Daily Horoscope
✕

ಕಾಂಡೋಮ್ ಬೇಡ, ಲಸಿಕೆ ಸಾಕು

Webdunia
ಇನ್ನು ಮುಂದೆ ಗಂಡಸರಿಗೆ ಕಾಂಡೋಮ್ ಕಿರಿಕಿರಿ ಇಲ್ಲ. ಮೂರು ತಿಂಗಳಿಗೊಂದು ಲಸಿಕೆ ಹಾಕಿಸಿಕೊಂಡರೆ ಸಾಕು. ಅವರ ಲೈಂಗಿಕ ಸಂಗಾತಿಗಳು ಗರ್ಭಧರಿಸುವ ಸಾಧ್ಯತೆ ಇಲ್ಲ - ಇಂತಹ ಒಂದು ಲಸಿಕೆಗಾಗಿ ಮುಂಬೈ ವಿಜ್ಞಾನಿಗಳು ತೀವ್ರ ಸಂಶೋಧನೆ ನಡೆಸುತ್ತಿದ್ದಾರೆ.

ಅದು ಗರ್ಭ ನಿರೋಧಕ ಗುಳಿಗೆ ಅಥವಾ ಟ್ಯುಬೆಕ್ಟಮಿ ಶಸ್ತ್ರಕ್ರಿಯೆಯಾಗಿರಲಿ ಮಹಿಳೆಯರಿಗೆ ಎಂದಿಗೂ ಕಿರಿಕಿರಿಯ ವಿಚಾರ. ಪ್ರತಿ ಮೂರು ತಿಂಗಳಿಗೊಮ್ಮೆ ಈ ಲಸಿಕೆ ಹಾಕಿಸಿಕೊಂಡರೆ ಅದು ಅವರ ಸಂಗಾತಿಗಳ ಬೇಡದ ಗರ್ಭವನ್ನು ತಡೆಯುತ್ತದೆ ಎಂಬುದು ಸಂಶೋಧಕರ ಅಭಿಪ್ರಾಯ.

" ಇದು 80 ಕಿಲೋ ಡಾಲ್ಟನ್ ಹ್ಯೂಮನ್ ಸ್ಪರ್ಮ್ ಆಂಟಿಜೆನ್ ಅಥವಾ 80ಕೆಡಿಎಚ್ಎಸ್ಎ ಎಂಬ ಹೆಸರಿನ ಪ್ರೊಟೀನ್ ತಾತ್ಕಾಲಿಕವಾಗಿ ಫಲವತ್ತತೆಯನ್ನು ಇಲ್ಲವಾಗಿಸುತ್ತದೆ" ಎಂದು ವಿಜ್ಞಾನಿ ಡ ಾ| ಎ.ಬಂಡಿವ್ಡೇಕಾರ್ ಹೇಳಿದ್ದಾರೆ.

ಇದೀಗ ಪುರುಷರಿಗಾಗಿ ಇರುವ ಗರ್ಭನಿರೋಧಕಗಳು ಹಲವಾರು ಕುಂದುಕೊರತೆಗಳನ್ನು ಹೊಂದಿವೆ. ಕಾಂಡೋಮ್‌ಗಳನ್ನು ನೂರು ಪ್ರತಿಶತಃ ನಂಬುವಂತಿಲ್ಲ ಮತ್ತು ವ್ಯಾಸೆಕ್ಟಮಿ ಶಸ್ತ್ರಕ್ರಿಯೆ ಮಾಡಿಸಿಕೊಂಡರೆ ಮತ್ತೆ ಮಕ್ಕಳಾಗುವಂತೆಯೇ ಇಲ್ಲ.

ಮಾನವ ವೀರ್ಯಾಣುವಿನಿಂದ ಪ್ರತ್ಯೇಕಗೊಳಿಸಿರುವ ಕಣದಿಂದ ಹೊಸ ಲಸಿಕೆ ತಯಾರಿಸಿದ್ದು, ಇದು ತಾತ್ಕಾಲಿಕ ಷಂಡತನವನ್ನು ಮೂಡಿಸುತ್ತದೆ. ಮಕ್ಕಳು ಬೇಕೆಂದಾಗ ಮಕ್ಕಳನ್ನು ಹಡೆಯಬಹುದಾಗಿದ್ದು ಇದು ತುಂಬ ಸರಳ ಹಾಗೂ ಪರಿಣಾಮಕಾರಿ ಎಂದು ವಿಜ್ಞಾನಿಗಳು ಅಭಿಪ್ರಾಯಿಸಿದ್ದಾರೆ.

ಈ ಲಸಿಕೆಯನ್ನು ಇದೀಗಾಗಲೆ, ಇಲಿಗಳು ಮತ್ತು ಚಿಕ್ಕ ಮಂಗಗಳ ಮೇಲೆ ಪ್ರಯೋಗಿಸಲಾಗಿದೆ. ಪ್ರಸ್ತುತ ದೊಡ್ಡ ಮಂಗಗಳ ಮೇಲೆ ಪ್ರಯೋಗಿಸಲಾಗುತ್ತಿದ್ದು, ಮಾನವರು ಇದನ್ನು ಪ್ರಯತ್ನಿಸಲು ಇನ್ನೂ ಕನಿಷ್ಠ ಎರಡು ವರ್ಷಗಳು ಬೇಕು ಎಂದು ಬಂಡಿವ್ಡೇಕಾರ್ ಹೇಳಿದ್ದಾರೆ.
ಇದರ ಬಳಕೆ ಅತಿ ಸುಲಭ ಹಾಗೂ ಯಾವುದೇ ಅಡ್ಡಪರಿಣಾಮಗಳಿಲ್ಲದ ಕಾರಣ ಹೆಚ್ಚಿನ ಪುರುಷರು ಈ ಲಸಿಕೆಯ ಆಯ್ಕೆಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಆದರೆ, ಇದು ಗರ್ಭನಿರೋಧವಾದರೂ ಕೂಡ, ಎಚ್ಐವಿ ಮತ್ತು ಇತರ ಲೈಂಗಿಕ ಖಾಯಿಲೆಗಳನ್ನು ತಡೆಯುವಲ್ಲಿ ಪರಿಣಾಮ ಬೀರದು ಎಂಬುದು ಈ ಲಸಿಕೆಯ ಕುರಿತು ವ್ಯಕ್ತವಾಗಿರುವ ಟೀಕೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮಕ್ಕಳ ದೇಹವನ್ನು ಬೆಚ್ಚಗಿಡುವ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ 5 ಅತ್ಯುತ್ತಮ ಆಹಾರಗಳು

ಚಳಿಗಾಲದಲ್ಲಿ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಉಪಾಯ

ಮಹಿಳೆಯರು ಆಕರ್ಷಕ ಸೊಂಟ ಬೇಕೆಂದರೆ ಯಾವ ಯೋಗಾಸನ ಮಾಡಬೇಕು

ಚರ್ಮದ ತುರಿಕೆಯಿಂದ ಕಪ್ಪು ಕಲೆಗಳು ಬೀಳುತ್ತಿವೆಯೇ, ಶಾಶ್ವತವಾಗಿ ಉಳಿಯದಂತೆ ತಡೆಯಲು ಇಲ್ಲಿದೆ ಟಿಪ್ಸ್

ಫ್ರಿಡ್ಜ್ನಲ್ಲಿ ಹಾಲು ಎಷ್ಟು ದಿನ ತಾಜಾವಾಗಿರುತ್ತದೆ, ಹಾಲನ್ನು ಕೆಡದಂತೆ ಕಾಪಾಡುವ ಸೂಕ್ತ ವಿಧಾನಗಳು