Select Your Language

Notifications

webdunia
webdunia
webdunia
webdunia

ಸಮಸ್ಥಿತಿಯ ತಾಡಾಸನ

ಸಮಸ್ಥಿತಿಯ ತಾಡಾಸನ
ಸಂಸ್ಕೃತದಲ್ಲಿ ತಾಡಾ ಎಂದರೆ ಪರ್ವತ ಎಂದರ್ಥ. ಈ ಭಂಗಿಗೆ ಸಮಸ್ಥಿತಿ ಆಸನ ಅಂತಲೂ ಕರೆಯುತ್ತಾರೆ. ಸಮ ಅಂದರೆ, ಕದಲದ ಅಥವಾ ಸಂತುಲನ ಹಾಗೂ ಸ್ಥಿತಿ ಎಂದರೆ, ದೃಢವಾಗಿ, ನೇರವಾಗಿ ನಿಲ್ಲುವುದು ಎಂದರ್ಥ. ಒಟ್ಟಾಗಿ ಸಮಸ್ಥಿತಿ ಎಂದರೆ ಕದಲದೆ ದೃಢವಾಗಿ ನಿಲ್ಲುವುದು ಎಂದರ್ಥ.

ವಿಧಾನ

ಹಿಮ್ಮಡಿ ಮತ್ತು ಹೆಬ್ಬೆರಳು ಒಂದಕ್ಕೊಂದು ತಾಗಿರುವಂತೆ ನಿಲ್ಲಿ, ಬೆನ್ನು ನೇರವಾಗಿರಲಿ ಮತ್ತು ಅಂಗೈಯನ್ನು ಒಳಮುಖವಾಗಿರಿಸಿ ನೇರವಾಗಿ ನಿಲ್ಲಿ.

ಮೊಣಕಾಲು, ತೊಡೆ, ಹೊಟ್ಟೆ ಮತ್ತು ಪೃಷ್ಠದ ಸ್ನಾಯುಗಳು ಬಿಗಿಯಾಗಿರುವಂತೆ ದೃಢ ಭಂಗಿಯಲ್ಲಿರಿ. ಭಾರವನ್ನು ಎರಡೂ ಪಾದಗಳಲ್ಲಿ ಸಮತೋಲನದಲ್ಲಿರಿಸಿ.

ಮೂಗಿನ ಹೊಳ್ಳೆಗಳಿಂದ ದೀರ್ಘ ಉಸಿರನ್ನು ತೆಗೆದುಕೊಂಡು, ಬೆನ್ನು ಬಾಗುವಂತೆ ಮತ್ತು ಹೊಟ್ಟೆಯು ಮುಂದಕ್ಕೆ ಬಾಗುವಂತೆ ಕಾಲುಗಳ ಮೂಲಕ ಪೃಷ್ಠವನ್ನು ಮೇಲಕ್ಕೆತ್ತಿ ಮತ್ತು ತಲೆಯನ್ನು ಸಾಧ್ಯವಾದಷ್ಟು ಹಿಂದಕ್ಕೆ ಭಾಗಿಸಿ.
WD

ಪ್ರಯೋಜನಗಳು

ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ನಿರ್ಲ್ಯಕ್ಷಕ್ಕೆ ಒಳಪಡುವ ಸಮಸ್ಯೆಗಳನ್ನು ತಾಡಾಸನದಿಂದ ಸುಲಭವಾಗಿ ಗುರುತಿಸಬಹುದಾಗಿದೆ.

ಉಸಿರು, ಮನಸ್ಸು ಮತ್ತು ದೇಹವನ್ನು ನಿಶ್ಚಲ ಭಂಗಿಯಲ್ಲಿರಿಸುವ ಈ ಆಸನದಿಂದ ಬೆನ್ನು ಹುರಿಗೆ ಸಂಬಂಧಿಸಿದ ಸಮಸ್ಯೆಗಳು ವ್ಯಕ್ತವಾಗುತ್ತದೆ ಮತ್ತು ಬಾಗಿದ ಭುಜ, ಕತ್ತು ಕೆಳ ಮತ್ತು ಮೇಲಿನ ಬೆನ್ನಿನ ಬಿಗಿತ ಮುಂತಾದ ಹಲವಾರು ದೈಹಿಕ ಸಮಸ್ಯೆಗಳ ಇರುವಿಕೆಯನ್ನು ಸೂಚಿಸುತ್ತದೆ. ಮತ್ತು ಇದು ಇನ್ನಷ್ಟು ಯೋಗಾಭ್ಯಾಸದ ಆವಶ್ಯಕತೆಯನ್ನು ಸೂಚಿಸುತ್ತದೆ.

ಇತರ ಭಂಗಿಗಳೊಂದಿಗೆ ಏಕಾಗ್ರತೆಯಿಂದ ಪ್ರತಿದಿನ ಮಾಡುವ ತಾಡಾಸನವು ಅಸಮ ಭಂಗಿಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ಹೋಗಲಾಡಿಸಲು ಸಹಕಾರಿಯಾಗುತ್ತದೆ.

ತಾಡಾಸನವನ್ನು ಸರಿಯಾಗಿ ಮತ್ತು ಏಕಾಗ್ರತೆಯಿಂದ ಮಾಡಿದಲ್ಲಿ, ದೇಹವು ಭೂಮಿಯಲ್ಲಿ ದೃಢವಾಗಿ ನಿಂತಿರುವ ಅನುಭವವಾಗುತ್ತದೆ.

Share this Story:

Follow Webdunia kannada