Select Your Language

Notifications

webdunia
webdunia
webdunia
webdunia

ಉಪೇಂದ್ರ ಆಡಿಯೋ ಬಿಡುಗಡೆಯಲ್ಲಿ 'ಸೂಪರ್' ಡ್ರಾಮಾ

ಉಪೇಂದ್ರ ಆಡಿಯೋ ಬಿಡುಗಡೆಯಲ್ಲಿ 'ಸೂಪರ್' ಡ್ರಾಮಾ
PR
ಉಪೇಂದ್ರ ಅಂದ ಮೇಲೆ ಅಲ್ಲಿ ಗಿಮಿಕ್‌ಗಳು ಇರಲೇಬೇಕೆಂದು ಭಾವಿಸಿದಂತಿದೆ. ಇದಕ್ಕೆ ಶುಕ್ರವಾರ ನಡೆದ 'ಸೂಪರ್' ಆಡಿಯೋ ಸಮಾರಂಭವೂ ಸಾಕ್ಷಿಯಾಯಿತು. ಇಲ್ಲಿ ಆತಂಕಕ್ಕೆ ಕಾರಣವಾದದ್ದು ಚಿತ್ರದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮತ್ತು ಮಧು ಬಂಗಾರಪ್ಪ ನಡುವಿನ ಗಲಾಟೆ.

ಆಡಿಯೋ ಬಿಡುಗಡೆ ಸಂದರ್ಭದಲ್ಲಿ ರಾಕ್‌ಲೈನ್ ವೆಂಕಟೇಶ್, ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಉಪೇಂದ್ರ ಅವರಿಗೆ ನೀಡಲಾಗಿದ್ದ ಆಡಿಯೋ ಆಲ್ಬಂ ಪ್ಯಾಕೆಟ್ ಖಾಲಿಯಾಗಿತ್ತು. ಇದರಿಂದ ರೊಚ್ಚಿಗೆದ್ದ ರಾಕ್‌ಲೈನ್, ಮಧು ಬಂಗಾರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಬ್ಬರ ನಡುವೆ ಸಾಕಷ್ಟು ವಾಗ್ವಾದಗಳು ನಡೆದವು. ಪ್ರತ್ಯಾರೋಪಗಳು ನಡೆದವು. ಹೊಡೆದಾಟ ಮಾತ್ರ ಬಾಕಿ ಎಂಬಷ್ಟು ಪರಿಸ್ಥಿತಿ ವಿಕೋಪಕ್ಕೂ ಹೋಯಿತು.

ಇದೇ ಹೊತ್ತಿನಲ್ಲಿ ಅತ್ತ ಉಪ್ಪಿಯ ಗೆಳೆಯ ಲೋಕಿ ಸೆಕ್ಯುರಿಟಿಯೊಬ್ಬನನ್ನು ಕಳ್ಳತನದ ಆರೋಪದ ಮೇಲೆ ರೆಡ್‌ಹ್ಯಾಂಡಾಗಿ ಹಿಡಿದರು. ತನ್ನ ಗೆಳೆಯರು ಆಡಿಯೋ ಸಿಡಿಗಾಗಿ ದುಂಬಾಲು ಬಿದ್ದಿದ್ದರಿಂದ ತಾನು ಈ ರೀತಿ ಕಳ್ಳತನ ಮಾಡಿದ್ದೆ ಎಂದು ಸೆಕ್ಯುರಿಟಿ ಹೇಳಿಕೊಂಡ. ಕೆಲ ಹೊತ್ತಿನಲ್ಲಿ ಗೊಂದಲಗಳೆಲ್ಲ ನಿವಾರಣೆಯಾಗಿ, ಎಲ್ಲರೂ ಸಮಾಧಾನಗೊಂಡರು.

ಬಳಿಕ ರಾಘವೇಂದ್ರ ರಾಜ್‌ಕುಮಾರ್ ಉಪಸ್ಥಿತಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಆಡಿಯೋ ಬಿಡುಗಡೆ ಮಾಡಿದರು.

ನಂತರ ತಿಳಿದು ಬಂದ ವಿಚಾರವೆಂದರೆ ಈ ಗೊಂದಲಗಳೆಲ್ಲ ಪೂರ್ವ ನಿಯೋಜಿತವೆಂದು. ನೆರೆದಿದ್ದವರಲ್ಲಿ ಕುತೂಹಲ ಹುಟ್ಟಿಸಲು ಇಂತಹ ನಾಟಕವನ್ನು ಮಾಡಲಾಗಿತ್ತು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸುದೀಪ್ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಉಳಿದಂತೆ ಪ್ರಿಯಾಂಕಾ ಉಪೇಂದ್ರ, ಉಪ್ಪಿ ಹೆತ್ತವರು, ಉಪ್ಪಿ ಸಹೋದರ, ಸೂರಪ್ಪ ಬಾಬು, ರಮೇಶ್ ಯಾದವ್, ಅಶೋಕ್ ಕಶ್ಯಪ್, ಇಮ್ರಾನ್, ನಿರ್ಮಾಪಕ ಮುನಿರತ್ನ, ಸಾಧುಕೋಕಿಲಾ ಸೇರಿದಂತೆ ಚಿತ್ರರಂಗದ ನೂರಾರು ಗಣ್ಯರು ಪಾಲ್ಗೊಂಡಿದ್ದರು.

Share this Story:

Follow Webdunia kannada