ಸೆ.28ಕ್ಕೆ ಬಿಡುಗಡೆ: ಭಯಾನಕ ಕಥಾನಕದ 'ರೆಸಿಡೆಂಟ್ ಈವಿಲ್'
, ಶುಕ್ರವಾರ, 17 ಆಗಸ್ಟ್ 2012 (12:46 IST)
ರೆಸಿಡೆಂಟ್ ಈವಿಲ್-ರಿಟ್ರಿಬ್ಯೂಷನ್(ತ್ರಿ ಡಿ)ಯ ಐದನೇ ಸರಣಿಯ ಹಾಲಿವುಡ್ ಸಿನಿಮಾ ಸೆಪ್ಟೆಂಬರ್ 28ರಂದು ಭಾರತದಾದ್ಯಂತ ಬಿಡುಗಡೆಯಾಗಲಿದೆ. ಇದು ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ತೆರೆ ಕಾಣುತ್ತಿದೆ.ಸಿನಿಮಾದ ವೀಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ
ಆಕ್ಷನ್ ಮತ್ತು ಹಾರರ್ ಕಥೆಯನ್ನ ಹೊಂದಿರುವ ಈ ಸಿನಿಮಾವನ್ನು ಪೌಲ್ ಡಬ್ಲ್ಯು.ಎಸ್.ಆಂಡರ್‌ಸನ್ ನಿರ್ದೇಶಿಸಿದ್ದಾರೆ. ತಾರಾಗಣದಲ್ಲಿ ಮಿಲ್ಲಾ ಜೋವ್‌ವಿಚ್, ಮಿಷೆಲ್ ರೋಡ್ರಿಗಸ್, ಸಿಯೆನ್ನಾ ಗುಲ್ಲೋರೈ, ಕೇವಿನ್ ಡ್ಯುರಾಂಡ್, ಶ್ವಾನ್ ರೋಬರ್ಟ್ಸ್, ಕಾಲಿನ್ ಸಾಲ್ಮನ್ ಇದ್ದಾರೆ.
ಜಾಗತಿಕವಾಗಿ ಯಶಸ್ವಿಯಾಗಿರುವ ಈ ಸಿನಿಮಾ ಸುಮಾರು 700ಮಿಲಿಯನ್ ಡಾಲರ್‌ನಷ್ಟು ಹಣ ಬಾಚಿಕೊಂಡಿದೆ. ಇದೀಗ ಐದನೇ ಸರಣಿಯ ರೆಸಿಡೆಂಟ್ ಈವಿಲ್ ತ್ರಿ ಡಿ ಅವತರಣಿಕೆಯಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.ದ ಅಂಬ್ರೆಲ್ಲಾ ಕಾರ್ಪೋರೇಷನ್ ಭಯಾನಕವಾದ ಸಿನಿಮಾವನ್ನು ನಿರ್ಮಾಣ ಮಾಡುವಲ್ಲಿ ಹೆಸರುವಾಸಿಯಾಗಿದೆ. ಮನುಷ್ಯ ಜನಾಂಗ ಕೊನೆಗೊಳ್ಳುವ ಮತ್ತು ಆ ಬಗ್ಗೆ ಭರವಸೆ ಮೂಡಿಸುವ ಕಥೆಯನ್ನು ಹೊಂದಿದೆ. ರೆಸಿಡೆಂಟ್ ಈವಿಲ್ ಸಿನಿಮಾದಲ್ಲಿ ಭೂತದ ರಹಸ್ಯ ಕಥಾನಕ ಮತ್ತು ಅದು ಸೇಡು ತೀರಿಸಿಕೊಳ್ಳುವ ಬಗೆಯನ್ನು ರೋಮಾಂಚನಕಾರಿಯಾಗಿ ಮೂಡಿಬಂದಿರುವುದಾಗಿ ಸಂಸ್ಥೆ ಹೇಳಿದೆ.