Select Your Language

Notifications

webdunia
webdunia
webdunia
webdunia

ನಿದ್ರಾಹೀನತೆಯಿಂದ ಅನಾರೋಗ್ಯ, ಬೊಜ್ಜು

ನಿದ್ರಾಹೀನತೆಯಿಂದ ಅನಾರೋಗ್ಯ, ಬೊಜ್ಜು
WD
ಅನಾರೋಗ್ಯ ಹಾಗೂ ತೂಕ ಹೆಚ್ಚಳ, ಕೆಲವೊಮ್ಮೆ ಬೊಜ್ಜಿಗೂ ನಿದ್ರಾಹೀನತೆ ಕಾರಣವಾಗುತ್ತದೆ ಎಂದು ಅಮೆರಿಕದಲ್ಲಿರುವ ಭಾರತೀಯ ಮನಶಾಸ್ತ್ರಜ್ಞರಾದ ಮರೋಶ್ ಮೋತಿವಾಲ ಹೇಳಿದ್ದಾರೆ.

ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸೆಮೆಲ್ ಸಂಸ್ಥೆಯ ಮನಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಹಾಗೂ ಅವರ ಸಹೋದ್ಯೋಗಿಗಳು ನಡೆಸಿದ ಅಧ್ಯಯನದ ಮೂಲಕ, ದೇಹದ ಶಕ್ತಿಯ ಸಮತೋಲನ ಹಾಗೂ ಹಸಿವು ಶೂಲೆಯನ್ನು ನಿಯಂತ್ರಿಸುವ ಎರಡು ಹಾರ್ಮೋನುಗಳನ್ನು ಪತ್ತೆ ಹಚ್ಚಿದ್ದಾರೆ.

ಈ ಅಧ್ಯಯನಕ್ಕಾಗಿ 38 ಪುರುಷರನ್ನು ಆಯ್ದುಕೊಳ್ಳಲಾಗಿತ್ತು. ಇವರಲ್ಲಿ 14 ಮಂದಿ ನಿದ್ರಾಹೀನರು ಮತ್ತು 24 ಮಂದಿ ಆರೋಗ್ಯವಂತರು. ಅತಿಹೆಚ್ಚು ನಿದ್ರಾಹೀನತೆಯು ಈ ಎರಡು ಹಾರ್ಮೋನುಗಳಿಗೆ ಭಂಗವುಂಟು ಮಾಡುತ್ತದೆ ಎಂಬುದನ್ನು ಪತ್ತೆ ಮಾಡಲಾಗಿದೆ. ಗ್ರೆಲಿನ್ ಮತ್ತು ಲೆಪ್ಟಿನ್ ಈ ಎರಡು ಹಾರ್ಮೋನುಗಳು.

ಹೊಟ್ಟೆಯೊಳಗಿರುವ ಗ್ರೆಲಿನ್ ಎಂಬ ಹಾರ್ಮೋನು ನಮ್ಮ ಹಸಿವನ್ನು ಹೆಚ್ಚಿಸುತ್ತದೆ. ಲೆಪ್ಟಿನ್ ದೇಹದ ತೂಕದ ಮೇಲೆ ಪ್ರಭಾವ ಬೀರುತ್ತದೆ. ಇವುಗಳು ಕೊಬ್ಬಿನ ಸೆಲ್‌ಗಳಲ್ಲಿ ಇರುತ್ತವೆ. ಅಲ್ಲದೆ ಇದು ಕೊಬ್ಬು ಶೇಖರಣೆಯ ಪ್ರಮಾಣದ ಕುರಿತು ಮೆದುಳಿನಲ್ಲಿರುವ ಹೈಪೋತಲಮಸ್‌ಗೆ ಸೂಚನೆಗಳನ್ನು ರವಾನಿಸುತ್ತದೆ.

ಲೆಪ್ಟಿನ್ ಹಾರ್ಮೋನ್ ದೇಹದೊಳಗೆ ಕ್ಯಾಲೋರಿ ಕೊರತೆಯನ್ನು ಸೂಚಿಸುತ್ತದೆ ಮತ್ತು ಹಸಿವನ್ನು ಹೆಚ್ಚಿಸುತ್ತದೆ. ಆರೋಗ್ಯಕರವಾಗಿ ನಿದ್ರಿಸುವವರು ಮತ್ತು ನಿದ್ರಾಹೀನರ ಈ ಎರಡು ಹಾರ್ಮೋನುಗಳ ಮಟ್ಟವನ್ನು ರಾತ್ರಿಪೂರಾ ವಿವಿಧ ಹಂತಗಳಲ್ಲಿ ಅಳೆಯಲಾಯಿತು.

ಆರೋಗ್ಯವಂತರು ಮತ್ತು ನಿದ್ರಾಹೀನರಿಬ್ಬರಲ್ಲೂ, ಲೆಪ್ಟಿನ್ ಮಟ್ಟವು ಒಂದೇ ತೆರನಾಗಿದ್ದರೂ, ನಿದ್ರಾಹೀನರಲ್ಲಿ ಗ್ರೆಲಿನ್ ಮಟ್ಟವು ಶೇ. 30ರಷ್ಟು ಕಡಿಮೆ ಇದೆ ಎಂದು ಅಧ್ಯಯನ ಕಂಡುಕೊಂಡಿದೆ. ಗ್ರೆಲಿನ್ ಮಟ್ಟದಲ್ಲಿನ ಕೊರತೆಯು ತೂಕಹೆಚ್ಚಳವನ್ನು ತಡೆಯುತ್ತದೆ ಎಂದು ಕಂಡು ಬಂದರೂ, ಗ್ರೆಲಿನ್‌ನಲ್ಲಿ ಹೆಚ್ಚಳವು ಹಸಿವನ್ನು ಹೆಚ್ಚಿಸುತ್ತದೆ.

ಮನಶಾಸ್ತ್ರಜ್ಞ ಮೋತಿವಾಲ ಅವರು ತನ್ನ ಅಧ್ಯಯನವನ್ನು ಇತರ ಅಧ್ಯಯನಗಳಿಗೆ ಹೋಲಿಸಿದ್ದು, ನಿದ್ರೆಯ ಕೊರತೆಯು ಗ್ರೆಲಿನ್ ಹೆಚ್ಚಳ ಮತ್ತು ಲೆಪ್ಟಿನ್ ಇಳಿಕೆ- ಈ ಎರಡೂ ಸಹ ಹಸಿವನ್ನು ಹೆಚ್ಚಿಸುತ್ತದೆ. ಇದರಿಂದ ಸಹಜವಾಗೆ ತಿನ್ನುವ ಪ್ರವೃತ್ತಿ ಹೆಚ್ಚಳಗೊಂಡು ದೇಹದ ತೂಕ ಹೆಚ್ಚುತ್ತದೆ.

ಮುಂಬೈಯಲ್ಲಿ ಜನಿಸಿದ ಮೋತಿವಾಲ ಅವರು ಮನಶಾಸ್ತ್ರದಲ್ಲಿ ಬಿಎ ಪದವಿಯನ್ನು 1997ರಲ್ಲಿ ಪಡೆದಿದ್ದರು. ಅವರು ತಮ್ಮ ಕ್ಲಿನಿಕಲ್ ಇಂಟರ್ನಿಶಿಫ್ಅನ್ನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಮಾಡಿದ್ದರು.


Share this Story:

Follow Webdunia kannada