Webdunia - Bharat's app for daily news and videos

Install App

ಮತ್ತೊಂದು ಪವಾಡ: ಒಡೆದ ಹೃದಯ ದುರಸ್ತಿ!

Webdunia
ಸುಪ್ರತಿಮ್ ದತ್ತಾ ಎಂಬವರ ದೇಹದೊಳಕ್ಕೆ ನುಗ್ಗಿದ್ದ ಕಬ್ಬಿಣದ ಸಲಾಕೆಯನ್ನು ಯಶಸ್ವಿಯಾಗಿ ಆಪರೇಶನ್ ಮೂಲಕ ತೆಗೆದ ಎರಡು ತಿಂಗಳಲ್ಲಿ, ನವದೆಹಲಿಯ ಎಐಐಎಂಎಸ್ ವೈದ್ಯರು ಮತ್ತೊಂದು ಸಾಧನೆ ಮಾಡಿದ್ದು, ಅಪಘಾತವೊಂದರಲ್ಲಿ ಏಟುಬಿದ್ದು ಒಡೆದು ಹೋಗಿದ್ದ ಹೃದಯವನ್ನು ಸರಿಪಡಿಸಿ ಪವಾಡ ಸೃಷ್ಟಿಸಿದ್ದಾರೆ.

22 ರ ಹರೆಯದ ಅರುಣ್ ಶರ್ಮಾ ಎಂಬ ಮೆಡಿಕಲ್ ರೆಪ್ರೆಸೆಂಟೇಟಿವ್ ಮೀರತ್‌ನಲ್ಲಿ ಬೈಕ್ ಅಪಘಾತಕ್ಕೀಡಾದ ಭರ್ತಿ ಎಂಟು ಗಂಟೆಗಳ ಬಳಿಕ ಎಐಐಎಂಎಸ್ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಾಗಿದ್ದ. ಮೀರತ್ ವೈದ್ಯರಂತೂ ಈತನ ಆಸೆಯನ್ನೇ ಕೈಬಿಟ್ಟಿದ್ದರು. ಆದರೆ ಕುಟುಂಬಿಕರು ದೆಹಲಿಗೆ ಕರೆದೊಯ್ಯುವ ರಿಸ್ಕ್ ತೆಗೆದುಕೊಂಡಿದ್ದರು.

ಅಪಘಾತದ ತೀವ್ರತೆಯಿಂದಾಗಿ ಅರುಣ್ ಶರ್ಮಾನ ಎದೆಗೂಡು ಪುಡಿ ಪುಡಿಯಾಗಿ, ಹೃದಯವನ್ನೂ ಜಜ್ಜಿ ಬಿಟ್ಟಿತ್ತು. ಇದರಿಂದಾಗಿ ಹೃದಯದ ಅಂಗಾಂಶವು ಎರಡು ಕಡೆಗಳಲ್ಲಿ ಬಿರುಕುಬಿಟ್ಟಿತ್ತು.

ಅತ್ಯಂತ ಸಂಕೀರ್ಣವಾದ ಎರಡು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದ ಎಐಐಎಂಎಸ್ ತಜ್ಞ ವೈದ್ಯರು, ಭಾರತದಲ್ಲೇ ಮೊದಲ ಬಾರಿಗೆ ಈ ರೀತಿಯ ಸಾಧನೆಯೊಂದನ್ನು ಮಾಡಿದರು.

ಇಲ್ಲಿಗೆ ಆತ ಬಂದಿದ್ದಾಗ ಬಹುತೇಕ ಸಾವಿನಂಚಿನಲ್ಲಿದ್ದ. ನಾನಂತೂ ಎಲ್ಲಾ ಆಸೆ ಬಿಟ್ಟಿದ್ದೆ ಎಂದಿದ್ದಾರೆ ಅರುಣ್ ಶರ್ಮಾರ ಅಣ್ಣ ಶಂಕರ್ ಶರ್ಮಾ.

ಸೆಪ್ಟೆಂಬರ್ 17ರಂದು ರಾತ್ರಿ 7 ಗಂಟೆಗೆ ಅಪಘಾತ ನಡೆದಿತ್ತು, ಮರುದಿನ ಮುಂಜಾವ 3.15ರ ವೇಳೆಗೆ ಅರುಣ್ ಶರ್ಮಾ ದೆಹಲಿಯ ಆಸ್ಪತ್ರೆಗೆ ತಲುಪಿದ್ದ. ರಕ್ತದೊತ್ತಡ ತೀರಾ ಕಡಿಮೆ ಇತ್ತು. ಆಂತರಿಕ ರಕ್ತಸ್ರಾವವೂ ತೀವ್ರವಾಗಿತ್ತು. ಚೆಸ್ಟ್ ಟ್ಯೂಬ್ ಹಾಕಿದ ಕೆಲವೇ ಕ್ಷಣದಲ್ಲಿ ಲೀಟರುಗಟ್ಟಲೆ ರಕ್ತ ಹೊರಬಂದಿತು. ಆತ ಅದಾಗಲೇ 2.5 ಲೀಟರ್ ರಕ್ತ ಕಳೆದುಕೊಂಡಿದ್ದ ಎಂದಿದ್ದಾರೆ ಎಐಐಎಂಎಸ್ ತೀವ್ರನಿಗಾ ಘಟಕದ ಮುಖ್ಯಸ್ಥ ಡಾ.ಎಂ.ಸಿ.ಮಿಶ್ರಾ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನಿಮ್ಮ ಆಹಾರದಲ್ಲಿ ಕಿವಿ ಹಣ್ಣು ಸೇರಿಸಲು 5 ಕಾರಣಗಳು

ಕ್ರಿಸ್ಮಸ್ 2024: ಹೆಚ್ಚು ಖರ್ಚು ಮಾಡದೆ ಸೀಕ್ರೆಟ್ ಸಾಂಟಾ ಉಡುಗೊರೆ ಆಯ್ಕೆಗೆ ಇಲ್ಲಿದೆ ಸಲಹೆ

ತೂಕ ಇಳಿಸಿಕೊಳ್ಳಲು ಸರ್ಕಸ್‌ ಮಾಡುತ್ತಿರುವವರು ಈ ರೀತಿ ಮಾಡಿ

ಚಳಿಗಾಲದಲ್ಲಿ ಇಡ್ಲಿ ಹಿಟ್ಟು ಹುದುಗು ಬರಲು ಇಲ್ಲಿದೆ ಕೆಲ ಟಿಪ್ಸ್‌

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚಳಿಗಾಲದ ಆಹಾರಗಳು

Show comments