Webdunia - Bharat's app for daily news and videos

Install App

ಕಾಫಿಗೆ ಗರ್ಭಾಶಯ ಕ್ಯಾನ್ಸರ್ ತಡೆಯುವ ಶಕ್ತಿ?

Webdunia
WD
ಅತಿ ಹೆಚ್ಚು ಕಾಫಿ ಕುಡಿಯುವ ಚಟವಂಟಿಸಿಕೊಂಡಿರುವ ಮಹಿಳೆಯರಿಗೆ ಗರ್ಭಕೋಶದ ಕ್ಯಾನ್ಸರ್ ತಗುಲುವ ಸಂಭವಗಳು ಕಡಿಮೆ ಎಂದು ಜಪಾನಿನ ಅಧ್ಯಯನ ಒಂದು ಹೇಳಿದೆ.

ಜಪಾನ್ ಆರೋಗ್ಯ ಸಚಿವಾಲಯದ ನೇತೃತ್ವದಲ್ಲಿ ನಡೆಸಲಾಗಿರುವ ಈ ಅಧ್ಯಯನಕ್ಕಾಗಿ 40ರಿಂದ 69ರ ಹರೆಯದ ಸುಮಾರು 54 ಸಾವಿರ ಮಹಿಳೆಯರನ್ನು ಆಯ್ದುಕೊಳ್ಳಲಾಗಿತ್ತು. ಸುಮಾರು 15 ವರ್ಷಗಳ ಸುದೀರ್ಘ ಕಾಲದ ಪರಿವೀಕ್ಷಣೆಯ ಮೂಲಕ ನಡೆಸಲಾಗಿರುವ ಅಧ್ಯಯನ ಕಾಲದಲ್ಲಿ 117 ಮಹಿಳೆಯರು ಈ ರೋಗಕ್ಕೆ ತುತ್ತಾಗಿದ್ದರು.

ಈ ಮಹಿಳೆಯರು ಕಾಫಿ ಕುಡಿಯುವ ಪ್ರಮಾಣಕ್ಕನುಸಾರವಾಗಿ ಜಪಾನಿನ ರಾಷ್ಟ್ರೀಯ ಕ್ಯಾನ್ಸರ್ ಕೇಂದ್ರವು ಅವರನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿತ್ತು.

ದಿನಒಂದರ ಮೂರು ಕಪ್‌ಗಿಂತಲೂ ಅಧಿಕ ಪ್ರಮಾಣದಲ್ಲಿ ಕಾಫಿ ಕುಡಿಯುವ ಮಹಿಳೆಯರಲ್ಲಿ, ದಿನವೊಂದರ ಎರಡು ಕಪ್‌ಗಳಿಗಿಂತ ಕಡಿಮೆ ಕಾಫಿ ಕುಡಿಯುವವರಿಗಿಂತ, ಗರ್ಭಾಶಯ ಕ್ಯಾನ್ಸರ್ ತಗುಲುವ ಪ್ರಮಾಣ ಶೇ.60ರಷ್ಟು ಕಡಿಮೆ ಎಂದು ಅಧ್ಯಯನ ತಿಳಿಸಿದೆ.

ಕಾಫಿಯು ಇನ್ಸುಲಿನ್ ಮಟ್ಟವನ್ನು ಕಡಿಮೆಗೊಳಿಸಬಹುದಾಗಿದ್ದು ಗರ್ಭಾಶಯ ಕ್ಯಾನ್ಸರಿನ ಸಂಭಾವ್ಯತೆಯನ್ನು ಇಳಿಸುತ್ತದೆ ಎಂದು ಸಂಶೋಧಕರು ಅಭಿಪ್ರಾಯಿಸಿದ್ದಾರೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಎಲ್ಲರೂ ಇಷ್ಟಪಟ್ಟು ತಿನ್ನುವ ರಾಂಬೂಟನ್ ಹಣ್ಣಿನ ಆರೋಗ್ಯ ಪ್ರಯೋಜನ ಇಲ್ಲಿದೆ

ರಾತ್ರಿ ನಿದ್ರೆ ಬರುವವರೆಗೂ ಬೆಡ್ ಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದರೆ ಇದನ್ನು ತಪ್ಪದೇ ಓದಿ

ರಕ್ತ ತುಂಬಲು ಕೊಡುವ ಗುಳಿಗೆಗಳಿಂದ ಏನು ಅಡ್ಡಪರಿಣಾಮವಿದೆ ಎಂದು ತಿಳಿದುಕೊಳ್ಳಿ

ಪೇಪರ್ ಅವಲಕ್ಕಿಯಿಂದ ಆರೋಗ್ಯಕ್ಕೆ ಸಿಗುವ ಸಿಗುವ ಪ್ರಯೋಜನಗಳು ಇಲ್ಲಿದೆ

ಆಯುರ್ವೇದದ ಪ್ರಕಾರ ಬಿಸಿ ನೀರಿಗೆ ಜೇನು ತುಪ್ಪ ಸೇರಿಸಿ ಸೇವಿಸಬಾರದು ಯಾಕೆ ಗೊತ್ತಾ

Show comments