ಬೇಕಾಗುವ ಸಾಮಾಗ್ರಿಗಳು :
ಬೆಳ್ತಿಗೆ ಅಕ್ಕಿ ಒಂದೂವರೆ ಕಪ್
ಉದ್ದಿನ ಬೇಳೆ ಅರ್ಧ ಕಪ್
ಮೆಂತೆ ಒಂದು ಚಿಕ್ಕ ಚಮಚ
ಇವೆಲ್ಲವನ್ನು ಮೂರುಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಬೇಕು.
ಮಾಡುವ ವಿಧಾನ :
ನೆನೆಹಾಕಿದ ಉದ್ದಿನ ಬೇಳೆ ಮತ್ತು ಮೆಂತೆಯನ್ನು ತೊಳೆದು ನಯವಾಗಿ ರುಬ್ಬಿ. ಅಕ್ಕಿಯನ್ನು ತೊಳೆದು ಪ್ರತ್ಯೇಕವಾಗಿ ರುಬ್ಬಿ. ಎರಡೂ ಹಿಟ್ಟನ್ನು ಚೆನ್ನಾಗಿ ಬೆರೆಸಿ ಉಪ್ಪು ಸೇರಿಸಿ. ಎಂಟುಗಂಟೆಗಳ ಕಾಲ ಬಿಡಿ. ದೋಸೆ ಕಾವಲಿಯನ್ನು ಒಲೆ ಮೇಲಿರಿಸಿ ಎಣ್ಣೆ ಸವರಿ. ಬಿಸಿಯಾದ ಬಳಿಕ ಕಾವಲಿಗೆ ನೀರು ಚಿಮುಕಿಸಿ. ಬಳಿಕ ಅದರ ಮೇಲೆ ಹಿಟ್ಟನ್ನು ಹಾಕಿ ಸೌಟಿನಿಂದ ಸುತ್ತಲೂ ತಿರುವಿ ದೋಸೆ ಮಾಡಿರಿ. ಅದರ ಮೇಲೆ ಒಂದು ಚಮಚ ತುಪ್ಪ ಹಾಕಿ. ಚಟ್ನಿ ಅಥವಾ ಸಾಂಬಾರಿನೊಂದಿಗೆ ಸವಿಯಿರಿ.