Select Your Language

Notifications

webdunia
webdunia
webdunia
webdunia

ಭಟ್ಟರ ವಾಸ್ತುವಿಗೆ ರಚಿತ ಲೆಕ್ಕಾಚಾರ ...

ಭಟ್ಟರ ವಾಸ್ತುವಿಗೆ ರಚಿತ ಲೆಕ್ಕಾಚಾರ ...
, ಬುಧವಾರ, 9 ಏಪ್ರಿಲ್ 2014 (09:17 IST)
PR
ರಚಿತ ರಾಮ್ ಕನ್ನಡ ಮುದ್ದಾದ ಯಶಸ್ವಿ ನಟಿ. ಈಗ ಆಕೆಯೇ ಸ್ಟಾರ್ ಹೀರೋಗಳ ಮುದ್ದಿನ ಹುಡುಗಿ ಆಗಿದ್ದಾಳೆ. ಅದಕ್ಕೆ ಕಾರಣ ಏನು ಅಂದ್ರೆ ಆಕೆಯ ಪ್ರತಿಭೆ. ರಚಿತ ರಾಮ್ ಈಗ ಕನ್ನಡ ಸ್ಟಾರ್ ಹೀರೋಗಳ ಚಿತ್ರಗಳಲ್ಲಿ ನಟಿಸುತ್ತಿರುವ ಪ್ರತಿಭೆ.

ಇನ್ನು ಹೇಳುವುದಾದರೆ, ಆಕೆ ಉತ್ತಮ ಅವಕಾಶಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಾ ಸಾಗಿದ್ದಾಳೆ. ಈಗಿನ ಸುದ್ದಿ ಏನೆಂದರೆ, ರಚಿತ ಯೋಗರಾಜ್ ಭಟ್ ಅವರ ಕ್ಯಾಂಪಿಗೆ ಸೇರ್ಪಡೆ ಆಗಿದ್ದಾಳೆ. ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾಗಿರುವ ಯೋಗರಾಜ್ ಭಟ್ ಅವರ ಚಿತ್ರಗಳೆಂದರೆ ಸುಮ್ಮನೆ ಅಲ್ಲ.

webdunia
PR
ಅದಕ್ಕೊಂದು ವಿಶೇಷ ಕಥೆ ಇರುತ್ತದೆ, ಅದರ ಖದರ್ ಬೇರೆ ಇರುತ್ತದೆ. ಅಂತಹ ಭಟ್ಟರ ಚಿತ್ರದಲ್ಲಿ ನಟಿಸುವ ಸದವಕಾಶ ಈಕೆಯದ್ದಾಗಿದೆ ಎಂದೇ ಹೇಳ ಬಹುದಾಗಿದೆ. ಮುಖ್ಯವಾಗಿ ರಚಿತ ಈಗ ಪುನೀತ್ ರಾಜ್ ಕುಮಾರ್ ಅವರ ನಟನೆಯ ರಣವಿಕ್ರಮ ಚಿತ್ರಕ್ಕೆ ಆಯ್ಕೆ ಆಗಿದ್ದಾಳೆ. ಅಲ್ಲದೆ ಈಗ ಅಂಬರೀಶ ಚಿತ್ರದಲ್ಲೂ ಸಹ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾಳೆ.

ಇಂತಹ ಸಮಯದಲ್ಲಿ ಭಟ್ಟರ ವಾಸ್ತು ಪ್ರಕಾರಕ್ಕೆ ನಾಯಕಿ ಆಗುವ ಸುಯೋಗ ಆಕೆ ಪಾಲಿಗೆ ಒದಗಿದೆ ಎಂದೇ ಹೇಳಬಹುದಾಗಿದೆ. ಮುಖ್ಯವಾಗಿ ಈ ಚಿತ್ರದಲ್ಲಿ ಅಮೂಲ್ಯಾಗೆ ಅವಕಾಶ ಸಿಕ್ಕಿತ್ತು. ರಕ್ಷಿತ್ ಶೆಟ್ಟಿ ಜೋಡಿ ಆಗುವ ಅವಕಾಶವನ್ನು ರಚಿತ ಪಡೆದಿದ್ದಾಳೆ. ಅದಕ್ಕೆ ಕಾರಣ ಅಮೂಲ್ಯ ಈಗ ಮಳೆ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ. ಸಮಯದ ಹೊಂದಾಣಿಕೆ ಆಗದ ಕಾರಣ ಆಕೆ ಬದಲಾಗಿ ಆ ಜಾಗಕ್ಕೆ ರಚಿತ ಬಂದಿದ್ದಾಳೆ.

Share this Story:

Follow Webdunia kannada