ಗಳ ವಿನಿಮಯವಾಗುವುದರಿಂದ ನೇರವಾಗಿ ಈ ಹಾರ್ಮೋನುಗಳ ಬಿಡುಗಡೆಗೆ ಕಾರಣವಾಗುತ್ತದೆ ಎಂದೂ ನಂಬಲಾಗಿದೆ.

'ಚುಂಬನ ಹೇಳಿದಷ್ಟು ಸುಲಭವಲ್ಲ. ಇದು ತೀರಾ ಸಂಕೀರ್ಣ ಪ್ರಕ್ರಿಯೆ ಎಂಬುದನ್ನು ಈ ಅಧ್ಯಯನ ತೋರಿಸಿಕೊಟ್ಟಿದೆ. ಇದು ಹಾರ್ಮೋನುಗಳ ಬದಲಾವಣೆಗಳಿಗೆ ಮತ್ತು ಏನೂ ಆಗಲೇ ಇಲ್ಲ ಎಂದು ನಾವು ತಿಳಿದುಕೊಂಡಿರುವ ಸಂಗತಿಗಳಿಗೂ ಕಾರಣವಾಗುತ್ತವೆ' ಎಂದು ವೆಂಡಿ ಹಿಲ್ ಹೇಳಿರುವುದನ್ನು ಉಲ್ಲೇಖಿಸಿ ಇಂಗ್ಲೆಂಡಿನ ದಿ ಟೈಮ್ಸ್ ವರದಿ ಮಾಡಿದೆ.

ಒಟ್ಟಿನಲ್ಲಿ ಆಕ್ಸಿಟೋಸಿನ್ ಮತ್ತು ಕಾರ್ಟಿಸಾಲ್ ಎಂಬ ಎರಡು ಹಾರ್ಮೋನುಗಳ ಬದಲಾವಣೆಗೆ ಈ ಕಿಸ್ಸಿಂಗು ಕಾರಣವಾಗುತ್ತದೆ ಎಂಬುದು ಸಾಬೀತಾಗಿದೆ. ಇದಕ್ಕಾಗಿ ಗಂಡು-ಹೆಣ್ಣು ಜೋಡಿಗಳಲ್ಲಿ ಈ ಹಾರ್ಮೋನುಗಳ ಪ್ರಮಾಣವನ್ನು ಕೈಗಳನ್ನು ಹಿಡಿದುಕೊಂಡ ಮತ್ತು ಚುಂಬಿಸಿದ ಮೊದಲು ಮತ್ತು ಆನಂತರ ಅಳತೆ ಮಾಡಿ ಸಂಶೋಧನೆ ನಡೆಸಲಾಗಿದೆ.

Share this Story:

Follow Webdunia kannada