Select Your Language

Notifications

webdunia
webdunia
webdunia
webdunia

ಸುಪ್ತ ವಜ್ರಾಸನ

ಸುಪ್ತ ವಜ್ರಾಸನ
ಮಾಡುವುದು ಹೇಗೆ?
ಮೊದಲು ವಜ್ರಾಸನ ಹಾಕಿ ಕುಳಿತುಕೊಳ್ಳಿ.

1. ನಿಧಾನವಾಗಿ ಬಲಕೈ, ನಂತರ ಎಡಕೈ ಮಣಿಗಂಟಿನ ಸಹಾಯದಿಂದ, ಅವುಗಳನ್ನು ಹಿಂಭಾಗದಲ್ಲಿ ನೆಲದ ಮೇಲಿರಿಸಿ.

2. ನಿಧಾನವಾಗಿ ಕೈಗಳನ್ನು ನೇರವಾಗಿರಿಸಿ ಮತ್ತು ಪೂರ್ಣವಾಗಿ ಬೆನ್ನಿನ ಮೇಲೆ ಪವಡಿಸಿ.
WD


3. ಭುಜಗಳು ನೆಲಕ್ಕೆ ತಾಗುವಂತಿರಬೇಕು. ಮೊದಲ ಬಾರಿ ಮಾಡುತ್ತಿರುವವರು ತಮ್ಮ ಕೈಗಳನ್ನು ಆಯಾ ತೊಡೆಗಳ ಮೇಲಿರಿಸಬಹುದು. ಮೊಣಕಾಲುಗಳು ಜತೆಯಾಗಿರಬೇಕು.

4. ಈ ಸ್ಥಿತಿಯನ್ನು ಅಭ್ಯಾಸ ಮಾಡಿದ ಬಳಿಕ, ಎರಡೂ ಕೈಗಳನ್ನು ಕತ್ತರಿಯಾಕಾರದಲ್ಲಿ ಭುಜಗಳ ಕೆಳಕ್ಕೆ ತನ್ನಿ. ಅಂದರೆ ಬಲಕೈಯು ಎಡಭುಜದ ಕೆಳಗೆ ಹಾಗೂ ಎಡಕೈಯು ಬಲಭುಜದ ಕೆಳಗೆ ಇರುತ್ತದೆ ಮತ್ತು ತಲೆಯು ಅವುಗಳ ಮಧ್ಯಭಾಗದಲ್ಲಿರುತ್ತದೆ.

5. ಮೂಲಸ್ಥಿತಿಗೆ ಮರಳುವ ಸಂದರ್ಭ, ಮೊದಲು ನಿಮ್ಮ ಕೈಗಳನ್ನು ತೆಗೆಯಿರಿ ಮತ್ತು ಅವುಗಳನ್ನು ದೇಹದ ಪಕ್ಕದಲ್ಲಿ ಚಾಚಿರಿ.

6. ಈಗ ಮಣಿಗಂಟಿನ ಸಹಾಯದಿಂದ, ಹಿಂದಿನ ಸ್ಥಿತಿಗೆ ಮರಳಿ.

ನೆನಪಿಡಿ:

1. ಬೆನ್ನಿನ ಮೇಲೆ ಮಲಗುವಾಗ, ನಿಮ್ಮ ದೇಹಭಾರದ ಮೇಲೆ ನಿಯಂತ್ರಣವಿರಲಿ. ಅವಸರವಾಗಿ ಇದನ್ನು ಮುಂದುವರಿಸಿದಲ್ಲಿ, ಸ್ನಾಯು ಸೆಳೆತ ಅಥವಾ ಬೇರೇನಾದರೂ ತೊಂದರೆಯಾದೀತು.

2. ವಜ್ರಾಸನ ಮಾಡುವಾಗಲೇ ಸಮಸ್ಯೆ ಕಂಡುಬಂದರೆ, ಅಂಥವರು ಈ ಆಸನ ಮಾಡಬಾರದು.

3. ಪ್ರಾರಂಭ ಮಾಡುವವರು ತಮ್ಮ ಮೊಣಕಾಲುಗಳನ್ನು ಜೋಡಿಸುವುದು ಕಷ್ಟವೆಂದಾದರೆ, ಅವುಗಳನ್ನು ದೂರ ದೂರವಿರಿಸಿಕೊಳ್ಳಬಹುದು.

ಸುಪ್ತ ವಜ್ರಾಸನದ ಲಾಭ ಮತ್ತು ಮಿತಿ:

1. ಇದು ಉದರಭಾಗದ ಸ್ನಾಯುಗಳನ್ನು ಬಲಪಡಿಸುತ್ತದೆ.

2. ಅಧಿಕ ರಕ್ತದೊತ್ತಡ ಮತ್ತು ಸಯಾಟಿಕಾ ಸಮಸ್ಯೆಯಿದ್ದವರಿಗೆ ಇದು ಪ್ರಯೋಜನಕಾರಿ.

3. ಮಲಬದ್ಧತೆಗೂ ಅತ್ಯುತ್ತಮ ಪರಿಹಾರವಾಗಬಲ್ಲುದು.

ವಾಯು ತೊಂದರೆ ಮತ್ತು ಪೃಷ್ಠ ಭಾಗದಲ್ಲಿ ನೋವು ಇರುವವರು ಇದನ್ನು ಮಾಡಬಾರದು.

Share this Story:

Follow Webdunia kannada