Select Your Language

Notifications

webdunia
webdunia
webdunia
webdunia

ವಜ್ರಾಸನ ಹಾಕೋದು ಹೇಗೆ?

ವಜ್ರಾಸನ ಹಾಕೋದು ಹೇಗೆ?
ಕಳೆದ ವಾರ ಪದ್ಮಾಸನದ ಬಗ್ಗೆ ತಿಳಿದುಕೊಂಡಿದ್ದೆವು. ಪದ್ಮಾಸನವನ್ನು ನೀವೀಗ ಪಳಗಿಸಿಕೊಂಡಿದ್ದೀರಿ. ಬನ್ನಿ ಈ ವಾರ ವಜ್ರಾಸನವನ್ನು ತಿಳಿದುಕೊಳ್ಳೋಣ.

ವಜ್ರಾಸನದ ನಿಯಮಿತ ಅಭ್ಯಾಸವು ದೇಹವನ್ನು ವಜ್ರದಂತೆ ಸ್ಥಿರ ಹಾಗೂ ಸುದೃಢವಾಗಿರಿಸುತ್ತದೆ. ಸಂಸ್ಕೃತದಲ್ಲಿ 'ವಜ್ರ' ಅಂದರೆ 'ಕಠಿಣ' ಎಂದರ್ಥ. ಈ ಭಂಗಿಯ ಯೋಗಾಭ್ಯಾಸ ನಿರತ ವ್ಯಕ್ತಿಯು ವಜ್ರದಂತೆ ಕಂಡುಬರುವ ಕಾರಣಕ್ಕೆ ಇದಕ್ಕೆ ವಜ್ರಾಸನ ಎಂದು ಹೆಸರು.

ವಿಧಾನ
* ಸುಖಾಸನ ಸ್ಥಿತಿಗೆ ಬನ್ನಿ
* ನೇರವಾಗಿ ಕುಳಿತುಕೊಳ್ಳಿ
* ಕಾಲುಗಳನ್ನು ಮುಂದಕ್ಕೆ ಚಾಚಿ
* ಒಂದಾದ ಬಳಿಕ ಒಂದರಂತೆ ಕಾಲುಗಳನ್ನು ಭಾಗಿಸಿ
* ಕಾಲುಗಳನ್ನು ನಿತಂಬದ ಬದಿಗಳಲ್ಲಿರಿಸಿ
* ಅಂಗಾಲುಗಳು ಮೇಲ್ಮುಖವಾಗಿರಲಿ
* ನಿತಂಬವನ್ನು ದೃಢವಾಗಿ ನೆಲದ ಮೇಲೆ ಊರಿ
* ನಿತಂಬವನ್ನು ಮೇಲ್ಮುಖವಾಗಿರುವ ಅಂಗಾಲುಗಳ ಮಧ್ಯದಲ್ಲಿರಿಸಿ
WD

* ನಿತಂಬದ ಹಿಂದಿರುವ ಹೆಬ್ಬೆರಳುಗಳು ಪರಸ್ಪರ ಅಭಿಮುಖವಾಗಿರಬೇಕು
* ಮೊಣಕಾಲುಗಳು ಹತ್ತಿರತ್ತಿರವಾಗಿರಬೇಕು
* ನಿಮ್ಮ ಅಂಗೈಗಳನ್ನು ತೊಡೆಗಳ ಮೇಲಿರಿಸಿ
* ನೇರವಾಗಿ ಮುಂದಕ್ಕೆ ನೋಡಿ
* ವಜ್ರಾಸನ ಹಾಕುವ ವೇಳೆಗೆ ದೇಹವು ದೃಢವಾಗಿ ನಿಮಿರಿರಬೇಕು

ವಜ್ರಾಸನದ ಪರ್ಯಾಯ ವಿಧಾನ
* ಮೇಲ್ಮುಖವಾದ ಅಂಗಾಲುಗಳನ್ನು ನಿತಂಬದ ಬದಿಯಲ್ಲಿರಿಸುವ ಬದಲಿಗೆ ಕೆಳಭಾಗದಲ್ಲಿಯೂ ಇರಿಸಬಹುದು.
* ಈ ವಿಧಾನದಲ್ಲಿ ಹೆಬ್ಬೆಟ್ಟುಗಳು ಪರಸ್ಪರ ಕತ್ತರಿಯಾಗುವ ಕಾರಣ ನೀವು ಹಿಮ್ಮಡಿಗಳ ಮೇಲೆ ಕುಳಿತುಕೊಳ್ಳಬಹುದು.
* ಮೇಲ್ಮುಖವಾಗಿರುವ ಅಂಗಾಲುಗಳ ಒಳಭಾಗದಲ್ಲಿ ನಿತಂಬವನ್ನಿರಿಸಬಹುದು
* ಹಾಗಾಗಿ ಮೇಲೆ ಹೇಳಿದಂತೆ ನಿತಂಬವು ನೆಲದ ಬದಲಿಗೆ ಅಂಗಾಲುಗಳ ಮಧ್ಯದಲ್ಲಿರುತ್ತದೆ
* ಉಸಿರಾಟವು ಹಾಗೆಯೇ ಇರಲಿ

ಅನುಕೂಲಗಳು
* ತೊಡೆಯಲ್ಲಿನ ಕೊಬ್ಬು ಕಡಿಮೆಯಾಗುತ್ತದೆ
* ಬೆನ್ನು ಮೂಳೆಗೆ ವ್ಯಾಯಾಮ ದೊರೆಯುತ್ತದೆ
* ಕಿಬ್ಬೊಟ್ಟೆಯ ಅಂಗಾಂಗಳು ಅವುಗಳ ಯಥಾಸ್ಥಾನಗಳಲ್ಲಿರುತ್ತವೆ
* ಕಶೇರುಕಗಳ ಮಾಂಸಖಂಡಗಳು ದೃಢಗೊಳ್ಳುತ್ತವೆ ಮತ್ತು ಶಕ್ತಿಯುತವಾಗುತ್ತವೆ
* ಜಠರ ಪ್ರದೇಶವೂ ಸುದೃಢವಾಗುತ್ತದೆ
* ಹೆಬ್ಬೆರಳು, ಪಾದದ ಮೇಲ್ಮೈ, ಹಿಮ್ಮಡಿಗಳು, ಮೊಣಕಾಲುಗಳು, ತೊಡೆ ಹಾಗೂ ಪೃಷ್ಠಗಳ ಪೆಡಸಾದ ಅಸ್ಥಿರಜ್ಜುಗಳು ಸಡಿಲಗೊಳ್ಳುತ್ತವೆ.

ಎಚ್ಚರಿಕೆ
ಮೊಣಕಾಲುಗಳಲ್ಲಿ ಯಾವುದಾದರೂ ನೋವು ಅಥವಾ ಗಾಯಗಳಿದ್ದರೆ ಈ ಆಸನದಿಂದ ದೂರವಿರಿ.

Share this Story:

Follow Webdunia kannada