Webdunia - Bharat's app for daily news and videos

Install App

ಹೌದು, ನಾನು ಕುಮಾರಸ್ವಾಮಿ ಎರಡನೇ ಪತ್ನಿ: ರಾಧಿಕಾ

Webdunia
PR
ನನ್ನ ಗಂಡ 'ಅವರೇ' ಎಂದು ಮೊನ್ನೆ ಮೊನ್ನೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದ್ದ ಚಿತ್ರನಟಿ ರಾಧಿಕಾ ಈಗ ಮತ್ತಷ್ಟು ಸ್ಪಷ್ಟವಾಗಿದ್ದಾರೆ. ಹೌದು, ನನ್ನ ಗಂಡ ಎಚ್.ಡಿ. ಕುಮಾರಸ್ವಾಮಿ. ನಾಲ್ಕು ವರ್ಷಗಳ ಹಿಂದೆಯೇ ನನ್ನನ್ನು ಮದುವೆಯಾಗಿದ್ದರು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಎಚ್‌ಡಿಕೆ-ರಾಧಿಕಾ ಪುತ್ರಿ 'ಶಮಿಕಾ ಸ್ವಾಮಿ' ಫೋಟೋ ನೋಡಿದ್ರಾ?

ಈ ಹಿಂದೆಂದೂ ಅವರು, ತಾನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಪತ್ನಿ ಎಂದು ಹೇಳಿಕೊಂಡಿರಲಿಲ್ಲ. ಮಂಗಳೂರಿನ ತನ್ನ ಮನೆಯಲ್ಲಿ ಗಂಡ-ಹೆಂಡತಿಯ ಫೋಟೋವನ್ನು ಗೋಡೆಯಲ್ಲಿ ತೂಗು ಹಾಕಿದ್ದರೂ, ಈ ಫೋಟೋಗಳನ್ನು ಕಾಪಿ ಮಾಡಲು ಬಿಡದಷ್ಟು ಕಟ್ಟುನಿಟ್ಟಾಗಿದ್ದರು. ಆದರೆ ಈಗ ಬದಲಾಗಿದ್ದಾರೆ. ತಾನು ಕುಮಾರಸ್ವಾಮಿ ಪತ್ನಿ ಎಂದು ಆಗಾಗ ಹೇಳಿಕೊಂಡು ಸಮಾಜದಲ್ಲಿ ಸ್ಥಾನ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ.

ಹೀಗೆಂದು ಈ ಬಾರಿ ಸ್ಪಷ್ಟವಾಗಿ ಹೇಳಿರುವುದು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಗೆ. 'ನಾನು ಶ್ರೀಮತಿ ರಾಧಿಕಾ ಕುಮಾರಸ್ವಾಮಿ. ನಾಲ್ಕು ವರ್ಷಗಳ ಹಿಂದೆಯೇ ನನ್ನನ್ನು ಎಚ್.ಡಿ. ಕುಮಾರಸ್ವಾಮಿಯವರು ಮದುವೆಯಾಗಿದ್ದರು. ನಮಗೆ ಶಮಿಕಾ ಎಂಬ ಹೆಣ್ಣು ಮಗುವೂ ಇದೆ. ಮಗುವಿಗೆ ಇದೇ ಮಂಗಳವಾರ (ನವೆಂಬರ್ 23) ಒಂದು ವರ್ಷ ತುಂಬಿದೆ' ಎಂದಿದ್ದಾರೆ.

ಈಗೇನೂ ಹೇಳಲ್ಲ: ಕುಮಾರಸ್ವಾಮಿ
25 ವರ್ಷಕ್ಕೂ ಹಿಂದೆ ಅನಿತಾರನ್ನು (ಈಗ ಜೆಡಿಎಸ್ ಶಾಸಕಿ) ಮದುವೆಯಾಗಿರುವ ಕುಮಾರಸ್ವಾಮಿ, ಅವರಿಂದ ಒಂದು ಗಂಡು ಮತ್ತು ಹೆಣ್ಣು ಮಗುವನ್ನು ಪಡೆದಿದ್ದಾರೆ. ತನ್ನ ಎರಡನೇ ಪತ್ನಿ, ನಟಿ ರಾಧಿಕಾ ಮೂಲಕ ಕುಮಾರಸ್ವಾಮಿ ಪಡೆದಿರುವುದು ಮೂರನೇ ಮಗು.
PR

ಈ ಬಗ್ಗೆ ಪ್ರತಿಕ್ರಿಯೆಗಾಗಿ ಸ್ವತಃ ಮಾಜಿ ಮುಖ್ಯಮಂತ್ರಿಯನ್ನು ಸಂಪರ್ಕಿಸಿದಾಗ ಯಾವುದೇ ಉತ್ತರವನ್ನು ನೀಡಲು ನಿರಾಕರಿಸಿದ್ದಾರೆ.

ಈ ವಿಚಾರದ ಬಗ್ಗೆ ಈಗ ನಾನು ಯಾವುದೇ ಪ್ರತಿಕ್ರಿಯೆಯನ್ನು ನೀಡುವುದಿಲ್ಲ. ಅಗತ್ಯ ಬಿದ್ದಾಗ ನಾನು ಇದರ ಕುರಿತು ಮಾತನಾಡುತ್ತೇನೆ ಎಂದಷ್ಟೇ ಹೇಳಿದ್ದಾರೆ.

ನಟನೆಗೆ ಗಂಡ ಅಡ್ಡಿಯಾಗಿಲ್ಲ...
ಪ್ರಸಕ್ತ 'ದೇವತುಲು' (ದೇವತೆಗಳು) ತೆಲುಗು ಚಿತ್ರದಲ್ಲಿ ನಟಿಸುತ್ತಿರುವ ರಾಧಿಕಾರನ್ನು ಕುಮಾರಸ್ವಾಮಿ ಯಾವತ್ತೂ ನಿರ್ಬಂಧಿಸಿದವರಲ್ಲ. ಹಾಗೆಂದು ಸ್ವತಃ ನಟಿ ಹೇಳಿಕೊಂಡಿದ್ದಾರೆ.

ಸಾಮಾನ್ಯವಾಗಿ ಕನ್ನಡ ಚಿತ್ರನಟಿಯರು ಮದುವೆಯಾದ ನಂತರ ನಟಿಸುವುದು ಅಪರೂಪ. ನಿಮಗಿದು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದಾಗ, 'ನನ್ನನ್ನು ಅವರು ಯಾವತ್ತೂ ಅದು ಮಾಡಬೇಡ, ಇದು ಮಾಡಬೇಡ ಎಂದು ತಡೆದವರಲ್ಲ' ಎಂದಿದ್ದಾರೆ.

ಈ ತೆಲುಗು ಚಿತ್ರವನ್ನು ನಿರ್ದೇಶಿಸುತ್ತಿರುವುದು 'ಆರುಂಧತಿ' ಖ್ಯಾತಿಯ ಕೋಡಿ ರಾಮಕೃಷ್ಣ. ಹಾಗಾಗಿ ನಿರೀಕ್ಷಿತವಾಗಿಯೇ ರಾಧಿಕಾ ಪುಳಕಗೊಂಡಿದ್ದಾರೆ. ಇಂತಹ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದಿದ್ದಾರೆ.

ಅಭಿಮಾನಿಗಳ ಪ್ರೋತ್ಸಾಹವೂ ಸಂತಸ ಕೊಟ್ಟಿದೆ. ಹಾಗಾಗಿ ನಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿರುವ ರಾಧಿಕಾ, ಆದಿತ್ಯ ನಾಯಕನಾಗಿರುವ 'ಈಶ್ವರ್' ಚಿತ್ರಕ್ಕೆ ಮತ್ತೆ ಚಾಲನೆ ನೀಡಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.

ಸೆಕ್ಸಿ ಪಾತ್ರ ಬೇಡ...
ಮುಂದಿನ ದಿನಗಳಲ್ಲಿ ನಾನು ನಟಿಸಲು ಸಿದ್ಧಳಿದ್ದೇನೆ. ಆದರೆ ಈ ಹಿಂದೆ ನಟಿಸಿರುವಂತಹ ಸೆಕ್ಸೀ ಪಾತ್ರಗಳಲ್ಲಿ ಅಲ್ಲ. ಆ ವಯಸ್ಸೂ ನನ್ನದಲ್ಲ. ಹಾಗೆಂದು ಸಣ್ಣ ಪಾತ್ರಗಳಿಗೆ ಕರೆದರೆ ಖಂಡಿತಾ ಬರುವುದಿಲ್ಲ. ನನಗೆ ಹೊಂದಾಣಿಕೆಯಾಗುವ ಪಾತ್ರಗಳು ಬಂದರೆ ಮಾತ್ರ ನಟಿಸುತ್ತೇನೆ ಎಂದು ಹೇಳಿರುವ ರಾಧಿಕಾ, ಯಾವುದೇ ಹೀರೋಯಿನ್‌ಗೂ ನಾನು ಕಡಿಮೆಯಿಲ್ಲ ಎಂದಿದ್ದಾರೆ.

ಗರ್ಭಿಣಿಯಾಗಿದ್ದಾಗ ಸಾಕಷ್ಟು ಊದಿಕೊಂಡಿದ್ದರೂ ನಂತರದ ದಿನಗಳಲ್ಲಿ ಸತತ ಜಿಮ್ ಮಾಡುವ ಮೂಲಕ ತೂಕ ಇಳಿಸಿಕೊಂಡಿದ್ದೇನೆ. ಶೂಟಿಂಗ್ ಇರಲಿ, ಇಲ್ಲದೇ ಇರಲಿ, ನಾನು ನಿರಂತರವಾಗಿ ಜಿಮ್ ಮಾಡುತ್ತಿದ್ದೆ. ಹಾಗಾಗಿ ಫಿಗರ್ ಉಳಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

Arbaaz Khan: ಎರಡನೇ ಪತ್ನಿಯಿಂದ ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಬಾಲಿವುಡ್‌ನ ಈ ನಟ

Show comments