Select Your Language

Notifications

webdunia
webdunia
webdunia
webdunia

ಹಸಿರು ಮೆಣಸಿನಕಾಯಿ ಚಟ್ನಿ

ಹಸಿರು ಮೆಣಸಿನಕಾಯಿ ಚಟ್ನಿ
"ಬೇಕಾಗುವ ಸಾಮಾನುಗಳು: ಕೊತ್ತಂಬರಿ ಸೊಪ್ಪು 2 ಕಂತೆ , ಹಸಿ ಮೆಣಸಿನ ಕಾಯಿ 3-4 ,ಪುದಿನಸೊಪ್ಪು 1 ಚಿಕ್ಕ ಕಂತೆ ,ಬೆಲ್ಲ 25 ಗ್ರಾಂ, ಹುರಿಗಡಲೆ ಅರ್ಧ ಬಟ್ಟಲು, ಬೆಳ್ಳುಳ್ಳಿ 1 ಗಡ್ಡೆ ,ರುಚಿಕೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಕೊತಂಬರಿ , ಪುದಿನ ಸೊಪ್ಪನ್ನು ಬುಡ ಕಡಿದು ಸ್ವಚ್ಚವಾಗಿ ತೊಳೆದಿಡಿ ,ಬೆಳ್ಳುಳ್ಳಿಯನ್ನು ಸಿಪ್ಪೆ ಬಿಡಿಸಿಡಿ. ಎಲ್ಲ ವಸ್ತುಗಳನ್ನು ಮಿಕ್ಸಿಗೆ ಅಥವಾ ಒರಳಿಗೆ ಹಾಕಿ ಚೆನ್ನಾಗಿ ರುಬ್ಬಿರಿ. ಚಟ್ನಿ ತೀರಾ ಗಟ್ಟಿಯಾಗಿರಬಾರದು ಅಥವಾ ನೀರಾಗಿಯೂ ಇರಬಾರದು ಅದರಂತೆ ನೋಡಿಕೊಳ್ಳಿ. ರೊಟ್ಟಿ ಜೊತೆಗೆ ಸೇವಿಸಿದಲ್ಲಿ ತುಂಬಾ ರುಚಿ.
"

Share this Story:

Follow Webdunia kannada