ಉಪೇಂದ್ರ ರಿಮೇಕ್ ಪಾರ್ಟಿ ಅಲ್ವಂತೆ, ನಂಬ್ತೀರಾ?
ಕನ್ನಡ ಚಿತ್ರರಂಗದ ಹಲವು ಪ್ರಥಮಗಳಿಗೆ, ವಿಶಿಷ್ಟತೆಗಳಿಗೆ, ವಿಚಿತ್ರಗಳಿಗೆ ಕಾರಣ ನಿರ್ದೇಶಕ ಉಪೇಂದ್ರ. ಇದರಲ್ಲಿ ಎರಡನೇ ಮಾತೇ ಇಲ್ಲ. ಹಾಗೆಂದು ಅವರು ಮಾಡಿಕೊಂಡು ಬಂದಿರುವ ರಿಮೇಕ್ ಪಾಲಿಸಿಗಳನ್ನೂ ಒಪ್ಪಿಕೊಳ್ಳಬಹುದೇ? ಕೊಂಚ ಹಿಂದೆ ಮುಂದೆ ನೋಡಬೇಕಾಗುತ್ತದೆ, ಅಲ್ಲವೇ? ಆದರೆ ಉಪ್ಪಿ ಮಾತ್ರ ಹಿಂದೆ ಮುಂದೆ ನೋಡಿಲ್ಲ, ನಾನು ರಿಮೇಕ್ ಪಾರ್ಟಿ ಅಲ್ವೇ ಅಲ್ಲ ಎಂದು ಸಾರಿ ಬಿಟ್ಟಿದ್ದಾರೆ.ರಿಯಲ್ ಸ್ಟಾರ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಉಪ್ಪಿ ನಾಯಕನಾಗಿರುವ 'ಗಾಡ್‌ಫಾದರ್' ಬಿಡುಗಡೆ ಸಂದರ್ಭದಲ್ಲೇ (ಜುಲೈ 27) ಇಂತಹದ್ದೊಂದು ಮಾತು ಹೊರ ಬಿದ್ದಿದೆ."
ನಿಮ್ಮ ಮುಂದಿನ ಚಿತ್ರವೂ ತಮಿಳಿನ ರಿಮೇಕ್ ಅಲ್ಲವೇ?" ಎಂದಷ್ಟೇ 'ಬೆಂಗಳೂರು ಮಿರರ್' ಪ್ರಶ್ನಿಸಿತ್ತು. ಇದಕ್ಕೆ ಉಪೇಂದ್ರ ಕೊಟ್ಟ ಉತ್ತರ ಏನು ಗೊತ್ತಾ? ಇಲ್ಲಿದೆ ಓದಿಕೊಳ್ಳಿ:"
ಬೆನ್ನು ಬೆನ್ನಿಗೆ ರಿಮೇಕ್ ಚಿತ್ರಗಳಲ್ಲೇ ನಟಿಸುತ್ತಿರುವಂತೆ ಕಾಣುತ್ತಿದೆ. ಆದರೆ ಅದೇ ನಿಜವಲ್ಲ. ತಮಿಳಿನ 'ಕಾಂಚನ' ಕಥೆ ತುಂಬಾ ಭಿನ್ನವಾಗಿದ್ದುದರಿಂದ ಅದರ ರಿಮೇಕ್ 'ಕಲ್ಪನಾ'ದಲ್ಲಿ ನಟಿಸಲು ಒಪ್ಪಿಕೊಂಡೆ. ಹಾಗೆಂದು ನಾನು ರಿಮೇಕ್ ಕಡೆಯಿದ್ದೇನೆ ಎಂದರ್ಥವಲ್ಲ. ವಿಭಿನ್ನ ಕಥೆಗಳಿಂದಷ್ಟೇ ನಾನು ರಿಮೇಕ್ ಆಫರುಗಳನ್ನು ಒಪ್ಪಿಕೊಂಡಿದ್ದೇನೆ"ಇದು ನಿಜವೇ ಉಪ್ಪಿ? ಉಪೇಂದ್ರ ನಿಜಕ್ಕೂ ರಿಮೇಕ್ ಪಾರ್ಟಿ ಅಲ್ಲವೇ? ನೀವೇ ನಿರ್ಧರಿಸಿ, ಅದಕ್ಕೂ ಮೊದಲು ಇಲ್ಲೇ ಕೆಳಗೆ ಕೊಟ್ಟಿರುವ ಪಟ್ಟಿಯ ಮೇಲೊಮ್ಮೆ ಕಣ್ಣಾಡಿಸಿ. 'ಪ್ರೀತ್ಸೆ'ಯಿಂದ ಆರಂಭವಾದ ಅವರ ರಿಮೇಕ್ ಯಾನ 'ಕಲ್ಪನಾ'ವರೆಗೆ ಹೇಗೆಲ್ಲ ಸಾಗಿ ಬಂದಿದೆ ಅನ್ನೋದನ್ನು ನೋಡಿ. ಆಗ ನಿಜ ಸಂಗತಿ ಯಾವುದೆಂದು ಗೊತ್ತಾಗುತ್ತದೆ. ಆ ರಿಮೇಕ್ ಚಿತ್ರಗಳಲ್ಲಿನ ಯಾವ ವಿಭಿನ್ನ ಕಥೆಗಾಗಿ ಉಪೇಂದ್ರ ಅವುಗಳನ್ನು ಒಪ್ಪಿಕೊಂಡರು ಅನ್ನೋದನ್ನೂ ಪ್ರೇಕ್ಷಕರು ನಿರ್ಧರಿಸಬಹುದು.ಒಟ್ಟು ಚಿತ್ರಗಳು: 32 ರಿಮೇಕ್ ಚಿತ್ರಗಳು: 18 ಸ್ವಮೇಕ್ ಚಿತ್ರಗಳು: 14 ಇವು ರಿಮೇಕ್ ಚಿತ್ರಗಳು.... 1)
ಪ್ರೀತ್ಸೆ - ಢರ್2)
ನಾನು ನಾನೇ - ರಾಜಾ ಹಿಂದೂಸ್ತಾನಿ3)
ನಾಗರಹಾವು - ಬಾಜಿಗರ್4)
ರಕ್ತಕಣ್ಣೀರು - ರಕ್ತಕಣ್ಣೀರ್5)
ಕುಟುಂಬ - ಗ್ಯಾಂಗ್‌ಲೀಡರ್6)
ಗೋಕರ್ಣ - ಅಣ್ಣಾ ಮಲೈ7)
ಗೌರಮ್ಮ - ನುವ್ವು ನಾಕು ನೆಚ್ಚಾವು8)
ಉಪ್ಪಿದಾದ ಎಂಬಿಬಿಎಸ್ - ಮುನ್ನಾಭಾಯಿ ಎಂಬಿಬಿಎಸ್9)
ತಂದೆಗೆ ತಕ್ಕ ಮಗ - ದೇವರ್ ಮಗನ್10)
ಐಶ್ವರ್ಯಾ - ಮನ್ಮಥುಡು11)
ಪರೋಡಿ - ಕ್ರಾಂತಿವೀರ್12)
ಅನಾಥರು - ಪಿತಾಮಗನ್13)
ಬುದ್ಧಿವಂತ - ನಾನ್ ಅವನ್ ಇಲ್ಲೈ14)
ದುಬೈ ಬಾಬು - ದುಬೈ ಸೀನು15)
ರಜನಿ - ಕೃಷ್ಣ16)
ಶ್ರೀಮತಿ - ಐತ್ರಾಝ್17)
ಗಾಡ್‌ಫಾದರ್ - ವರಲಾರು (ಈ ವಾರ ಬಿಡುಗಡೆ)18)
ಕಲ್ಪನಾ - ಕಾಂಚನ (ಬಿಡುಗಡೆಯಾಗಿಲ್ಲ)ಇವು ಸ್ವಮೇಕ್ ಚಿತ್ರಗಳು.... 1)
ಎ2)
ಉಪೇಂದ್ರ3)
ಎಚ್‌ಟುಓ4)
ಸೂಪರ್ ಸ್ಟಾರ್5)
ಹಾಲಿವುಡ್6)
ಓಂಕಾರ7)
ನ್ಯೂಸ್8)
ಆಟೋಶಂಕರ್9)
ಮಸ್ತಿ10)
ಲವಕುಶ11)
ಸೂಪರ್12)
ಆರಕ್ಷಕ13)
ಕಠಾರಿ ವೀರ ಸುರಸುಂದರಾಂಗಿ14)
ಟೋಪಿವಾಲಾ (ಚಿತ್ರೀಕರಣದಲ್ಲಿದೆ)