Webdunia - Bharat's app for daily news and videos

Install App

ತುಂಬ ನೀರುಕುಡಿಯುವುದು ಅಷ್ಟೊಂದು ಉಪಯುಕ್ತವಲ್ಲ?

Webdunia
ND
ನೀವು ಯಾರ ಬಳಿಯಾದರೂ ನಿಮ್ಮ ಆರೋಗ್ಯದ ಕುರಿತ ಸಣ್ಣಪುಟ್ಟ ದೂರುಗಳನ್ನು ಹೇಳಿಕೊಂಡಿರೋ, ತಟ್ಟಂತ ಬರುವ ಸಲಹೆ 'ಚೆನ್ನಾಗಿ ನೀರುಕುಡಿಯಿರಿ'. ಆದರೆ ಸಾಕಷ್ಟು ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವ ಅಂತಹ ಪ್ರಯೋಜನಗಳೇನು ಇಲ್ಲ ಅಂತ ಅಧ್ಯಯನವೊಂದು ಹೇಳಿದೆ.
ಉತ್ತಮ ಆರೋಗ್ಯಕ್ಕೆ, ತ್ವಚೆಯ ಕಾಂತಿಗೆ, ಆಹಾರ ಜೀರ್ಣವಾಗಲು ದಿನಕ್ಕೆ ಎಂಟುಗ್ಲಾಸು ನೀರು ಕುಡಿಯಬೇಕು ಎಂಬುದು ಸಾಮಾನ್ಯ ನಂಬುಗೆ. ಕೆಲವು ವೈದ್ಯರೂ ನೀರು ಕುಡಿಯುವ ಸಲಹೆಯನ್ನೇ ಮಾಡುತ್ತಾರೆ.

ಆದರೆ, ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ಕಂಡುಕೊಂಡಿರುವ ಪ್ರಕಾರ ದಿನವೊಂದರ ಎಂಟು ಗ್ಲಾಸು ನೀರು ಕುಡಿಯುವುದು ಆರೋಗ್ಯ ಸುಧಾರಣೆಯಲ್ಲಿ ಅಂತಾ ಮಹತ್ವದ್ದೇನು ಮಾಡುವುದಿಲ್ಲವಂತೆ.

ಹೆಚ್ಚು ನೀರು ಕುಡಿಯುವುದರಿಂದ ಲಭಿಸುವ ಅನುಕೂಲಗಳ ಕುರಿತ ಸ್ಫಷ್ಟ ಪುರಾವೆ ಏನೂ ಇಲ್ಲ. ಅದೇ ರೀತಿ ಪ್ರಯೋಜನ ಇಲ್ಲದೆ ಇರುವ ಕುರಿತೂ ಪುರಾವೆಗಳಿಲ್ಲ ಎಂಬುದಾಗಿ ಸಂಶೋಧಕರಾದ ಡ ಾ| ಡಾನ್ ನೆಗಾಯ್ನಾ ಮತ್ತು ಡ ಾ| ಸ್ಟಾನ್ಲಿ ಗೋಲ್ಡ್‌ಪಾರ್ಬ್ ಜರ್ನಲ್ ಆಫ್ ದ ಅಮೆರಿಕನ್ ಸೊಸೈಟಿ ಆಫ್ ನೆಫ್ರಾಲಜಿಯ ಇತ್ತೀಚಿನ ಆವೃತ್ತಿಯಲ್ಲಿ ಬರೆದಿದ್ದಾರೆ.

ಸಾಮಾನ್ಯ ಆರೋಗ್ಯವಂತ ವ್ಯಕ್ತಿಯೊಬ್ಬ ಇದೀಗ ಶಿಫಾರಸು ಮಾಡಲಾಗಿರುವ ಎಂಟು ಗ್ಲಾಸು ನೀರನ್ನು ಪ್ರತಿನಿತ್ಯ ಸೇವಿಸುವ ಅಗತ್ಯವಿದೆ ಎಂಬದನ್ನು ಯಾವುದೇ ಒಂದು ಅಧ್ಯಯನ ಪುಷ್ಠೀಕರಿಸಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅದಲ್ಲದೆ, ದಿವಸಕ್ಕೆ ಎಂಟು ಗ್ಲಾಸು ನೀರು ಕುಡಿಯಬೇಕು ಎಂಬ ಸಲಹೆ ಎಲ್ಲಿಂದ ಬಂದಿದೆ ಎಂಬುದೂ ಸಹ ಸ್ಪಷ್ಟವಿಲ್ಲ ಎಂದು ಲೇಖನದಲ್ಲಿ ಹೇಳಲಾಗಿದೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನವೂ ಬಿಸಿಬಿಸಿ ಅನ್ನದ ಜೊತೆ ಉಪ್ಪಿನಕಾಯಿ ತಿನ್ನುತ್ತಿದ್ದರೆ ಏನಾಗುತ್ತದೆ ಗೊತ್ತಾ

ಮಳೆಗಾಲದಲ್ಲೂ ಫಿಟ್ನೆಸ್ ಕಾಪಾಡಲು ಇಲ್ಲಿದೆ ಕೆಲ ಸರಳ ವಿಧಾನಗಳು

ಫ್ಯಾಟಿ ಲಿವರ್ ಇದ್ರೆ ನಿಮಗೆ ಈ ಅನುಭವವಾಗುತ್ತದೆ..ಏನು ಮಾಡಬೇಕು ಇಲ್ಲಿ ನೋಡಿ ವಿವರ

ಎಲ್ಲರೂ ಇಷ್ಟಪಟ್ಟು ತಿನ್ನುವ ರಾಂಬೂಟನ್ ಹಣ್ಣಿನ ಆರೋಗ್ಯ ಪ್ರಯೋಜನ ಇಲ್ಲಿದೆ

ರಾತ್ರಿ ನಿದ್ರೆ ಬರುವವರೆಗೂ ಬೆಡ್ ಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದರೆ ಇದನ್ನು ತಪ್ಪದೇ ಓದಿ

Show comments