ಬೇಕಾಗುವ ಸಾಮಗ್ರಿಗಳು:
ಹಾಗಲಕಾಯಿ 14 ಕೆ. ಜಿ.
ಬ್ಯಾಡಗಿ ಮೆಣಸಿನ ಕಾಯಿ 6 ರಿಂದ 8
ತೆಂಗಿನ ತುರಿ 12 ಬಟ್ಟಲು
ಹುಣಸೆ ರಸ ರುಚಿಗೆ ತಕ್ಕಷ್ಟು
ಬೆಲ್ಲ ಅಗತ್ಯವಿದ್ದಷ್ಟು
ಉಪ್ಪು ರುಚಿಗೆ ತಕ್ಕಷ್ಟು
ಅರಸಿನ ಪುಡಿ ಅಗತ್ಯವಿದ್ದಷ್ಟು
ಎಣ್ಣೆ ರುಚಿಗೆ ತಕ್ಕಷ್ಟು
ಉದ್ದಿನ ಬೇಳೆ ಅಗತ್ಯವಿದ್ದಷ್ಟು
ಸಾಸಿವೆ ಅಗತ್ಯವಿದ್ದಷ್ಟು
ಕರಿಬೇವು ಅಗತ್ಯವಿದ್ದಷ್ಟು
ಮಾಡುವ ವಿಧಾನ:
ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಅದಕ್ಕೆ ಉಪ್ಪು, ಅರಸಿನ ಪುಡಿ, ನೀರು ಚಿಮುಕಿಸಿ ಸ್ವಲ್ಪ ಹೊತ್ತು ಬಿಡಿ, ಅನಂತರ ಚೆನ್ನಾಗಿ ತಿಕ್ಕಿ ತೊಳೆದು ತೆಗೆಯಿರಿ. ಬಾಣಲೆಯಲ್ಲಿ ಒಗ್ಗರಣೆ ಹಾಕಿ ಹೆಚ್ಚಿದ ಹೋಳುಗಳನ್ನು ಹಾಗೂ ಸ್ವಲ್ಪ ಅರಸಿನವನ್ನು ಹಾಕಿ ಮುಚ್ಚಿಡಿ. ಅದು ಅರ್ಧ ಬೆಂದ ಮೇಲೆ ಉರಿ ಸಣ್ಣ ಮಾಡಿ ಉಪ್ಪು, ಹುಣಸೆ ರಸ, ಬೆಲ್ಲ, ಬೆರಸಿ ಸ್ವಲ್ಪ ನೀರು ಹಾಕಿ ಮುಚ್ಚಿಡಿ. ಮೆಣಸಿನ ಕಾಯಿನ್ನು ಸ್ವಲ್ಪ ಹುರಿದುಕೊಂಡು ಸಾಸಿವೆ, ತೆಂಗಿನ ತುರಿ ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಬೆಂದ ಹಾಗಲಕಾಯಿಗೆ ಅದನ್ನೆಲ್ಲ ಸೇರಿಸಿ ಚೆನ್ನಾಗಿ ಕೆದಕಿ ಕೆಳಗಿಳಿಸಿ.