Webdunia - Bharat's app for daily news and videos

Install App

ವರಲಕ್ಷ್ಮಿ ವ್ರತ ಮಾಡುವುದು ಹೇಗೆ – ಏಕೆ?

Webdunia
ಶುಕ್ರವಾರ, 5 ಆಗಸ್ಟ್ 2022 (07:42 IST)
ಶ್ರಾವಣ ಮಾಸದ ಪೂರ್ಣಿಮೆ ಹಿಂದಿನ ಶುಕ್ರವಾರ ವರಮಹಾಲಕ್ಷ್ಮಿ ವ್ರತ.

ವರಮಹಾಲಕ್ಷ್ಮೀ ವ್ರತವನ್ನು ಆಚರಿಸುವವರು ಹನ್ನೆರಡು ತಂತುಗಳಿಂದ ಮಾಡಿದ ಹನ್ನೆರಡು ಗಂಟುಗಳಿಂದ ಕೂಡಿದ, ಲಕ್ಷ್ಮೀದಾರವನ್ನು ಬಲಹಸ್ತಕ್ಕೆ ಕಟ್ಟಿಕೊಂಡು, ಶ್ರದ್ಧಾಭಕ್ತಿಗಳಿಂದ ಪೂಜಿಸಬೇಕು.

                              ವರಲಕ್ಷ್ಮಿ ಮಂತ್ರ
    ‘ಪದ್ಮಾಸನೇ ಪದ್ಮಾಕರೇ ಸರ್ವ ಲೌಕೈಕ ಪೂಜಿತೇ|
  ನಾರಾಯಣಾಪ್ರಿಯೇ ದೇಯಿ ಸುಪ್ರಿತಾ ಭವ ಸರ್ವದಾ||

 
ಹನ್ನೆರಡು ಎಂಬುದು ವಾಸುದೇವನಿಗೆ ಪ್ರಿಯವಾದ ಒಂದು ಶಕ್ತಿಪೂರ್ಣವಾದ ರಹಸ್ಯ ಸಂಖ್ಯೆ. ದ್ವಾದಶಾತ್ಮಕನಾದ ಭಗವಂತನ ಪರಾಶಕ್ತಿಯಾಗಿ ಆತನೊಡನೆ ಸದಾ ಸರ್ವತ್ರಯೋಗವನ್ನು ಹೊಂದಿರುವ ಶ್ರೀ ವರಮಹಾಲಕ್ಷ್ಮಿ ದೇವಿಯೂ ದ್ವಾದಶಾತ್ಮಕಳಾಗಿ(12) ದ್ವಾದಶ ತಂತುಗ್ರಂಥಿಗಳಲ್ಲಿ ದ್ವಾದಶನಾಮಾವಲೀ ಪೂಜೆಯನ್ನು ಸ್ವೀಕರಿಸುತ್ತಾಳೆ.

ಅಭ್ಯಂಜನ ಸ್ನಾನಮಾಡಿ, ಶುಭ್ರ ವಸ್ತ್ರವನ್ನು ಧರಿಸಿ, ಆಪ್ಪಿಕಗಳನ್ನು ಪೂರೈಸಿ, ಸಾರಿಸಿ ರಂಗವಲ್ಲಿಯಿಟ್ಟ ದಿವ್ಯ ಮಂಟಪದಲ್ಲಿ, ಪಂಚವರ್ಣಗಳಿಂದ ಕೂಡಿದ, ಅಷ್ಟದಳ ಪದ್ಮವನ್ನು ರಚಿಸಿ, ಕಲಶವನ್ನಿಟ್ಟು ಅದರಲ್ಲಿ ವರಮಹಾಲಕ್ಷ್ಮೀಯನ್ನು ಆವಾಹಿಸಿ, ಪ್ರಾಣಪ್ರತಿಷ್ಠೆ, ಶ್ರೀಸೂಕ್ತ ವಿಧಾನದಿಂದ ಕಲ್ಲೋಕ್ತ ಷೋಡಶೋಪಚಾರ ಪೂಜೆ ಸಲ್ಲಿಸಿ, ನಾನಾ ವಿಧವಾದ ಭಕ್ಷ ಭೋಜ್ಯಗಳನ್ನು ತಾಯಿಗೆ ಅರ್ಪಿಸಿ ಪ್ರಾರ್ಥಿಸಬೇಕು.

ಭವಿಷ್ಯತ್ತರ ಪುರಾಣದಲ್ಲಿ ಲೋಕಾನುಗ್ರಹಕ್ಕಾಗಿ ಈಶ್ವರನು ಪಾರ್ವತಿಗೆ ವಿವರಿಸಿದ ವ್ರತವೇ ವರಮಹಾಲಕ್ಷ್ಮೀ ವ್ರತ. ಸಂಸ್ಕೃತ ವೈದಿಕ ಸಾಹಿತ್ಯದಲ್ಲಿ ಲಕ್ಷ್ಮಿಯನ್ನು ಸೌಂದರ್ಯ, ಸಂಪತ್ತು, ವಿಜಯ್, ಯಶಸ್ಸು ಮುಂತಾದ ಎಲ್ಲಾ ಸದ್ಗುಣ ಹಾಗೂ ಲೌಕಿಕ ಭಾಗ್ಯಗಳ ಅಧಿದೇವತೆಯೆಂದು ಸ್ತುತಿಸಲಾಗಿದೆ.

ಪದ್ಮಪುರಾಣದಲ್ಲಿ ಲಕ್ಷ್ಮೀ ವಿಷ್ಣುವಿನ ಶಕ್ತಿಯಾಗಿ ಅವನಲ್ಲಿರುವ ಶ್ರೀ, ಭೂ, ಸರಸ್ವತಿ, ಪ್ರೀತಿ, ಕೀರ್ತಿ, ಶಾಂತಿ, ತುಷ್ಟಿಪುಷ್ಠಿಗಳ ಪ್ರತೀಕವಾಗಿದ್ದಾಳೆ ಎಂದು ಹೇಳಿದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments