Select Your Language

Notifications

webdunia
webdunia
webdunia
webdunia

ಯೋಗಾಭ್ಯಾಸ ಆರಂಭಿಸುವ ಮುನ್ನ ನೆನಪಿಡಿ...

ಯೋಗಾಭ್ಯಾಸ ಆರಂಭಿಸುವ ಮುನ್ನ ನೆನಪಿಡಿ...
1. ಯೋಗದ ಬಗ್ಗೆ ಅಭ್ಯಾಸ ಆರಂಭಿಸುವುದಕ್ಕೆ ಮುನ್ನ ಪ್ರತಿಯೊಬ್ಬರೂ ಸೂಕ್ತ ತಜ್ಞರಿಂದ ಮಾರ್ಗದರ್ಶನ ಪಡೆದುಕೊಳ್ಳುವುದು ಅತ್ಯಂತ ಒಳ್ಳೆಯದು.

2. ಇದರ ಜತೆಗೇ, ಒಂದು ಬಾರಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ. ವೈದ್ಯರಿಂದ ಇಲ್ಲವೇ ಯೋಗ ಥೆರಪಿಸ್ಟರಿಂದ ಅನುಮತಿ ದೊರೆತ ಬಳಿಕವಷ್ಟೇ ನಿಮ್ಮ ಯೋಗಾಭ್ಯಾಸದ ಚಟುವಟಿಕೆಯನ್ನು ಆರಂಭಿಸಬೇಕು. ಕೆಲವೊಂದು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕೆಲವು ಆಸನಗಳು ಸೂಕ್ತವಾಗಲಾರದು. ಇದೇ ಕಾರಣಕ್ಕೆ ನೀವು ಯೋಗಾಭ್ಯಾಸ ಆರಂಭಿಸುವ ಮುನ್ನ ಸೂಕ್ತ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಸೂಕ್ತ.

3. ಯಾವನೇ ಒಬ್ಬ ಗಂಭೀರ ಕಾಯಿಲೆಗಳಿಂದ ನರಳುತ್ತಿದ್ದರೆ, ಆತ/ಆಕೆ ಯೋಗಾಭ್ಯಾಸ ಆರಂಭಿಸುವ ಮುನ್ನ ಈ ವ್ಯಾಧಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆಯೂ ಇದೆ.

4. ಯಾವುದೇ ಹೃದಯ ಸಂಬಂಧಿತ ಕಾಯಿಲೆ ಇರುವ ಮಂದಿ, ಯೋಗಾಸನಗಳು, ವಿಶೇಷವಾಗಿ ಕಠಿಣ ಆಸನಗಳನ್ನು ಮಾಡುವ ಮುನ್ನ ವೈದ್ಯರಿಂದ ಅನುಮತಿ ಪಡೆದುಕೊಳ್ಳಲೇಬೇಕು.

5. ಸೈನಸ್ (ಮೂಗಿಗೆ ಸಂಬಂಧಿತ) ಸೋಂಕು ಅಥವಾ ಸಮಸ್ಯೆಗಳಿರುವವರು ತಲೆಕೆಳಗೆ ಮಾಡಬೇಕಾಗುವ ಆಸನಗಳನ್ನು ಮಾಡಬಾರದು.

6. ರಕ್ತದೊತ್ತಡ ಸಮಸ್ಯೆಗಳಿಂಗ ಬಳಲುತ್ತಿರುವವರಾದರೆ, ಮೊದಲು ರಕ್ತದ ಒತ್ತಡವನ್ನು ಸಾಮಾನ್ಯ ಸ್ಥಿತಿಗೆ ತಂದುಕೊಂಡ ಬಳಿಕವೇ ಮುಂದುವರಿಯಬೇಕು.

7. ತಲೆಯ ಮೇಲೆ ಶರೀರದ ಪೂರ್ಣ ಭಾರ ಹಾಕಬೇಕಾಗಿ ಬರುವ ಆಸನಗಳನ್ನು ಇಂಥ ರೋಗಿಗಳು ಮಾಡಲೇಬಾರದು. ಯಾಕೆಂದರೆ ತಲೆಕೆಳಗೆ ಊರುವಾಗ ರಕ್ತವು ಬಲವಂತವಾಗಿ ಮೆದುಳಿಗೆ ಪರಿಚಲನೆಯಾಗುತ್ತದೆ. ಇಂಥ ರೋಗಿಗಳು ಹಾಗೂ ಗಂಭೀರವಾದ ಕಾಯಿಲೆಗಳಿಂದ ಬಳಲುತ್ತಿರುವವರು ಈ ರೀತಿಯ ಆಸನಗಳನ್ನು ಮಾಡಬಾರದು. ಅವರಿಗೆ ಸೂಕ್ತವಾದ ಆಸನವೆಂದರೆ ಶವಾಸನ. ಇಂಥವರಿಗೆ ನೆರವಾಗುವ ಕೆಲವು ಇತರ ಆಸನಗಳೂ ಇವೆ. ಆದರೆ ಯೋಗ ಥೆರಪಿಸ್ಟ್ ಸಲಹೆ ಪಡೆದ ಬಳಿಕವೇ ನೀವು ಅಂಥವುಗಳನ್ನು ಮಾಡಬೇಕಾಗುತ್ತದೆ.

8. ಯೋಗಾಸನಗಳ ಮೂಲಕ ಕೆಲವು ಆರೋಗ್ಯ ಸಮಸ್ಯೆಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ ಎಂಬುದೂ ತಿಳಿದಿರಲಿ.

9. ದುರ್ಬಲ ದೇಹಪ್ರಕೃತಿಯುಳ್ಳವರು ವ್ಯಾಯಾಮ ಮಾಡುವ ಮೊದಲು ಎರಡು ಹಂತಗಳನ್ನು ಪಾಲಿಸಬೇಕು. ಮೊದಲನೆಯದಾಗಿ ಅವರು ವೈದ್ಯಕೀಯ ಸಲಹೆ ಪಡೆಯಬೇಕು. ಎರಡನೆಯದಾಗಿ ,ಕನಿಷ್ಠ ಐದು ತಿಂಗಳ ಕಾಲ ಅವರು ಸರಳ ಯೋಗಾಸನಗಳ ಪ್ರಾರಂಭಿಕ ಹಂತ ಅನುಸರಿಸಬೇಕು. ಪರಿಪೂರ್ಣರಾಗಿ ಸಾಮರ್ಥ್ಯ ಪಡೆದ ಬಳಿಕ, ಆಂತರಿಕ ಅಂಗಗಳು ಸಮರ್ಪಕವಾಗಿ ಕಾರ್ಯ ಮಾಡತೊಡಗಿದ ಬಳಿಕ ಹಾಗೂ ಕೈಕಾಲುಗಳನ್ನು ಆಡಿಸುವಾಗ ಯಾವುದೇ ನೋವು ಆಗದಂತಾದ ಬಳಿಕವೇ ಅವರು ಮುಂದುವರಿದ ಅಂದರೆ ಕ್ಲಿಷ್ಟ ಎಂದು ಭಾವಿಸಲಾಗುವ ಆಸನಗಳನ್ನು ಮಾಡಬೇಕು.

Share this Story:

Follow Webdunia kannada