ಬೇಕಾಗುವ ಸಾಮಾಗ್ರಿಗಳು :
ಹೊರಗಿನ ಕವರಿಗೆ
ಗೊಧಿ ಹಿಟ್ಟು ಒಂದು ಕಪ್
ಅಕ್ಕಿ ಹಿಟ್ಟು ಒಂದು ದೊಡ್ಡ ಚಮಚ
ಉಪ್ಪು ರುಚಿಗೆ
ಕರಿಯಲು ಎಣ್ಣೆ
ಹೂರಣಕ್ಕೆ- ಬಟಾಟೆ ಎರಡು
ಈರುಳ್ಳಿ ಒಂದು
ಬಟಾಣಿ ಕಾಳು ಸ್ವಲ್ಪ
ಕ್ಯಾರೆಟ್ ಒಂದು
ಹಸಿ ಮೆಣಸು ಒಂದು
ಗರಂ ಮಸಾಲೆ ಸ್ಪಲ್ಪ
ಅರಶಿನ ಹುಡಿ ಸ್ವಲ್ಪ
ತಯಾರಿ ವಿಧಾನ :
ಹೂರಣ ತಯಾರಿ- ಬಟಾಣಿ, ಆಲೂಗಡ್ಡೆ, ಕ್ಯಾರೆಟ್ ಬೇಯಿಸಿಟ್ಟುಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆ ಇಟ್ಟು ಸಾಸಿವೆ ಸಿಡಿದ ಬಳಿಕ ಈರುಳ್ಳಿ ಹಾಕಿ. ಕಂದು ಬಣ್ಣಕ್ಕೆ ಬಂದ ನಂತರ ಬಟಾಣಿ ಬೇಯಿಸಿ ಜಜ್ಜಿದ ಬಟಾಟೆ, ಕ್ಯಾರೆಟ್, ಉಪ್ಪು, ಗರಂ ಮಸಾಲೆ ಹುಡಿ, ಕತ್ತರಿಸಿದ ಹಸಿಮೆಣಸು ಅರಿಶಿನ ಹುಡಿ ಹಾಕಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ.ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು ಎಲ್ಲವನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಚಿಕ್ಕ ಚಿಕ್ಕ ಉಂಡೆ ಮಾಡಿ ಲಟ್ಟಿಸಿ ಅದರಲ್ಲಿ ಹೂರಣ ಇಟ್ಟು ತ್ರಿಕೋನ ಆಕಾರದಲ್ಲಿ ಮಡಚಿ ಎಣ್ಣೆಯಲ್ಲಿ ಕರಿಯಿರಿ.