Select Your Language

Notifications

webdunia
webdunia
webdunia
webdunia

ಶಲಭಾಸನ

ಶಲಭಾಸನ
ಶಲಭಾಸನವನ್ನು ಕಮಲದ ಭಂಗಿ ಎಂದೂ ಹೇಳಲಾಗುತ್ತದೆ. ಈ ಆಸನವು ಪಶ್ಚಿಮೋತ್ತಾಸನ ಮತ್ತು ಹಲಾಸನಗಳ ವಿರುದ್ಧ ಭಂಗಿಯಾಗಿದೆ.

ವಿಧಾನ
ಅರ್ಧ ಶಲಭಾಸನವನ್ನು ಆರಂಭಿಸುವ ಮೊದಲು ನಿಮ್ಮ ಕಿಬ್ಬೊಟ್ಟೆಯ ಮೇಲೆ ಕವಚಿ ಮಲಗಿ. ನಿಮ್ಮ ಎದೆ ಮತ್ತು ಗಲ್ಲವು ನೆಲಕ್ಕೆ ತಾಕಬೇಕು. ತೋಳುಗಳು ನೆಲದ ಮೇಲಿರಲಿ. ಕೈಬೆರಳುಗಳನ್ನು ಮುಷ್ಟಿಹಿಡಿದು ಮೇಲ್ಮುಖವಾಗಿರಿಸಿ.

ನಿಧಾನಕ್ಕೆ ಆಳವಾಗಿ ಉಸಿರಾಡಿ. 10 ಸೆಕುಂಡುಗಳಲ್ಲಿ ಉಸಿರಾಟವನ್ನು ಪೂರ್ಣಗೊಳಿಸಿ.

ಸಂಪೂರ್ಣವಾಗಿ ಉಸಿರನ್ನು ಒಳಗೆಳೆದುಕೊಳ್ಳಬೇಡಿ. ತುಂಬಿದ ಶ್ವಾಸಕೋಶವು ನೀವು ಕಾಲುಗಳನ್ನು ಮೇಲೆತ್ತಲು ಪ್ರಯತ್ನಿಸುವಾಗ ಅಡ್ಡಿಯಾಗಬಹುದು.
WD


ಉಸಿರನ್ನು ನಿಧಾನಕ್ಕೆ ಹೊರಬಿಡಲು ಆರಂಭಿಸಿ. ನಿಮ್ಮ ಆಸನವು ಸಂಪೂರ್ಣವಾದಾಗ ಉಸಿರು ಹೊರಹಾಕುವಿಕೆ ಪೂರ್ಣಗೊಳ್ಳಬೇಕು.

ಅಂಗೈಗಳನ್ನು ನೆಲಕ್ಕೆ ಊರಿ ಎರಡೂ ಕಾಲುಗಳನ್ನು ಎಷ್ಟು ಸಾಧ್ಯವೋ ಅಷ್ಟು ಮೇಲೆತ್ತಿ. ಮೊಣಕಾಲುಗಳನ್ನು ಬಗ್ಗಿಸಬಾರದು.

ವಿಡಿಯೋದಲ್ಲಿರುವಂತೆ ಈ ಆಸನವನ್ನು ಅಭ್ಯಾಸ ಮಾಡಿ.

ಉಪಯೋಗಗಳು
ಗರ್ಭಕೋಶ ಮತ್ತು ಅಂಡಾಣುಗಳ ಕಾಯಿಲೆಗಳನ್ನು ನೀಗಿಸುತ್ತದೆ.

ಮಧುಮೇಹವನ್ನು ನಿಯಂತ್ರಣದಲ್ಲಿರಿಸುತ್ತದೆ.

ಅಜೀರ್ಣವ್ಯಾಧಿ ಮತ್ತು ಮಲಬದ್ಧತೆಯನ್ನು ಸಮಸ್ಯೆಯನ್ನು ನೀಗಿಸುತ್ತದೆ.

ಶಲಭಾಸನವು ಜೀರ್ಣಾಂಗ ವ್ಯವಸ್ಥೆಯನ್ನು ಸರಿದೂಗಿಸುತ್ತದೆ.

ಫಿಸ್ತುಲಾ, ಫೈಲ್ಸ್ ರೋಗವನ್ನೂ ಗುಣಪಡಿಸುತ್ತದೆ.

ಲಿವರ್ ಕಾರ್ಯಾಚರಣೆಯನ್ನು ಚುರುಕುಗೊಳಿಸುತ್ತದೆ.

ವಾಯು ಸಮಸ್ಯೆ ಹಾಗೂ ಉದರದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

ಸ್ಲಿಪ್‌ಡಿಸ್ಕ್ ಸಮಸ್ಯೆಯನ್ನೂ ಇದು ಪರಿಹರಿಸುತ್ತದೆ.

ಗಂಟು ನೋವು, ಸೊಂಟ ನೋವು ಸಮಸ್ಯೆಯನ್ನೂ ನೀಗಿಸುತ್ತದೆ.

Share this Story:

Follow Webdunia kannada