ರಜನಿಕಾಂತ್‍ಗಾಗಿ ಶಾರೂಖ್-ದೀಪಿಕಾ ಸ್ಪೆಷಲ್ ಡಾನ್ಸ್
ಮುಂಬೈ , ಬುಧವಾರ, 24 ಜುಲೈ 2013 (14:59 IST)
ಸೂಪರ್ಸ್ಟಾರ್ ರಜನಿಕಾಂತ್ ಗೌರವಕ್ಕಾಗಿ ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಸ್ಪೆಷಲ್ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.ತಲೈವರ್ ಟ್ರಿಬ್ಯೂಟ್ (ಲುಂಗಿ ಡಾನ್ಸ್) ಟೈಟಲ್ ಹಾಡನ್ನು ರಾಪರ್ ಹನಿ ಸಿಂಗ್ ಹಾಡಿದ್ದಾರೆ. ಇದು ಆಗಸ್ಟ್ 9ರಂದು ತೆರೆಕಾಣಲಿರುವ ಚೆನ್ನೈ ಎಕ್ಸ್ಪ್ರೆಸ್ ಭಾಗ ಎಂದುಕೊಂಡರೆ ಅದು ತಪ್ಪು. ಶಾರೂಖ್ ಖಾನ್ ರಜನಿಕಾಂತ್ ಅವರ ಅತಿ ದೊಡ್ಡ ಅಭಿಮಾನಿ. ಅದೇ ಕಾರಣಕ್ಕೆ ಅವರೀಗ ಚೆನ್ನೈ ಎಕ್ಸ್ಪ್ರೆಸ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದರೂ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲು ಒಪ್ಪಿಕೊಂಡಿದ್ದಾರೆ. ರಜನಿಕಾಂತ್ ಅವರ ಲಕ್ಷಾಂತರ ಅಭಿಮಾನಿಗಳಲ್ಲಿ ನಾನೂ ಒಬ್ಬ. ಅವರಿಗಾಗಿ ಒಂದು ಹಾಡು ಮಾಡಿ ಎಂದರೆ ಇಲ್ಲ ಎನ್ನಲು ಸಾಧ್ಯವೇ ಇಲ್ಲ. ಹನಿಸಿಂಗ್ ಹಾಗೂ ಭೂಷಣ್ಕುಮಾರ್ ಅವರನ್ನು ಈಗಾಗಲೇ ಭೇಟಿ ಮಾಡಿ ಹಾಡು ಕೇಳಿಸಿಕೊಂಡು ಬಂದಿದ್ದೇನೆ. ರಜನಿ ಸರ್ಗೆ ಇದು ಸೂಕ್ತವಾದ ಹಾಡು. ಇದರ ಒಂದು ಭಾಗವಾಗಲು ನಾನು ಇಷ್ಟಪಡುತ್ತೇನೆ ಎಂದಿದ್ದಾರೆ ಕಿಂಗ್ ಖಾನ್. ನನ್ನ ಮನವಿಗೆ ದೀಪಿಕಾ ಒಪ್ಪಿಕೊಂಡಿದ್ದಾರೆ. ಹಾಗಾಗಿ ನಾವಿಬ್ಬರೂ ಈ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದೇವೆ. ಈ ಹಾಡನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ಕೊರಿಯಾಗ್ರಾಫರ್ ಚಿನ್ನಿ ಪ್ರಕಾಶ್ ಸಂಯೋಜಿಸಲಿದ್ದು, ಸದ್ಯದಲ್ಲೇ ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ.