ಯೋಗಿಯೊಬ್ಬ ಉದರದ ಮೇಲೆ ಮಲಗಿ ನೌಕಾಸನ ಮಾಡುತ್ತಾನೆ. ಆ ಸಂದರ್ಭದಲ್ಲಿ ಶರೀರವು ನೌಕೆಯನ್ನು ಹೋಲುತ್ತದೆ. ಇದಕ್ಕಾಗಿ ಈ ನೌಕಾಸನಕ್ಕೆ ವಿಪರೀತ ನೌಕಾಸನವೆಂಬ ಹೆಸರು.
ಮಾಡುವ ವಿಧಾನ:
• ಉದರ ಮತ್ತು ಎದೆಯ ಮೇಲೆ ಮಲಗಿ. • ಹಣೆಯು ನೆಲದ ಮೇಲಿರಬೇಕು. • ಆಯಾ ಪಾರ್ಶ್ವಗಳಲ್ಲಿ ಕೈಗಳು ಮತ್ತು ಪಾದಗಳನ್ನು ಜತೆಯಾಗಿ ಇರಿಸಿ. • ಕೈಗಳನ್ನು ನೇರವಾಗಿ ಮುಂದಕ್ಕೆ ಚಾಚಿರಿ.
WD
• ಕೈಗಳನ್ನು ಪರಸ್ಪರ ಸಮಾನಾಂತರದಲ್ಲಿರಿಸಿ. • ಅಂಗೈಗಳು ಕೆಳಮುಖವಾಗಿರಬೇಕು. • ಬೆರಳುಗಳು ಪರಸ್ಪರ ಸಮೀಪದಲ್ಲಿರಬೇಕು. • ಮುಂಗೈಗಳ ನಡುವೆ ನೆಲದ ಮೇಲೆ ಹಣೆಯನ್ನಿರಿಸಿ. • ಉಸಿರೆಳೆದುಕೊಳ್ಳುತ್ತಾ, ಕಾಲುಗಳು, ಉದರ, ಭುಜಗಳು, ಕತ್ತು, ತಲೆ ಮತ್ತು ಕೈಗಳನ್ನು ನಿಧಾನವಾಗಿ ಮೇಲೆತ್ತಿ. • ಮಣಿಗಂಟು ಮತ್ತು ಮೊಣಕಾಲುಗಳನ್ನು ಬಾಗಿಸಬೇಡಿ. • ದಿಢೀರ್ ಜರ್ಕ್ ಆಗದಂತೆ ನೋಡಿಕೊಳ್ಳಿ. • ಕೈಯ ಮೇಲ್ಭಾಗಗಳು ಕಿವಿಗಳನ್ನು ಮುಟ್ಟುವಂತಿರಬೇಕು. • ಪಾದಕಗಳು ಪರಸ್ಪರ ಸಮೀಪದಲ್ಲಿರಬೇಕು. • ತಲೆಯನ್ನು ಎಷ್ಟು ಸಾಧ್ಯವೋ ಅಷ್ಟು ಮೇಲಕ್ಕೆತ್ತಿ. • ಮೇಲಕ್ಕೆತ್ತಿದ ಕೈಗಳ ನಡುವೆ ತಲೆಯನ್ನಿರಿಸಿ. • ಎಷ್ಟು ಸಾಧ್ಯವೋ ಅಷ್ಟು ಪ್ರಮಾಣಕ್ಕೆ ಹಿಂದಕ್ಕೆ ಬಗ್ಗಬೇಕು. • ಬೆನ್ನು ಸರಿಯಾಗಿ ಬಿಲ್ಲಿನಂತೆ ಬಾಗಿರಬೇಕು. • ಕಾಲ್ಬೆರಳಿಂದ ಕೈಬೆರಳ ತುದಿವರೆಗೂ ಇಡೀ ಶರೀರವು ಬಾಗಿರಬೇಕು. • ನಿಮ್ಮ ಕೈಬೆರಳತುದಿಗಳು ಮತ್ತು ಕಾಲ್ಬೆರಳುಗಳು ಒಂದೇ ಮಟ್ಟದಲ್ಲಿರಬೇಕು. • ಶರೀರದ ತೂಕವನ್ನು ಕೆಳ ಹೊಟ್ಟೆಯ ಮೇಲೆ ಕೇಂದ್ರೀಕರಿಸಿ. • ಹೊಟ್ಟೆಯ ಕೆಳಭಾಗ ಮಾತ್ರವೇ ನೆಲವನ್ನು ಸ್ಪರ್ಶಿಸುವಂತಿರಬೇಕು. • ಚಲನೆಯಿಲ್ಲದೆ ಈ ಸ್ಥಿತಿಯಲ್ಲಿಯೇ ಇರಿ. • ಉಸಿರನ್ನು ಕನಿಷ್ಠ 10 ಸೆಕೆಂಡುಗಳ ಕಾಲ ಬಿಗಿಹಿಡಿಯಿರಿ. • ನಿಧಾನವಾಗಿ ಉಸಿರು ಹೊರಬಿಡುತ್ತಾ, ಸಾಮಾನ್ಯ ಸ್ಥಿತಿಗೆ ಮರಳಿ. • ತಿರುಗಿಕೊಳ್ಳಿ ಮತ್ತು ಶವಾಸನ ಮಾಡಿ, ವಿಶ್ರಮಿಸಿ.
ಪ್ರಯೋಜನಗಳು • ವಿಪರೀತ ನೌಕಾಸನವು ಹೊಟ್ಟೆ, ಬೆನ್ನು, ಭುಜಗಳು, ಕತ್ತು ಮತ್ತು ಕೆಳ ಪಾದಗಳನ್ನು ಬಲಪಡಿಸುತ್ತದೆ. • ಬೆನ್ನುಹುರಿಯ ಸಮಸ್ಯೆಗಳು ಸುಧಾರಣೆಯಾಗುತ್ತವೆ. • ಎದೆಯನ್ನು ವಿಸ್ತರಿಸುತ್ತದೆ ಮತ್ತು ನಿಮ್ಮ ಶ್ವಾಸಕೋಶಗಳು ಕೂಡ ಶಕ್ತಿಯುತವಾಗುತ್ತವೆ. • ಈ ಆಸನವು ಕುಹರ ಪ್ರದೇಶ, ಪಾದಗಳು, ಮೊಣಕಾಲು, ತೊಡೆಗಳು, ಹಸ್ತಗಳು ಮತ್ತು ಗುದ ಭಾಗವನ್ನು ಏಕಕಾಲದಲ್ಲಿ ಬಲಪಡಿಸುತ್ತದೆ ಮತ್ತು ಪೂರ್ಣ ವ್ಯಾಯಾಮ ಒದಗಿಸುತ್ತದೆ.