ಸಿನಿಮಾದವರ ಜೊತೆ ನಾ ಮದುವೆ ಆಗಲಾರೆ- ವರುಣ್ ಧವನ್
, ಬುಧವಾರ, 9 ಏಪ್ರಿಲ್ 2014 (09:35 IST)
ಒಂದು ಕಡೆ ನಟಿ ಇಲಿಯಾನ ಜೊತೆ ಬೆಂಗಳೂರಿನಲ್ಲಿನ ಸ್ಟಾರ್ ಹೋಟೆಲ್ ನಲ್ಲಿ ಮಧ್ಯರಾತ್ರಿ ತನಕ ಓಡಾಡಿಕೊಂಡಿದ್ದರು, ಮತ್ತೊಂದು ಕಡೆ ಸಿನಿಮಾ ರಂಗದಲ್ಲಿರುವ ಹುಡುಗಿಯನ್ನು ಮದುವೆಯಾಗುವ ಮಾತೇ ಇಲ್ಲ. ಡೇಟಿಂಗ್ ಕೂಡ ಮಾಡುವುದಿಲ್ಲ ಎಂದು ಹೇಳುತ್ತಿರುವ ನಟ ವರುಣ್ ಧವನ್. '
ಮೈನ್ ತೆರಾ ಹೀರೋ'ದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ವರುಣ್ ಸಿನಿಮಾ ನಟಿಯನ್ನು ಬಾಳಸಂಗಾತಿಯಾಗಿ ಮಾಡಿಕೊಳ್ಳಲಾರೆ ಎಂದಿದ್ದಾರೆ. ಬೇರೆ ಕ್ಷೇತ್ರದಲ್ಲಿರುವ ಹುಡುಗಿಯನ್ನು ಮದುವೆಯಾದರೆ ಆ ಕ್ಷೇತ್ರದ ಕುರಿತಾಗಿ ಹೆಚ್ಚು ಮಾತನಾಡುತ್ತಾಳಂತೆ.