Publish Date: Sun, 12 Apr 2009 (18:00 IST)
Updated Date: Sun, 12 Apr 2009 (17:59 IST)
ಕಾಂಗ್ರೆಸ್ ಪಕ್ಷವನ್ನು ಮುದಿಯರ ಪಕ್ಷವೆಂದು ಟೀಕಿಸಿದ್ದ ಭಾರತೀಯ ಜನತಾ ಪಕ್ಷದ ನಾಯಕ ಗುಜರಾತ್ ಮುಖ್ಯಮಂತ್ರಿ ನರೇಂದ್ರ್ ಮೋದಿ, ರವಿವಾರದಂದು ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು 125 ವರ್ಷ ವಯಸ್ಸಿನ "ಗುಡಿಯಾ" ಎಂದು ಮೊತ್ತೊಮ್ಮೆ ಚಚ್ಚಿದ್ದಾರೆ.
ಉತ್ತರ ಪ್ರದೇಶದ ಶರವಸ್ತಿ ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ ಅಬ್ ಮೈ ಕಾಂಗ್ರೆಸ್ ಕೋ ಬುಡಿಯಾ ನಹೀ ಗುಡಿಯಾ ಕಹೂಂಗಾ (ಈಗ ನಾನು ಕಾಂಗ್ರೆಸ್ ಪಕ್ಷವನ್ನು ಮುದುಕಿ ಅನ್ನುವುದಿಲ್ಲ ಬೊಂಬೆ ಅನ್ನುತ್ತೇನೆ) ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಮುದುಕಿಯಾಗಿದ್ದು, ದೇಶಕ್ಕೆ ಭಾರವಾಗಿದೆ ಎಂದು ಹೋಲಿಸಿದ್ದ ಮೋದಿಯವರ ಬುಡಿಯಾ ಹೇಳಿಕೆಯಿಂದಾಗಿ ಕೆರಳಿದ ಕಾಂಗ್ರೆಸ್ ಪಕ್ಷ ಮೋದಿಯವರು ಮಹಿಳೆಯರ ಹಾಗೂ ಹಿರಿಯರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿತ್ತು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ 37ವರ್ಷ ವಯಸ್ಸಿನ ಪ್ರಿಯಾಂಕಾ ಗಾಂಧಿ ತಾನು ಮುದುಕಿಯಂತೆ ಕಾಣುತ್ತೇವೆಯೇ ಎಂದು ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದರು.