Select Your Language

Notifications

webdunia
webdunia
webdunia
webdunia

ಪೂರ್ಣ ಧನುರಾಸನ

ಪೂರ್ಣ ಧನುರಾಸನ
ಸಂಸ್ಕೃತದಲ್ಲಿ ಧನುಸ್ಸು ಅಂದರೆ ಬಿಲ್ಲು. ಈ ಆಸನವನ್ನು ಮಾಡು ವೇಳೆಗೆ ನಿಮ್ಮ ದೇಹವು ಬಿಗಿಯಾಗಿ ಬಾಗಿಸಿದ ಬಿಲ್ಲಿನ ಆಕಾರಕ್ಕೆ ಬಾಗುವ ಕಾರಣ ಇದಕ್ಕೆ ಧನುರಾಸನ ಎಂಬ ಹೆಸರು. ನಿಮ್ಮ ನಡು ಮತ್ತು ತೊಡೆಗಳು ಬಾಗಿದ್ದರೆ, ಕಾಲಿನ ಕೆಳಭಾಗ ಮತ್ತು ಕೈಗಳು ನೆಟ್ಟಗಿನ ಬಿಲ್ಲುಹುರಿಯಂದಕ್ಕೆ ತಿರುಗುತ್ತದೆ.

ವಿಧಾನ
ಅರ್ಧ ಧನುರಾಸನ ಭಂಗಿಯ ಬಳಿಕ ಈ ಕೆಳಗಿನ ವಿಧಾನವನ್ನು ಅನುಸರಿಸಿ.

ಏಕಕಾಲಿಕ್ಕೆ ನಿಮ್ಮ ತಲೆ, ಕತ್ತು, ಗಲ್ಲ, ಎದೆ, ತೊಡೆ, ಮತ್ತು ಮೊಣಕಾಲುಗಳನ್ನು ಹಿಂದಕ್ಕೆ ಎತ್ತಿ

ಗಲ್ಲವನ್ನು ನೆಲದಿಂದ ಮೇಲಕ್ಕೆತ್ತಿ.

ಅದೇ ಸಮಯದಲ್ಲಿ ನಿಮ್ಮ ಜಠರ ಕುಹರದ ಕೆಳಭಾಗ ಹಾಗು ತಲೆ, ಕತ್ತು, ಗಲ್ಲ, ಭುಜ, ಎದೆ ಮತ್ತು ಪೃಷ್ಠ, ತೊಡೆ ಮತ್ತು ಮೊಣಕಾಲುಗಳನ್ನು ನಿಧಾನವಾಗಿ ಮೇಲಕ್ಕೆತ್ತಿ.
WD


ಮೊಣಕಾಲು ಮತ್ತು ಪಾದಗಳನ್ನು ಜತೆಯಾಗಿಸಿ.

ಮೇಲಕ್ಕೆ ನೋಡಿ

ನಿಮ್ಮ ತಲೆಯನ್ನು ಅದಷ್ಟು ಮೇಲೆ ಎತ್ತಿ ಮತ್ತು ಸಾಧ್ಯವಾದಷ್ಟು ಹಿಂದಕ್ಕೆ ಬಾಗಿಸಿ

ಹಿಮ್ಮಡಿಗಳನ್ನು ಬಲವಾಗಿ ಎಳೆಯಿರಿ.

ಎದುರಿಗೆ ನೇರವಾಗಿ ದೃಷ್ಟಿ ಹರಿಸಿ.

ನಿಮ್ಮ ದೇಹವನ್ನು ನಾಭಿ ಭಾಗದ ಬಳಿ ಸಮತೋಲನ ಸ್ಥಿತಿಗೆ ತರಲು ಪ್ರಯತ್ನಿಸಿ.

ಬೆನ್ನನ್ನು ಗರಿಷ್ಠ ಮಿತಿಯವರೆಗೆ ಬಾಗಿಸಿ.

ಈ ಸ್ಥಿತಿಯನ್ನು ಕಾಯ್ದುಕೊಳ್ಳಿ ಮತ್ತು ಉಸಿರನ್ನು ಹಿಡಿತದಲ್ಲಿರಿಸಿ.

ನಾಭಿಯ ಮೇಲೆ ದೇಹದ ಸಮತೋಲನ ಸಾಧಿಸಿ

ನಿಮ್ಮ ತೊಡೆ, ಜಠರ ಕುಹರ ಮತ್ತು ಎದೆಯನ್ನು ನೆಲಕ್ಕೆ ಆಧರಿಸಬೇಡಿ.

ಈ ಸ್ಥಿತಿಯಲ್ಲಿ ಅತ್ಯುತ್ತಮ ಹಿಡಿತ ಸಾಧಿಸಲು ಪ್ರಯತ್ನಿಸಿ.

ಕೊನೆಯ ಹಂತ ತಲುಪಿದಾಗ ಸಹಜವಾಗಿಯೇ ಈ ಭಂಗಿಗೆ ಆಧಾರ ನೀಡಿರುವ ಕಾಲುಗಳು ಹಾಗು ತೋಳುಗಳಲ್ಲಿ ನೋವು ಅಥವಾ ಎಳೆತ ಕಾಣಿಸಿಕೊಳ್ಶುತ್ತದೆ.

ನಿಮ್ಮ ತೋಳುಗಳನ್ನು ಪೂರ್ಣವಾಗಿ ಚಾಚಿ ಇರಿಸಿ.

ನಿಮ್ಮ ಕಾಲುಗಳನ್ನು ಕೆಳಬದಿಗೆ ಜಾರಲು ಬಿಡಬೇಡಿ.

ಈ ಸ್ಥಿತಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಿ.

ಹಂತಹಂತವಾಗಿ, ನೀವು ಧನುರಾಸನ ಸ್ಥಿತಿಯಲ್ಲಿರುವ ಸಮಯವನ್ನು ಹೆಚ್ಚಿಸಿಕೊಳ್ಳಿ.

ಈ ಸ್ಥಿತಿಯನ್ನು ಕನಿಷ್ಠ ಐದು ಕ್ಷಣದವರೆಗೆ ಅಥವಾ ನಿಮಗೆ ನೋವಿನ ಅನುಭವವಾಗುವವರೆಗೆ ಕಾಯ್ದುಕೊಳ್ಳಿ ಮತ್ತು ಉಸಿರು ಹೊರಬಿಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ನಿಧಾನವಾಗಿ ಉಸಿರನ್ನು ಒಳಗೆಳೆದುಕೊಳ್ಳುತ್ತಾ ಕ್ರಮೇಣವಾಗಿ ಮೊದಲಿನ ಸ್ಥಿತಿಗೆ ಮರಳಿ.

ಅನುಕೂಲಗಳು
ಅರ್ಧ ಬಾಗುವಿಕೆ ದೇಹವನ್ನು ಬಲಪಡಿಸುತ್ತದೆ ಮತ್ತು ಶಕ್ತಿಯುತವಾಗಿಸುತ್ತದೆ. ಇದು ಮೂತ್ರಪಿಂಡ, ಆಡ್ರಿನಲ್ ಗ್ರಂಥಿಗಳು ಮತ್ತು ಸಂತಾನೋತ್ಪತ್ತಿ ಶಕ್ತಿಯನ್ನು ವೃದ್ಧಿಸುತ್ತದೆ.

ಮುನ್ನೆಚ್ಚೆರಿಕೆಗಳ
ನೀವು ಈ ಕೆಳಗಿನ ವ್ಯಾಧಿಗಳಿಂದ ಬಳಲಿತ್ತಿದ್ದಲ್ಲಿ ಈ ಆಸನವನ್ನು ಪ್ರಯತ್ನಿಸಬೇಡಿ: ಸ್ಲಿಪ್ ಡಿಸ್ಕ್, ಹರ್ನಿಯಾ, ಅಲ್ಸರ್, ಹೃದಯದ ಸಮಸ್ಯೆಗಳು, ಮತ್ತು ಆಧಿಕ ರಕ್ತದ ಒತ್ತಡ!

ನೀವು ಇತ್ತಿಚೆಗೆ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಲ್ಲಿ ಈ ಆಸನವನ್ನು ಪ್ರಯತ್ನಿಸಲೇಬಾರದು. ಪೂರ್ಣ ಗುಣಮುಖರಾಗುವವರೆಗೆ ಕಾಯಿರಿ!

Share this Story:

Follow Webdunia kannada