Select Your Language

Notifications

webdunia
webdunia
webdunia
webdunia

ಮತ್ಸ್ಯಾಸನ

ಮತ್ಸ್ಯಾಸನ
ಮತ್ಸ್ಯಾಸನದಲ್ಲಿ ಯೋಗ ಸಾಧಕನ ದೇಹ ಭಂಗಿಯು ಮೀನಿನ ಆಕಾರವನ್ನು ಪಡೆಯುವ ಕಾರಣ ಇದಕ್ಕೆ ಮತ್ಸ್ಯಾಸನವೆಂದು ಹೆಸರು. ಸಂಸ್ಕೃತದಲ್ಲಿ ಮತ್ಸವೆಂದರೆ ಮೀನು.
WD

ಮತ್ಸ್ಯಾಸನ ಹಾಕುವ ವಿಧಾನ
ಪದ್ಮಾಸನ ಸ್ಥಿತಿಗೆ ಬನ್ನಿ
ನಿಮ್ಮ ಮೊಣಕಾಲುಗಳು ನೆಲಕ್ಕೆ ತಾಕುತ್ತಿರಬೇಕು
ನಿಧಾನವಾಗಿ ನಿಮ್ಮ ಮೊಣಕೈಗಳ ಮೇಲೆ ಭಾಗಿ
ಬೆನ್ನಿನ ಮೇಲೆ ಮಲಗಿ
ಈ ಭಂಗಿಯಲ್ಲಿ ನೀವು ನಿಮ್ಮ ಮೊಣಕೈ ಮತ್ತು ಕೈಗಳ ಆಧಾರ ತೆಗೆದುಕೊಳ್ಳಬಹುದು.
webdunia
WD

ಕೈಗಳನ್ನು ಹಿಂದಕ್ಕೆ ತಲೆಯತ್ತ ತರಬೇಕು
ಈಗ ಅಂಗೈಗಳನ್ನು ನೆಲದಮೇಲೆ ಊರಿ
ನಿಮ್ಮ ಕೈಗಳು ನಿಮ್ಮ ಭುಜಗಳ ಕೆಳಗೆ ವಿರುದ್ಧ ದಿಕ್ಕಿಗೆ ಮುಖಮಾಡಿರಬೇಕು
ನಿಮ್ಮ ಕೈಗಳು ಮತ್ತು ಮೊಣಕಾಲುಗಳನ್ನು ಕೆಳಗೆ ಒತ್ತಿ
ನಿಮ್ಮ ಎದೆ ಮತ್ತು ಕಿಬ್ಬೊಟ್ಟೆಯನ್ನು ಮೇಲಕ್ಕೆ ಎತ್ತಿ
ನೆಲದಿಂದ ನಿಮ್ಮ ನಿತಂಬ, ಬೆನ್ನು ಹಾಗು ಭುಜಗಳನ್ನು ಮೇಲಕ್ಕೆತ್ತಿ
ದೇಹಕ್ಕೆ ಕೈಗಳ ಆಧಾರ ನೀಡಿ
webdunia
WD

ಬೆನ್ನುಮೂಳೆಯನ್ನು ಬಿಲ್ಲಿನಂತೆ ಬಾಗಿಸಿ
ಇದೇವೇಳೆ, ನಿಮ್ಮ ಕತ್ತು ಮತ್ತು ತಲೆಯನ್ನು ಸಾಧ್ಯವಿರುವಷ್ಟು ಹಿಂದಕ್ಕೆ ಬಾಗಿಸಿ
ನಿಮ್ಮ ನೆತ್ತಿಯನ್ನು ನೆಲದ ಮೇಲೆ ಲಂಬವಾಗಿಸಿ
ನಿಮ್ಮ ಕೈಗಳನ್ನು ಮುಂದಕ್ಕೆ ತನ್ನಿ
ನಿಮ್ಮ ತೊಡೆಗಳ ಹಿಂಭಾಗವನ್ನು ಬಿಗಿಗೊಳಿಸಿ
ಕಿಬ್ಬೊಟ್ಟೆ ಮತ್ತು ಎದೆಯನ್ನು ಮೇಲಕ್ಕೆತ್ತಲು ನಿಮ್ಮ ಮೊಣಕೈಗಳನ್ನು ಸನ್ನೆಯಂತೆ ಬಳಸಿ
ಇದು ಬೆನ್ನುಮೂಳೆಯನ್ನು ಬಾಗಿಸಲು ಮತ್ತು ನೆತ್ತಿಯನ್ನು ನೆಲದಮೇಲೆ ಸೂಕ್ತವಾಗಿಸಲು ಸಹಾಯ ಮಾಡುವುದು.
ಹೆಬ್ಬೆರಳು, ತೋರುಬೆರಳು ಮತ್ತು ನಡುಬೆರಳುಗಳಿಂದ ಕೊಕ್ಕೆಯಾಗಿಸಿ ವಿರುದ್ಧವಾಗಿರುವ ಕಾಲುಬೆರಳುಗಳನ್ನು ಮೆದುವಾಗಿ ಎಳೆಯಿರಿ
ಈ ಭಂಗಿಯಲ್ಲಿ ಕನಿಷ್ಠ ಹತ್ತು ಸೆಕುಂಡುಗಳ ಕಾಲ ಇರಿ
ಸಹಜವಾಗಿ ಮತ್ತು ಲಯಬದ್ಧವಾಗಿ ಉಸಿರಾಡಿ
ಬಳಿಕ ನಿಧಾನಕ್ಕೆ ಆರಂಭದ ಪದ್ಮಾಸನ ಸ್ಥಿತಿಗೆ ಮರಳಿ

ಪ್ರಯೋಜನಗಳು
webdunia
WD

ಎದೆ ವಿಸ್ತಾರಗೊಳ್ಳುತ್ತದೆ
ಸ್ವಚ್ಛಗಾಳಿಯನ್ನು ಶ್ವಾಸಕೋಶಗಳು ಹಿಡಿದಿಡುವ ಶಕ್ತಿಯನ್ನು ಹೆಚ್ಚಿಸುತ್ತದೆ
ಬೆನ್ನುಮೂಳೆಗಳು ಶಕ್ತವಾಗುತ್ತವೆ
ಬೆನ್ನು ಹುರಿಯ ಮತ್ತು ಸರ್ವಿಕ್ ಪ್ರದೇಶಗಳು ಹೆಚ್ಚು ನಮ್ಯವಾಗುತ್ತವೆ ಮತ್ತು ವಿಸ್ತಾರವಾಗುತ್ತವೆ
ಸೂಕ್ತವಲ್ಲ ರೀತಿಯ ಕುಳಿತುಕೊಳ್ಳುವಿಕೆಯಿಂದ ಉಂಟಾಗುವ ಬೆನ್ನುಹುರಿಯ ಸಮಸ್ಯೆಗಳನ್ನು ಸರಿಪಡಿಸುತ್ತದೆ
ಎಚ್ಚರಿಕೆ
ಕತ್ತು ಅಥವಾ ಎದೆನೋವಿನಿಂದ ಬಳಲುತ್ತಿದ್ದರೆ ಈ ಆಸನವನ್ನು ಮಾಡಬೇಡಿ

Share this Story:

Follow Webdunia kannada