Article Vegetarian %e0%b2%b5%e0%b3%86%e0%b2%9c%e0%b3%8d %e0%b2%95%e0%b2%9f%e0%b3%8d%e0%b2%b2%e0%b3%86%e0%b2%9f%e0%b3%8d 111040500042_1.htm

Daily Horoscope

Select Your Language

Notifications

webdunia
webdunia
webdunia
webdunia

ವೆಜ್ ಕಟ್ಲೆಟ್

ವೆಜ್ ಕಟ್ಲೆಟ್
ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಕೈಯಿಂದ ಪುಡಿಪುಡಿ ಮಾಡಿಟ್ಟುಕೊಳ್ಳಿ. ಕ್ಯಾರೆಟನ್ನು ಪುಟ್ಟಪುಟ್ಟದಾಗಿ ಕತ್ತರಿಸಿ ಬಟಾಣಿ ಕಾಳಿನೊಂದಿಗೆ ಬೇಯಿಸಿ. ಈರುಳ್ಳಿ ಕತ್ತರಿಸಿಟ್ಟುಕೊಳ್ಳಿ. ಬಾಣಲೆಯಲ್ಲಿ ಎಣ್ಣೆಹಾಕಿ ಬಿಸಿಮಾಡಿ ಈರುಳ್ಳಿ ತುಣುಕುಗಳನ್ನು ಹಾಕಿ ಹುರಿಯಿರಿ. ಇದಕ್ಕೆ ಬೆಂದ ಆಲೂ, ಕ್ಯಾರೆಟ್ ಮತ್ತು ಬಟಾಣಿ ಸೇರಿಸಿ ನೀರಿಂಗುವ ತನಕ ಹುರಿಯಿರಿ. ಉಪ್ಪು ಖಾರಪುಡಿ, ಗರಂ ಮಸಾಲೆಪುಡಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಒಲೆಯಿಂದ ಕೆಳಗಿರಿಸಿ.ಪಾತ್ರೆಯೊಂದರಲ್ಲಿ ಮೈದಾ ಮತ್ತು ಅಕ್ಕಿಹುಡಿಯನ್ನು ಸೇರಿಸಿ ಸ್ಪಲ್ಪ ನೀರುಹಾಕಿ ಪೇಸ್ಟ್ ಮಾಡಿಟ್ಟುಕ್ಕೊಳ್ಳಿ. ತರಕಾರಿ ಮಿಶ್ರಣವನ್ನು ಉಂಡೆಗಳಾಗಿಸಿ ಈ ಪೇಸ್ಟಿನಲ್ಲಿ ಮುಳುಗಿಸಿ ಇದಕ್ಕೆ ಬ್ರೆಡ್ ತುಣುಕುಗಳನ್ನು ಸೇರಿಸಿ ಬಾಳೆಎಲೆ ಅಥವಾ ದಪ್ಪ ಪ್ಲಾಸ್ಟಿಕ್‌ಗೆ ಎಣ್ಣೆ ಸವರಿ ಅದರ ಮೇಲೆ ಉಂಡೆಗಳನ್ನು ಇರಿಸಿ ಬೇಕಾದ ಆಕಾರಕ್ಕೆ ಒತ್ತಿ. ಕಾವಲಿ ಬಿಸಿಗಿಟ್ಟು ಎಣ್ಣೆ ಸವರಿ ಅದರ ಮೇಲೆ ಕಟ್ಲೆಟ್‌ಗಳನ್ನು ಇರಿಸಿ ಕಾಯಿಸಿ. ಎರಡೂ ಬದಿಗೆ ಎಣ್ಣೆ ಹಾಕಿ ಕಾಯಿಸಿ. ಟೊಮೇಟೊ ಸಾಸ್ ಹಾಗೂ ಪುದಿನ ಚಟ್ನಿಯೊಂದಿಗೆ ಬಿಸಿಬಿಸಿ ಬಡಿಸಿ.

Share this Story:

Follow Webdunia kannada