ಪತಿಯ ಮಧುಮೇಹವೂ ಗರ್ಭಪಾತಕ್ಕೆ ಕಾರಣ

Webdunia
ND
ಪುರುಷರ ಸಕ್ಕರೆ ಕಾಯಿಲೆ ಹೊಂದಿದ್ದಲ್ಲಿ ಇದು ಅವರ ವೀರ್ಯದ ಗುಣಮಟ್ಟದ ಪ್ರಭಾವ ಬೀರುವುದಲ್ಲದೆ, ಇವರಿಂದ ಗರ್ಭಧರಿಸಿರುವ ಗರ್ಭವತಿಯರು, ಗರ್ಭ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಅಧ್ಯಯನ ಒಂದು ತಿಳಿಸಿದೆ.

ಸಂಶೋಧಕ ಡ ಾ| ಕಾನ್ ಮಾಲಿಡಿಸ್ ಅವರು "ಹೆಚ್ಚೆಚ್ಚು ಯುವ ವಯಸ್ಸಿನ ವ್ಯಕ್ತಿಗಳಲ್ಲಿ ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಪತ್ತೆಯಾಗುತ್ತಿರುವುದು ಅಪಾಯಕಾರಿಯಾಗದಿದೆ" ಎಂದು ಅಭಿಪ್ರಾಯಿಸಿದ್ದಾರೆ. "ಇದರ ಪರಿಣಾಮವಾಗಿ ಸಂತಾನೋತ್ಪತ್ತಿ ಶಕ್ತ ವಯಸ್ಸಿನಲ್ಲಿ ಡಯಾಬಿಟಿಸ್ ಹೊಂದಿರುವವರ ಸಂಖ್ಯೆ ಆಧಿಕವಾಗಿದೆ" ಎಂದೂ ಅವರು ಸೇರಿಸಿದರು.

ಸಹ ಅಧ್ಯಯನಕಾರ ಪ್ರೊಫೆಸರ್ ನೀಲ್ ಮ್ಯಾಕ್ ಕ್ಲೂರ್ ಅವರು ವ್ಯಕ್ತಿಯ ಅರೋಗ್ಯವು ಆತನ ಫಲವತ್ತತೆಯ ಮೇಲೆ ಖಂಡಿತವಾಗಿ ಪ್ರಭಾವ ಬೀರುತ್ತದೆ ಎಂದು ಹೇಳಿದ್ದಾರೆ.

ಅವರು "ಬಹಳ ಸಮಯದಿಂದ ಸಾಮಾನ್ಯ ಅರೋಗ್ಯವು ಪುರುಷರ ಫಲವತ್ತತೆಯ ಮೇಲೆ ಪ್ರಭಾವ ಬೀರುತ್ತದೆ ಎಂಬ ಅಂಶವನ್ನು ನಿರ್ಲಕ್ಷಿಸಲಾಗಿತ್ತು" ಎಂದಿದ್ದಾರೆ. "ಕೆಲವೇ ತಪಸಣಾ ಕೇಂದ್ರಗಳು ಬಂಜೆತನದ ಕುರಿತು ಮಹಿಳೆಯರತ್ತಲೇ ಗಮನ ಕೇಂದ್ರೀಕರಿಸುವ ಜೊತೆಗೆ ಪುರುಷರ ಕುರಿತೂ ವಿಸ್ತೃತ ಮಾಹಿತಿ ಪಡೆಯುತ್ತವೆ" ಎಂಬ ಅಂಶವನ್ನು ಹೊರಗೆಡಹಿದ್ದಾರೆ.

ಇಂತಹ ವಿಭಾಗಗಳಲ್ಲಿ ದುಡಿಯುತ್ತಿರುವವರು ಪುರುಷರಿಗೂ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಮತ್ತು ಅವರು ಉತ್ತಮ ದೇಹ ರಚನೆ ಹಾಗು ಅರೋಗ್ಯವನ್ನು ಹೊಂದಿರುವರೆಂದು ದೃಢಪಡಿಸುವ ಮೂಲಕ ಯಶಸ್ವಿ ಗರ್ಭಧಾರಣೆಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು." ಎಂದು ಪ್ರೊಫೆಸರ್ ನೈಲ್ ಮ್ಯಾಕ್ ಕ್ಲೂರ್ ತಿಳಿಸಿದ್ದಾರೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಊಟವಾದ ತಕ್ಷಣ ವಾಕಿಂಗ್ ಮಾಡ್ತೀರಾ, ಹಾಗಿದ್ದರೆ ಇದನ್ನು ತಪ್ಪದೇ ಓದಿ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

Show comments