Webdunia - Bharat's app for daily news and videos

Install App

ಪರಿಸರ ರಕ್ಷಣೆ: ಆರೋಗ್ಯಕ್ಕೆ ಕೈಗನ್ನಡಿ

Webdunia
ಶುಕ್ರವಾರ, 26 ಅಕ್ಟೋಬರ್ 2007 (17:31 IST)
ಇಂದು ಪರಿಸರ ಮಾಲಿನ್ಯ ಅನೇಕ ರೋಗರುಜಿನಗಳಿಗೆ ಕಾರಣವಾಗಿದೆ. ಪರಿಸರ ಮಾಲಿನ್ಯದಿಂದ ಸಂಭವಿಸುವಅನೇಕ ಕಾಯಿಲೆಗಳನ್ನು ತಪ್ಪಿಸಲು ಸೂಕ್ತ ಪರಿಸರ ನಿರ್ವಹಣೆಯೇ ಮುಖ್ಯ ಕೀಲಿಕೈ. ನಮ್ಮ ಆರೋಗ್ಯದ ಮೇಲೆ ಪರಿಸರ ಉಂಟು ಮಾಡುವ ಪ್ರಭಾವ ಒಂದೆರಡಲ್ಲ.

ಕೆಲವು ತಪ್ಪಿಸಬಹುದಾದ ಪರಿಸರ ಕಾರಣಗಳಿಗಾಗಿ 13 ದಶಲಕ್ಷ ಜನರು ಸಾವಿನಕೂಪಕ್ಕೆ ಬೀಳುತ್ತಿದ್ದಾರೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪರಿಸರಮಾಲಿನ್ಯದ ಅಪಾಯಗಳನ್ನು ತಪ್ಪಿಸುವ ಮೂಲಕ ಪ್ರತಿವರ್ಷ ನಾಲ್ಕು ದಶಲಕ್ಷ ಜನರ ಪ್ರಾಣವನ್ನು ಉಳಿಸಬಹುದಾಗಿದೆ.

ಒಳಾಂಗಣ ವಾಯುಮಾಲಿನ್ಯ

ವಿಶ್ವಾದ್ಯಂತ ಮೂರು ಶತಕೋಟಿ ಜನರು ಇಂಧನ ಅಗತ್ಯಗಳಿಗಾಗಿ ಜೈವಿಕ ಇಂಧನಗಳು(ಸೌದೆ, ಸಗಣಿ ಮತ್ತು ಕೃಷಿ ಉಳಿಕೆಗಳು) ಮತ್ತು ಕಲ್ಲಿದ್ದಲನ್ನು ಅವಲಂಬಿಸುತ್ತಾರೆ. ಸೌದೆಯನ್ನು ತೆರೆದ ಬೆಂಕಿಯ ಮೂಲಕ ಅಥವಾ ಸಾಂಪ್ರದಾಯಿಕ ಸ್ಟೌವ್‌ಗಳ ಮೂಲಕ ಉರಿಸುವುದರಿಂದ ಅತ್ಯಧಿಕ ಮಟ್ಟದ ಒಳಾಂಗಣ ವಾಯುಮಾಲಿನ್ಯ ಉಂಟಾಗುತ್ತದೆ.

ಒಳಾಂಗಣ ಹೊಗೆಯು ಆರೋಗ್ಯಕ್ಕೆ ಹಾನಿಮಾಡುವ ಮಾಲಿನ್ಯಗಳಾದ ಸಣ್ಣ ಕಣಗಳು ಮತ್ತು ಕಾರ್ಬನ್ ಮಾನಾಕ್ಸೈಡ್‌ನಿಂದ ಕೂಡಿದೆ.. ವಿಶ್ವ ಆರೋಗ್ಯ ವರದಿ 2002ರ ಪ್ರಕಾರ ಒಳಾಂಗಣ ವಾಯುಮಾಲಿನ್ಯ ಜಗತ್ತಿನ ಕಾಯಿಲೆಗಳ ಹೊರೆಯಲ್ಲಿ ಶೇ.2.7ರಷ್ಟು ಕಾರಣವಾಗಿದೆ.

ಪರಿಶುದ್ಧ ಗಾಳಿ ಮಾನವ ಆರೋಗ್ಯಕ್ಕೆ ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ. ಆದಾಗ್ಯೂ, ವಾಯುಮಾಲಿನ್ಯ ಆರೋಗ್ಯದ ಮೇಲೆ ಬೆದರಿಕೆಯೊಡ್ಡುವುದನ್ನು ಮುಂದುವರಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಹೊರಾಂಗಣ ಮತ್ತು ಒಳಾಂಗಣ ವಾಯುಮಾಲಿನ್ಯದಿಂದ ಪ್ರತಿವರ್ಷ 2 ದಶಲಕ್ಷ ಅಕಾಲಿಕ ನಿಧನ ಸಂಭವಿಸುತ್ತಿದೆ.

ಸಾವಪ್ಪುವ ಮಕ್ಕಳು
ಮಕ್ಕಳು ಭವಿಷ್ಯದ ಕುಡಿಗಳು. ಸುರಕ್ಷಿತ, ಆರೋಗ್ಯ ಮತ್ತು ಸ್ವಚ್ಛ ಪರಿಸರವು ಮಕ್ಕಳ ಬೆಳವಣಿಗೆಗೆ ಮೂಲಭೂತ ಅಗತ್ಯಗಳಲ್ಲಿ ಸೇರಿದೆ. ಪರಿಸರ ಅಪಾಯಗಳಿಂದ ಮಕ್ಕಳು ಗಂಭೀರ ಆರೋಗ್ಯ ಅಪಾಯಗಳಿಗೆ ತುತ್ತಾಗುತ್ತಿದ್ದಾರೆ.ಪರಿಸರ ಅಪಾಯದ ಅಂಶಗಳಿಗೆ ಬಡತನ ಮತ್ತು ಅಪೌಷ್ಠಿಕತೆಯೂ ತಮ್ಮ ಕಾಣಿಕೆ ಸಲ್ಲಿಸುತ್ತವೆ.

ಪ್ರತಿವರ್ಷ 5 ವರ್ಷಕ್ಕಿಂತ ಕಡಿಮೆ ಪ್ರಾಯದ ಮೂರುದಶಲಕ್ಷ ಮಕ್ಕಳು ಪರಿಸರ ಸಂಬಂಧಿತ ಕಾಯಿಲೆಗಳಿಂದ ಸಾಯುತ್ತಿರುವುದು ಪರಿಸರ ಮಾಲಿನ್ಯ ಚಾಚಿರುವ ಕರಾಳಹಸ್ತಕ್ಕೆ ಸಾಕ್ಷಿಯಾಗಿದೆ. ಉಸಿರಾಟದ ಸೋಂಕುಗಳು 5 ವರ್ಷಕ್ಕಿಂತ ಕೆಳಗಿನ ಪ್ರಾಯದ ಅಂದಾಜು 2ದಶಲಕ್ಷ ಮಕ್ಕಳನ್ನು ಬಲಿತೆಗೆದುಕೊಳ್ಳುತ್ತಿವೆ.

ಅತಿಸಾರದಿಂದ ಪ್ರತಿವರ್ಷ 2 ದಶಲಕ್ಷ ಮಕ್ಕಳು ಸಾವಪ್ಪುತ್ತಿವೆ. ಶೇ. 90ರಷ್ಟು ಅತಿಸಾರದ ಸಾವುಗಳು ಜಲಮಾಲಿನ್ಯ ಮತ್ತು ಅನೈರ್ಮಲ್ಯ ಮುಂತಾದ ಪರಿಸರ ಸ್ಥಿತಿಗತಿಗಳಿಂದ ಸಂಭವಿಸುತ್ತಿವೆ. ಪ್ರತಿವರ್ಷ ಒಂದು ದಶಲಕ್ಷ ಮಕ್ಕಳು 1998ರಲ್ಲಿ ಮಲೇರಿಯ ಮಾರಿಗೆ ಬಲಿಯಾಗಿದ್ದಾರೆ. ಅವುಗಳಲ್ಲಿ ಶೇ. 90ರಷ್ಟು ಮಲೇರಿಯಾ ಪ್ರಕರಣಗಳಿಗೆ ಪರಿಸರದ ಅಂಶಗಳು ಕಾರಣವಾಗಿವೆ.

ಹವಾಮಾನ ಬದಲಾವಣೆಯು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಬೆದರಿಕೆಯೊಡ್ಡಿದೆ. ಇತ್ತೀಚೆಗೆ ಅಂತರಸರ್ಕಾರಿ ಸಮಿತಿಯೊಂದು ಹವಾಮಾನ ಬದಲಾವಣೆ ಬಗ್ಗೆ ವರದಿ ಬಿಡುಗಡೆ ಮಾಡಿದ್ದು, ಹವಾಮಾನ ಬದಲಾವಣೆಗೆ ಮಾನವನ ಕಾಣಿಕೆಯೂ ಸೇರಿದೆ ಎಂದು ಹೇಳಿದೆ.

ಹವಾಮಾನ ವೈವಿಧ್ಯ ಮತ್ತು ಬದಲಾವಣೆಯು ಬಿಸಿಗಾಳಿ. ಪ್ರವಾಹ ಮತ್ತು ಬರಗಳ ಮೂಲಕ ಸಾವು, ನೋವು, ರೋಗ, ರುಜಿನಗಳನ್ನು ತರಬಲ್ಲವು. ಜತೆಗೆ ಬದಲಾದ ಹವೆಗೆ ಅನೇಕ ಕಾಯಿಲೆಗಳು ಸಂವೇದನಾಶೀಲವಾಗಿವೆ. ಅವುಗಳಲ್ಲಿ ಮಲೇರಿಯಾ, ಡೆಂಗ್ಯೂ, ಅಪೌಷ್ಠಿಕತೆ ಮತ್ತು ಅತಿಸಾರ ಕೂಡ ಸೇರಿದೆ.

ಭೂಮಿಯ ಶೇ.70ರಷ್ಟು ಮೇಲ್ಮೈ ಪ್ರದೇಶವನ್ನು ಆವರಿಸಿರುವ ನೀರು ನಮ್ಮ ಗೃಹದಲ್ಲಿ ಲಭ್ಯವಿರುವ ಅಮೂಲ್ಯ ನೈಸರ್ಗಿಕ ಸಂಪನ್ಮೂಲಗಳಲ್ಲಿ ಒಂದಾಗಿದೆ. ನೀರಿನ ಮೂಲವಿಲ್ಲದಿದ್ದರೆ ಜೀವಜಗತ್ತು ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ. ಈ ಸತ್ಯವನ್ನು ಮಾನವಜೀವಿಗಳು ಗುರುತಿಸಿದ್ದರೂ, ನಮ್ಮ ನದಿ, ಕೆರೆ, ಸಾಗರಗಳನ್ನು ಮಲಿನಗೊಳಿಸುವ ಮೂಲಕ ನಾವು ನಿಧಾನಗತಿಯಲ್ಲಿ ಸೂಕ್ಷ್ಮಜೀವಿಗಳು, ಸಸ್ಯಗಳ ಸಾವಿಗೆ ಮುನ್ನುಡಿ ಬರೆದಿದ್ದೇವೆ.

ಇಂದು ನಮಗೆ ಶುದ್ಧ ಗಾಳಿ, ಜಲ, ಆಹಾರ ಸೇವನೆ ಕನಸಿನ ಮಾತಾಗಿರುವುದು ನಮ್ಮ ದೌರ್ಬಾಗ್ಯವೆನ್ನದೇ ವಿಧಿಯಿಲ್ಲ. ಪರಿಸರ ರಕ್ಷಕ ಮಾನವಜೀವಿಯೇ ಪರಿಸರಭಕ್ಷಕನಾಗಿ ಜೀವಜಗತ್ತನ್ನು ಸಾವಿನಕೂಪಕ್ಕೆ ತಳ್ಳುತ್ತಿರುವುದು ದುರದೃಷ್ಟದ ಸಂಗತಿ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments