Webdunia - Bharat's app for daily news and videos

Install App

ಆಯುರ್ವೇದದಲ್ಲಿದೆ ಸಮಸ್ಯೆಗಳಿಗೆ ರಾಮ ಬಾಣ! ಮಹಿಳೆಯರು ತಪ್ಪದೇ ಓದಿ

ಸಮಸ್ಯೆಗೆ ಆಯುರ್ವೇದದಲ್ಲಿದೆ ಪರಿಹಾರ.. ಈ ಸರಳ ಸಲಹೆಗಳನ್ನು ಪಾಲಿಸಿ ಸಾಕು..

Webdunia
ಗುರುವಾರ, 1 ಜುಲೈ 2021 (12:14 IST)
ಬೆಂಗಳೂರು:ಮುಟ್ಟಾದ ವೇಳೆ ಕಡಿಮೆ ಸ್ರಾವ, ಮುಖದಲ್ಲಿ ಕೂದಲು ಬೆಳೆಯುವಿಕೆ, ತಲೆಕೂದಲು ಉದುರುವುದು, ತೂಕ ಹೆಚ್ಚಳ, ಗರ್ಭಧಾರಣೆಯಾಗದಿರುವುದು ಈ ರೀತಿಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ 10 ಮಹಿಳೆಯರಲ್ಲಿ ಕನಿಷ್ಟ 6 ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ಪಾಲಿಸ್ಟಿಕ್ ಓವೇರಿಯನ್ ಡಿಸೀಸ್ (ಪಿಸಿಓಡಿ) ಇದು ಇಂದಿನ ಬಹುತೇಕ ಯುವತಿಯರನ್ನು ಕಾಡುತ್ತಿರುವ ಗಂಭೀರ ಸಮಸ್ಯೆ.















ಋತುಚಕ್ರವಾದ 13-14 ದಿನಗಳಲ್ಲಿ ಮಹಿಳೆಯರ ಅಂಡಕೋಶದಿಂದ ಅಂಡಾಣು ಬಿಡುಗಡೆಯಾಗುತ್ತದೆ. ಆದರೆ ಪಿಸಿಓಡಿ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಅಂಡಾಣು ತಡವಾಗಿ ಬಿಡುಗಡೆಯಾಗುತ್ತದೆ ಅಥವಾ ಅಂಡಾಣು ಬಿಡುಗಡೆಯಾಗದೆ ಮುಟ್ಟು ಸಂಭವಿಸಲೂಬಹುದು. ಇದರಿಂದ ಮಹಿಳೆಯರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ.

ಕಾರಣ ಮತ್ತು ಲಕ್ಷಣಗಳು
ಪಿಸಿಓಡಿಗೆ ಚಿಕಿತ್ಸೆ ನೀಡುವ ಮೊದಲು ಅದರ ಮೂಲ ಕಾರಣವನ್ನು ಅರಿತುಕೊಳ್ಳುವುದು ಮುಖ್ಯವಾಗುತ್ತದೆ. ಪಿಸಿಓಡಿ ಹಾಮೋನುಗಳ ಅಸಮತೋಲನದಿಂದಾಗಿ ಸಂಭವಿಸುತ್ತದೆ. ಸಾಮಾನ್ಯವಾಗಿ ಸ್ತ್ರೀ ಅಂಡಾಶಯಗಳು ಸ್ತ್ರೀ ಲೈಂಗಿಕ ಹಾರ್ಮೋನುಗಳಾದ ಈಸ್ಟ್ರೊಜೆನ್ ಮತ್ತು ಪೆಸ್ಟೋರಜೆಸ್ಟರಾನ್ ಮತ್ತು ಕೆಲವು ಪ್ರಮಾಣದ ಪುರುಷ ಲೈಂಗಿಕ ಹಾರ್ಮೋನ್ ಟೆಸ್ಟೋಸ್ಟೆರಾನ್ ಅನ್ನು ಉತ್ಪಾದಿಸುತ್ತವೆ. ಪುರುಷರ ಮತ್ತೊಂದು ಲೈಂಗಿಕ ಹಾರ್ಮೋನ್ ಆದ ಆಂಡ್ರೋಜನ್ ಪ್ರಮಾಣ ಅಂಡಾಶಯದಲ್ಲಿ ಹೆಚ್ಚಾಗುತ್ತದೆ. ಇದನ್ನು ಹೈಪರಾಂಡ್ರೊಜೆನಿಸಂ ಎಂದು ಕರೆಯಲಾಗುತ್ತದೆ. ಆಂಡ್ರೊಜೆನ್ನ ಉನ್ನತ ಮಟ್ಟದ ಸ್ರವಿಸುವಿಕೆಯು ಅಂಡೋತ್ಪತ್ತಿಯಲ್ಲಿ ತೊಂದರೆ ಉಂಟುಮಾಡುತ್ತದೆ. ಇದು ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಕುಟುಂಬದಲ್ಲಿ ಯಾರಾದರೂ ಪಿಸಿಓಡಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಈ ಸಮಸ್ಯೆ ಇತರೆ ಮಹಿಳೆಯರಿಗೂ ಬರುವ ಸಾಧ್ಯತೆ ಇದೆ. ಅನಿಯಮಿತ ಋತುಚಕ್ರ, ದೇಹದಲ್ಲಿ ಅತಿಯಾದ ಕೂದಲು ಬೆಳವಣಿಗೆ, ಕೂದಲು ಉದುರುವುದು, ಗುಳ್ಳೆಗಳು ಅಥವಾ ಮೊಡವೆಗಳು, ಬಂಜೆತನ, ನಿದ್ರಾಹೀನತೆ ಮುಂತಾದ ಚರ್ಮದ ಕಾಯಿಲೆಗಳು ಪಿಸಿಒಡಿಯ ಲಕ್ಷಣಗಳಾಗಿವೆ.

1. ದೇಹದ ತೂಕದ ಮೇಲೆ ನಿಗಾ ಇರಿಸಿ
ಪಿಸಿಓಡಿ ಸಮಸ್ಯೆ ಖಚಿತವಾದ ನಂತರ ದೇಹದ ತೂಕದ ಮೇಲೆ ನಿಗಾ ಇರಿಸಿ ಪರಿಶೀಲಿಸುತ್ತಿರಬೇಕು. ತೂಕ ಹೆಚ್ಚಾದಲ್ಲಿ ಹೆಚ್ಚುವರಿ ಕೆಲಸದ ಮೂಲಕ ತೂಕ ಇಳಿಸಿಕೊಳ್ಳಬೇಕು. ದೇಹದ ತೂಕ ಹೆಚ್ಚಳವಾಗದಂತೆ ಸಮತೋಲಿತವಾಗಿರುವಂತೆ ನೋಡಿಕೊಳ್ಳಬೇಕು.
2. ಪೌಷ್ಟಿಕ ಆಹಾರ ಸೇವಿಸಿ
ನಮ್ಮ ದೇಹದ ತೂಕ ಆಹಾರ ಮೇಲೆ ಅವಲಂಬಿಸಿದೆ. ಹಾಗಾಗಿ ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಕಾಬ್ರ್ಸ್ ಆಹಾರವನ್ನು ಕಡಿಮೆ ಮಾಡಿ ಜಿಐ (ಗ್ಲೈಸೆಮಿಕ್ ಇಂಡೆಕ್ಸ್) ಆಹಾರ ಸೇವೆನೆಗೆ ಹೆಚ್ಚು ಒತ್ತು ಕೊಡಬೇಕು. ತಾಜಾ ಹಣ್ಣುಗಳು ಮತ್ತು ತರಕಾರಿ ಸೇವನೆಯನ್ನು ಹೆಚ್ಚಿಸಬೇಕು. ಸಕ್ಕರೆ ಅಂಶವಿರುವ ಪಾನಿಯಗಳಿಂದ ದೂರವಿರಬೇಕು.
3. ನಿಯಮಿತ ತಾಲೀಮು/ಯೋಗಾಭ್ಯಾಸವಿರಲಿ
ಯೋಗ ಮತ್ತು ವರ್ಕ್ ಔಟ್ ನಿಯಮಿತವಾಗಿರಲಿ. ಬ್ರಿಸ್ಕ್ ವಾಕ್ ಮೂಲಕ ದೇಹ ತೂಕ ಹೆಚ್ಚಾಗದಂತೆ ನಿಗಾವಹಿಸಿ
4. ಒತ್ತಡದಿಂದ ದೂರವಿರಿ
ಆರೋಗ್ಯದ ಮೇಲೆ ಅತಿಯಾದ ಒತ್ತಡವು ಕೆಟ್ಟ ಪರಿಣಾಮ ಬೀರುತ್ತದೆ. ಪಿಸಿಓಡಿಯಿಂದ ಬಳಸಲುತ್ತಿರುವವರಿಗೆ ಇನ್ನು ಕಷ್ಟಕರ. ಇದರಿಂದ ಫಲವತ್ತತೆಯ ಸಮಸ್ಯೆ ಮತ್ತು ಖಿನ್ನತೆ ಸಂಭವಿಸಬಹುದು. ಹತಾಶೆ, ಕೋಪವೂ ಉಂಟಾಗಬಹುದು. ಹಾಗಾಗಿ ಆದಷ್ಟು ಸಕಾರಾತ್ಮಕವಾಗಿ ಚಿಂತಿಸುವ ಮೂಲಕ ಪಿಸಿಓಡಿಯಿಂದ ದೂರವಿರಲು ಪ್ರಯತ್ನಿಸಿ.

 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಬೇಸಿಗೆಯಲ್ಲಿ ಪುನರ್ಪುಳಿ ಜ್ಯೂಸ್ ಕುಡಿಯಿರಿ

ವಿಶ್ವ ಲಿವರ್ ಆರೋಗ್ಯ ದಿನ: ಈ ಲಕ್ಷಣ ಕಂಡುಬಂದರೆ ಲಿವರ್ ಡ್ಯಾಮೇಜ್ ಆಗಿದೆ ಎಂದರ್ಥ

ಈ ಕಾಲದಲ್ಲಿ ಹೃದ್ರೋಗದ ಅಪಾಯ ಹೆಚ್ಚು ಯಾಕೆ ತಿಳಿಯಿರಿ

ಮುಂದಿನ ಸುದ್ದಿ