ಕುಳಿತುಕೊಂಡ ಭಂಗಿಯಲ್ಲೇ ಮಾಡಬಹುದಾದ ಆಸನ, ವಕ್ರಾಸನ.
ವಕ್ರಾಸನ ಹಾಕುವ ವಿಧಾನ
*ಕಾಲುಗಳನ್ನು ಮುಂಚಾಚಿ ದಂಡಾಸನದಲ್ಲಿ ಕುಳಿತುಕೊಳ್ಳಿ.
*ಬಲಕಾಲಿನ ಮೊಣಕಾಲನ್ನು ಬಗ್ಗಿಸಿ ಮತ್ತು ಆಂಗಾಲನ್ನು ಎಡ ಮೊಣಕಾಲಿನ ಬಳಿ ಇರಿಸಿ.
*ಉಸಿರನ್ನು ಬಿಟ್ಟು ದೇಹವನ್ನು ಬಲಕ್ಕೆ ತಿರುಗಿಸಿ ಮತ್ತು ನಿಮ್ಮ ಎಡಗೈಯನ್ನು ಬಗ್ಗಿಸಿದ ಬಲಗಾಲಿನ ಹೊರಗಡೆಯಿಂದ ತನ್ನಿ.
*ಆಧಾರಕ್ಕಾಗಿ ಬಲಗೈಯನ್ನು ಬೆನ್ನಹಿಂದಿಡಿ.*ಬೆನ್ನು ಮೂಳೆಯನ್ನು ನೇರವಾಗಿಸಿ ಮತ್ತು ಬಲಗಾಲಿನ ಹೆಬ್ಬೆರಳನ್ನು ಎಡಗೈಯಿಂದ ಹಿಡಿಯಿರಿ.*ಬೆರಳುಗಳು ಮೇಲ್ಮುಖವಾಗಿರುವಂತೆ ಎಡಗಾಲನ್ನು ಚಾಚಿ.*ನಿಧಾನವಾಗಿ ಉಸಿರುಬಿಡಿ. ದೇಹವನ್ನು ಇನ್ನಷ್ಟು ಬಲಕ್ಕೆ ತಿರುಗಿಸಿ ಮತ್ತು ಕತ್ತನ್ನು ನಿಮ್ಮ ಹಿಂದಕ್ಕೆ ನೋಡುವಂತೆ ತಿರುಗಿಸಿ. *ಸಾಧ್ಯವಿರುವಷ್ಟು ಹೊತ್ತು ಈ ಭಂಗಿಯಲ್ಲಿರಿ.*ಉಸಿರನ್ನು ಒಳಗೆಳೆದುಕೊಳ್ಳಿ. ದೇಹ ಮತ್ತು ಕತ್ತನ್ನು ಮುಂದಕ್ಕೆ ತಿರುವಿ, ಕೈಯನ್ನು ಬಿಡಿ, ಕಾಲುಗಳನ್ನು ನೆಟ್ಟಗೆ ಮಾಡಿ.*ದಂಡಾಸನದಲ್ಲಿ ಕುಳಿತುಕೊಳ್ಳಿಈ ಆಸನ ನೀಡುವ ಲಾಭಗಳು *ಬೆನ್ನು ಮೂಳೆಯನ್ನು ಶಕ್ತಿಯತವಾಗಿಸುತ್ತದೆ.*ಬೆನ್ನಹಿಂದಿನ ಭಾಗದ ನಮ್ಯತೆಯನ್ನು ಹೆಚ್ಚಿಸುತ್ತದೆ.*ಜೀರ್ಣ ಪ್ರಕ್ರಿಯೆಯನ್ನು ಚೆನ್ನಾಗಿಸುತ್ತದೆ. ಈ ಆಸನವು ಜೀರ್ಣಾಂಗ ವ್ಯವಸ್ಥೆಗೆ ಮಾಲೀಸು ನೀಡುತ್ತದೆ.*ಭುಜಗಳನ್ನು ಶಕ್ತವಾಗಿಸುತ್ತದೆ.*ಕತ್ತಿನ ಮಾಂಸಖಂಡಗಳಿಗೆ ವ್ಯಾಯಾಮ ದೊರೆಯುತ್ತದೆ.ಎಚ್ಚರಿಕೆ ಕತ್ತು ಅಥವಾ ಬೆನ್ನುನೋವು ಇದ್ದಲ್ಲಿ ಈ ಆಸನದ ಅಭ್ಯಾಸ ಮಾಡದಿರಿ.ಸ್ಲಿಪ್ ಡಿಸ್ಕ್ ಅಥವಾ ಸ್ಪಾಂಡಿಲೈಟಿಸ್ ಇದ್ದರೂ ಈ ಆಸನ ನಿಮಗೆ ಬೇಡ.