Select Your Language

Notifications

webdunia
webdunia
webdunia
webdunia

ಎಚ್‌ಡಿಕೆ-ರಾಧಿಕಾ ಪುತ್ರಿ 'ಶಮಿಕಾ ಸ್ವಾಮಿ' ಫೋಟೋ ನೋಡಿದ್ರಾ?

ಶಮಿಕಾ ಕೆ ಸ್ವಾಮಿ
, ಶುಕ್ರವಾರ, 19 ನವೆಂಬರ್ 2010 (16:37 IST)
PR
ತೌಳವ ಸುಂದರಿ ರಾಧಿಕಾ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಮದುವೆಯಾಗಿದ್ದಾರಂತೆ, ಅವರಿಗೆ ಇಬ್ಬರು ಮಕ್ಕಳಿವೆಯಂತೆ, ಲಂಡನ್‌ನಲ್ಲಿ ಹೆರಿಗೆ ಆಯ್ತಂತೆ, ಮಾರಿಷಸ್‌ಗೆ ಹೋದ್ರಂತೆ-- ಹೀಗೆ ಹತ್ತು ಹಲವು ಗಾಸಿಪ್ ಸುದ್ದಿಗಳನ್ನು ಓದಿದವರು ಅದನ್ನೆಲ್ಲ ಬರೀ ಗಾಸಿಪ್ ಅಂದುಕೊಳ್ಳಬೇಕಿಲ್ಲ. ಹೆಚ್ಚೂ ಕಡಿಮೆ ಹೌದೆಂಬಂತೆ ಸಾಕ್ಷಿಯಾಗಿರುವ ಮಗುವನ್ನು ತೋರಿಸಿ ರಾಧಿಕಾ ಒಪ್ಪಿಕೊಂಡಿದ್ದಾರೆ.

ಹೌದು, ನಾನು ರಾಜಕಾರಣಿಯೊಬ್ಬರನ್ನು ಮದುವೆಯಾಗಿರುವುದು ಹೌದು; ಮಗು ಆಗಿರುವುದು ಕೂಡ ನಿಜ. ಆದರೆ ಎರಡಲ್ಲ. ನಮಗಿರುವುದು ಒಂದೇ ಮಗು. ಮಗುವಿನ ಹೆಸರು 'ಶಮಿಕಾ ಕೆ. ಸ್ವಾಮಿ'. ಹೆಣ್ಣು ಮಗು, ಒಂದು ವರ್ಷ ಈಗಷ್ಟೇ ತುಂಬಿದೆ ಎಂದು ರಾಧಿಕಾ ಹೇಳಿದ್ದಾರೆ.

ಮಗುವನ್ನು ಲಂಡನ್‌ನಲ್ಲಿ ಬಿಟ್ಟಿದ್ದಾರೆ ಎಂಬ ತೇಲುತ್ತಿರುವ ಮಾತುಗಳಿಗೂ ಅವರು ಭಾವನಾತ್ಮಕವಾಗಿ ಉತ್ತರಿಸಿದ್ದಾರೆ. ಹಲವು ವರ್ಷಗಳಿಂದ ಮಡಿಲಲ್ಲಿ ಕಟ್ಟಿಕೊಂಡಿದ್ದ ನೋವುಗಳನ್ನು 'ಉದಯವಾಣಿ' ಪತ್ರಿಕೆಯೊಂದಿಗೆ ತೋಡಿಕೊಂಡಿದ್ದಾರೆ.
webdunia
PR

ಮಗುವನ್ನು ದೂರದ ದೇಶದಲ್ಲಿ ಬಿಟ್ಟಿದ್ದೇನೆ ಎಂಬ ಮಾತಿದೆ. ನೀವೇ ಹೇಳಿ, ಯಾವ ತಾಯಿಯಾದರೂ ತನ್ನ ಮಗುವನ್ನು ಎಲ್ಲೋ ಬಿಟ್ಟು ದೂರವಿರುತ್ತಾಳಾ? ಅದೆಲ್ಲ ಸುಳ್ಳು. ನಾನು ಬೆಂಗಳೂರು ಬಿಟ್ಟು ಎಲ್ಲೂ ಹೋಗಿಲ್ಲ. ಯಾವತ್ತಾದರೂ ಹೋದರೆ ಅದು ನನ್ನ ಮಂಗಳೂರಿನ ತೋಟಕ್ಕೆ. ಅಲ್ಲಿ ದೈವ-ದೇವರ ಕಾರ್ಯಗಳನ್ನು ಆಗಾಗ ಮಾಡಿಸುತ್ತಿರುತ್ತೇನೆ. ಅದು ಬಿಟ್ಟು ವಿದೇಶಕ್ಕೆ ಹೋಗಿ ನೆಲೆಸುವ ಅಥವಾ ಮಗುವನ್ನು ಬಿಡುವ ಗ್ರಹಚಾರ ನನಗೆ ಬಂದಿಲ್ಲ ಎಂದಿದ್ದಾರೆ.

ಮಾಧ್ಯಮಗಳಲ್ಲಿ ಬರುತ್ತಿರುವ ತರಹೇವಾರಿ ಸುದ್ದಿಗಳಿಗೆ ನಾನು ತಲೆ ಕೆಡಿಸಿಕೊಳ್ಳುತ್ತಿಲ್ಲ. ಚಿತ್ರರಂಗ ಎಂದ ಮೇಲೆ ಗಾಸಿಪ್ ಸಹಜ. ಆದರೂ ಕೆಲವೊಮ್ಮೆ ತೀರಾ ಕೆಟ್ಟದಾಗಿ ನಮ್ಮ ಬಗ್ಗೆ ಬಂದಾಗ ಬೇಸರವಾಗುತ್ತದೆ. ಅವನ್ನೆಲ್ಲ ಮರೆಸುವಂತೆ ನನ್ನನ್ನು 'ಅವರು' ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ನಾನು ತುಂಬಾ ಖುಷಿಯಲ್ಲಿದ್ದೇನೆ ಎಂದರು.

ಅಂದ ಹಾಗೆ ರಾಧಿಕಾ ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಭಿಮಾನಿಗಳ ಒತ್ತಾಸೆಗೆ ಮಣಿದು ಮತ್ತೆ ನಟಿಸುವ ಆಸೆ ಬಂದಿದೆಯಂತೆ. ಚಿತ್ರ ಯಾವುದೆಂದು ನಿರ್ಧಾರವಾಗಿಲ್ಲ. ಆದರೆ ನಾನಿನ್ನು ಎಕ್ಸ್‌ಪೋಸ್ ಮಾಡಲ್ಲ. ಆ ವಯಸ್ಸನ್ನು ಕಳೆದುಕೊಂಡಿದ್ದೇನೆ. ಆದರೆ ಅಭಿಮಾನಿಗಳನ್ನು ಕೈ ಬಿಡುವುದಿಲ್ಲ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತೇನೆ ಎಂದಿದ್ದಾರೆ.

ಈ ಚಿತ್ರವನ್ನು ಅವರದ್ದೇ ಸ್ವಂತ ಬ್ಯಾನರಿನಲ್ಲಿ ನಿರ್ಮಿಸಲಾಗುತ್ತಿದೆಯಂತೆ.

ಈ ನಡುವೆ ತೆಲುಗು ಚಿತ್ರವೊಂದರಲ್ಲಿ ರಾಧಿಕಾ ನಟಿಸಿದ್ದಾರೆ. ಇತ್ತೀಚೆಗಷ್ಟೇ ಅದರ ಚಿತ್ರೀಕರಣಕ್ಕೆ ಹೋಗಿದ್ದಾಗ ಅಭಿಮಾನಿಗಳು ಇನ್ನೂ ಇಟ್ಟಿರುವ ಪ್ರೀತಿ ಅವರ ಅರಿವಿಗೆ ಬಂದಿದೆ. ಹಾಗಾಗಿ ನಟಿಸಲೇಬೇಕೆಂದು ನಿರ್ಧರಿಸಿದ್ದಾರೆ.

Share this Story:

Follow Webdunia kannada