ಅಕ್ಕಿ ಒಂದು ಕಪ್, ಬೆಲ್ಲ ಎರಡು ಕಪ್, ಹೆಸರು ಬೇಳೆ ಒಂದು ಕಪ್,ತುಪ್ಪ ನೂರು ಗ್ರಾಂ, ದ್ರಾಕ್ಷಿ ,ಗೋಡಂಬಿ ಚೂರುಗಳು ಮೂರು ಸ್ಪೂನ್, ಏಲಕ್ಕಿ ಪುಡಿ ಅರ್ಧ ಸ್ಪೂನ್, ಹಾಲು ಅರ್ಧ ಲೀ. ಕಾಯಿಸಿದ್ದು, ಒಣಕೊಬ್ಬರಿ ತುರಿ ಅರ್ಧ ಕಪ್
ಮಾಡುವ ವಿಧಾನ..
ಮೊದಲು ಹೆಸರು ಬೇಳೆಯನ್ನು ಹುರಿಯಿರಿ. ಅಕ್ಕಿ ತೊಳೆದು ಅದರೊಂದಿಗೆ ಹುರಿದ ಹೆಸರು ಬೇಳೆಯನ್ನು ಬೆರಸಿ ಕುಕ್ಕರಿನಲ್ಲಿ ಇಟ್ಟು ಬೇಯಿಸಿ.. (ಎರಡು ವಿಷಲ್). ಇನ್ನೊಂದು ಪಾತ್ರೆಯಲ್ಲಿ ಪುಡಿ ಮಾಡಿದ ಬೆಲ್ಲವನ್ನು ಇಟ್ಟು ಅದರಲ್ಲಿ ನೀರನ್ನು ಬೆರಸಿ ಅದನ್ನು ಬಿಸಿ ಮಾಡುತ್ತಾ ಕರಗಿಸಿರಿ. ಬಳಿಕ ಬೆಂದ ಅಕ್ಕಿ ಮತ್ತು ಹೆಸರು ಬೇಳೆಯನ್ನು ಈ ಬೆಲ್ಲದ ಪಾಕದೊಂದಿಗೆ ಬೆರಸಿ, ಈಗಾಗಲೇ ಕಾಯಿಸಿ ಇಟ್ಟಿರುವ ಹಾಲನ್ನು ಸಹ ಅದರೊಂದಿಗೆ ಸೇರಿಸಿ.ಅದಾದ ಬಳಿಕ ತುಪ್ಪವನ್ನು ಒಂದೆರಡು ಸ್ಪೂನ್ಗಳಷ್ಟು ಬಾಣಲೆಗೆ ಹಾಕಿ ಉಳಿದ ಎಲ್ಲವನ್ನು ಈ ಪೊಂಗಲ್ನಲ್ಲಿ ಬೆರಸಿರಿ. ಆ ಬಳಿಕ ಏಲಕ್ಕಿ ಪುಡಿಯನ್ನು ಮಿಶ್ರಮಾಡಿ. ಈಗಾಗಲೇ ಬಾಣಲಿಯಲ್ಲಿ ಇಟ್ಟಿರುವ ತುಪ್ಪದಲ್ಲಿ ದ್ರಾಕ್ಷಿ -ಗೋಡಂಬಿಯನ್ನು ಹುರಿದು ಸಿದ್ಧವಾಗಿರುವ ಸಿಹಿ ಹುಗ್ಗಿಯನ್ನದಲ್ಲಿ ಬೆರಸಿ.