Webdunia - Bharat's app for daily news and videos

Install App

ಭರ್ತಿ ಎಂಟುಗಂಟೆ ನಿದ್ರಿಸಿ, ಸ್ಲಿಮ್ ಆಗಿ

Webdunia
PTI
ಸಕತ್ತಾಗಿ ರಾತ್ರಿವೇಳೆ ಎಂಟು ಗಂಟೆ ನಿದ್ದೆ ಮಾಡಿ. ಇದ್ರಿಂದ ನಿಮ್ಮ ಮನಸ್ಸಿಗೂ ನೆಮ್ಮದಿ ಮತ್ತು ಹೀಗೆ ರಾತ್ರಿ ಪೂರ್ಣ ಎಂಟು ಗಂಟೆಯ ನಿದ್ರೆ ನಿಮ್ಮ ಸೊಂಟದ ಸುತ್ತಳತೆ ಏರುತ್ತಲೇ ಹೋಗುವುದನ್ನು ತಡೆಯಬಲ್ಲುದಂತೆ.

ಡಯಟೂ, ಡ್ರೈ ಚಪಾತಿ, ಟ್ಯಾಬ್ಲೆಟ್ಟು, ವಾಕೂ ಅಂತ ಸುಸ್ತಾಗಿಯೂ ನಿಮ್ಮ ದೇಹ ಉಬ್ಬುತ್ತಲೇ ಹೋಗುತ್ತಿದೆಯಾದರೆ ಇದನ್ನೂ ಯಾಕೆ ಒಮ್ಮೆ ಟ್ರೈ ಮಾಡಬಾರದೂ? ಹೇಗಿದ್ದರೂ, ಭಾರ ಎತ್ತುವ, ಬೆವರು ಸುರಿಸುವ, ಬಾಯಿ ಕಟ್ಟುವ ಕಷ್ಟ ಇಲ್ವಲ್ಲ?

ರಾತ್ರಿ ಎಂಟು ಗಂಟೆಗಳ ಕಾಲ ನಿದ್ರಿಸುವುದು ತೂಕ ಹೆಚ್ಚಾಗದಿರುವ ರಹಸ್ಯವಂತೆ! ಹಾಗಂತ ವಿಜ್ಞಾನಿಗಳು ಹೇಳಿದ್ದಾರೆ.

ಎಂಟು ಗಂಟೆ ಶಾಂತವಾಗಿ ನಿದ್ರಿಸಬೇಕೆಂದು ವಿಜ್ಞಾನಿಗಳು ಹೇಳಿದ್ದಾರೆಂದು ಗಡದ್ದಾಗಿ ಊದ್ದಕ್ಕೆ ಸೋಂಬೇರಿಯಂತೆ ಒಂಭತ್ತು ಗಂಟೆಗಿಂತಲೂ ಹೆಚ್ಚು ನಿದ್ರಿಸಿದಿರೋ, ಕಾರ್ಯ ಕೆಟ್ಟೀತು ಜೋಕೆ. ರಾತ್ರಿಯಲ್ಲಿ ಆರುಗಂಟೆಗಿಂತಲೂ ಕಡಿಮೆ ನಿದ್ರಿಸುವ ಕೊರತೆ ನಿದ್ರಿಗರು, ಮತ್ತು ಒಂಭತ್ತು ಗಂಟೆಗಿಂತಲೂ ಹೆಚ್ಚು ಅವಧಿಯಲ್ಲಿ ನಿದ್ರಿಸುವ ಅಧಿಕ ನಿದ್ರಿಗರು, ಪ್ರತೀ ರಾತ್ರಿ ಏಳು ಅಥವಾ ಎಂಟು ಗಂಟೆ ನಿದ್ರಿಸುವವರಿಗಿಂತ ಹೆಚ್ಚು ತೂಕ ಹೊಂದಿರುತ್ತಾರೆ ಎಂಬುದು ಅಧ್ಯಯನದಿಂದ ಗೊತ್ತಾಗಿದೆ.

ರಾತ್ರಿ ಸಾಕಷ್ಟು ನಿದ್ರಿಸಿಲ್ಲದವರು, ಶಿಫಾರಸ್ಸು ಮಾಡಿರುವಷ್ಟು ಹೊತ್ತು ನಿದ್ರಿಸಿರುವವರಿಗಿಂತ ಹೆಚ್ಚೂಕಮ್ಮಿ ಎರಡು ಕೆಜಿ ತೂಕ ಅಧಿಕ ಪಡೆಯುತ್ತಾರೆ ಎಂಬುದಾಗಿ ಸಂಶೋಧನೆ ಹೇಳಿದೆ.

ಅಂತೆಯೇ ಕುಂಭಕರ್ಣಗಳಂತೆ ನಿದ್ರೆಯೇ ದೈವ ಎಂಬ ತತ್ವವನ್ನು ಅಳವಡಿಸಿಕೊಂಡು ಭಾರೀ ನಿದ್ರೆ ಮಾಡುವವರು ಆರುವರ್ಷಗಳಲ್ಲಿ, ತುಲನಾತ್ಮಕ 1.58 ಕೆ.ಜಿ ತೂಕ ಹೆಚ್ಚು ಪಡಕೊಂಡಿದ್ದಾರೆ. ರಾತ್ರಿ ಇಡಿ ನಿದ್ರೆ ಬರದೆ ಚಡಪಡಿಸುವವರು ಈ ಎಂಟು ಗಂಟೆಯ ಸುಖೀ ನಿದ್ರೆಯವರಿಗಿಂತ ಐದು ಕೆಜಿ ಹೆಚ್ಚು ಪಡೆಯುತ್ತಾರೆ. ಆರು ವರ್ಷಗಳ ಅವಧಿಯಲ್ಲಿ ಈ ಪ್ರಮಾಣದಲ್ಲಿ ಅಂತವರು ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಶೇ.35ರಷ್ಟು ಹೆಚ್ಚಾಗಿದೆ.

ನಿದ್ರೆ ಮತ್ತು ತೂಕಕ್ಕೆ ಅದೇನು ಸಂಬಂಧ ಅಂತ ಕೇಳುವಿರಾದರೆ, ನಿದ್ರೆಯು ಹಾರ್ಮೋನುಗಳ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ವಿಶೇಷವಾಗಿ ಹಸಿವು ಮತ್ತು ಊಟದ ಬಳಿಕ ಹೊಟ್ಟೆಉಬ್ಬರಿಸುವ ಸಮಸ್ಯೆ ಇರುವಂತರ ಮೇಲೆ ನಿದಿರಾ ಡಯಟ್ ಉತ್ತಮ ಪರಿಣಾಮ ಬೀರುತ್ತದೆ ಎಂದು ಈ ಸಂಶೋಧಕರು ಹೇಳಿದ್ದಾರೆ.

ನಿದ್ರೆ ಮತ್ತು ಬೊಜ್ಜಿನ ಸಂಬಂಧದ ಕುರಿತು ಅಧ್ಯಯನ ನಡೆಸಿರುವ ಕೆನಡಾದ ಜೀನ್ ಪಿಲಿಫ್ ಟಾಪುಟ್ ಹೇಳುವ ಪ್ರಕಾರ, ಹೆಚ್ಚು ಅಥವಾ ಕಡಿಮೆ ನಿದ್ರೆಯು ಭವಿಷ್ಯದಲ್ಲಿ ದೇಹ ತೂಕದ ಮೇಲೆ ಪರಿಣಾಮ ಬೀರುತ್ತದೆ ಮತ್ತು ವಯಸ್ಕರಲ್ಲಿ ಕೊಬ್ಬು ಉತ್ಪತ್ತಿ ಮಾಡುತ್ತದೆ. ಹಾಗಾಗಿ ಜೀವನದಲ್ಲಿ ಆರೋಗ್ಯಕರ ನಿದ್ರಾ ಕ್ರಮವನ್ನು ಅಳವಡಿಸಿಕೊಳ್ಳುವ ಮೂಲಕ ಬೊಜ್ಜಿನ ಸಮಸ್ಯೆಯಿಂದ ದೂರ ಇರಬಹುದು ಎಂಬುದಾಗಿ ಅವರು ಹೇಳುತ್ತಾರೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

Show comments