ಪ್ರೀತಿ ಗೀತಿ ಇತ್ಯಾದಿ ಬಿಡುಗಡೆಯ ಹಾದಿಯಲ್ಲಿದೆ ...
, ಬುಧವಾರ, 9 ಏಪ್ರಿಲ್ 2014 (09:26 IST)
'
ಪ್ರೀತಿ ಗೀತಿ ಇತ್ಯಾದಿ' ಕನ್ನಡದ ಯಶಸ್ವಿ ನಿರ್ದೇಶಕ ಪವನ್ ವಡೆಯರ್ ನಟಿಸಿರುವ ಚಿತ್ರವಾಗಿದೆ. ಇದನ್ನು ನಿರ್ಮಿಸುತ್ತಿರುವವರು ವಿಜಯಕುಮಾರ್ . ಚಿತ್ರದ ನಿರ್ದೇಶನವನ್ನು ಮಾಡಿದವರು ನಿರ್ದೇಶಕ ವೀರೇಂದ್ರ . ಇವರು ಯೋಗರಾಜ್ ಭಟ್ಟರ ಶಿಷ್ಯ ಸಮೂಹದಲ್ಲಿ ಒಬ್ಬರಾಗಿದ್ದಾರೆ. ಮುಖ್ಯವಾಗಿ ಈ ಚಿತ್ರ ನಾಯಕ ಪವನ್ ಸಹ ಯೋಗರಾಜ್ ಭಟ್ಟರ ಗರಡಿಯಲ್ಲಿ ಮಿಂದೆದ್ದವರೇ ! ಈಗ ಈ ಚಿತ್ರದ ನಿರ್ದೇಶನ ಭಾಗ ಮುಕ್ತಾಯ ಗೊಂಡಿದೆ. ಗೋವಿಂದಾಯ ನಮಃ ಮತ್ತು ಗೂಗ್ಲಿಯಂತ ಶತದಿನಗಳ ಚಿತ್ರ ನೀಡಿರುವ ಪವನ್ ವಡೆಯರ್ ಅವರ ನಟನೆಯ ಮೊದಲ ಚಿತ್ರ ಇದು. ಪವನ್ ವಡೆಯರ್ ಅವರು ಈ ಸಿನೆಮಾದಲ್ಲಿ ಬಾರ್ ಒಂದರಲ್ಲಿ ಉದ್ಯೋಗಿ ಆಗಿ ಅಭಿನಯಿಸುತ್ತಿದ್ದಾರೆ.