Select Your Language

Notifications

webdunia
webdunia
webdunia
webdunia

ವೆಜಿಟೇಬಲ್ ಪಲಾವ್ ರೈಸ್

ವೆಜಿಟೇಬಲ್ ಪಲಾವ್ ರೈಸ್
ಬೇಕಾಗುವ ಸಾಮಾಗ್ರಿಗಳು:

2 ಕಪ್ ಬಾಸುಮತಿ ಅಕ್ಕಿ
1/4 ಕಪ್ ಎಣ್ಣೆ ಮತ್ತು ತುಪ್ಪದ ಮಿಶ್ರಣ
2 ಕತ್ತರಿಸಿದ ಈರುಳ್ಳಿ
2 ಕಪ್ ತರಕಾರಿ
ಕ್ಯಾರೆಟ್, ಬೀನ್ಸ್, ಹೂಕೋಸು ಮತ್ತು ಬಟಾಣಿಗಳನ್ನು ಬಳಸಿ

ಗ್ರೇವಿ ತಯಾರಿಕೆ ಸಾಮಾಗ್ರಿ:

2 ಟೊಮೇಟೊ
3 ಲವಂಗ, ಬೆಳ್ಳುಳ್ಳಿ
1/2 ಶುಂಠಿ
ಕೊತ್ತಂಬರಿ ಸೊಪ್ಪು
1 ಹಸಿರು ಮೆಣಸು
1/4 ಕಪ್ ತುರಿದ ತೆಂಗಿನಕಾಯಿ

ಮಾಡುವ ವಿಧಾನ:

ಅಕ್ಕಿಯನ್ನು 30 ನಿಮಿಷ ನೀರಿನಲ್ಲಿ ನೆನೆಯಿಸಿಡಿ. ಗ್ರೇವಿ ತಯಾರಿಕೆಯ ಸಾಮಾಗ್ರಿಗಳನ್ನು ಅರೆಯಿರಿ. ಎಣ್ಣೆ ಮತ್ತು ತುಪ್ಪವನ್ನು ದೊಡ್ಡ ಬಣಾಲೆಗೆ ಹಾಕಿ. ಇದಕ್ಕೆ ಈರುಳ್ಳಿಯನ್ನು ಸೇರಿಸಿ ಕರಿಯಿರಿ. ನಂತರ ಗ್ರೇವಿಯನ್ನು ಸೇರಿಸಿ ಚೆನ್ನಾಗಿ 2 ನಿಮಿಷ ಕಲಕಿ. ತರಕಾರಿಯನ್ನು ಸೇರಿಸಿ, ಅವು ತರಕಾರಿಗೆ ಸೇರಿಕೊಂಡಿದೆಯೇ ನೋಡಿ. ಚೆನ್ನಾಗಿ ಕಲಕಿ. ಸ್ವಲ್ಪ ಸಮಯದ ನಂತರ ಅಕ್ಕಿಯನ್ನು ಹಾಕಿ ಚೆನ್ನಾಗಿ ಕಲಸಿ. ಕೊನೆಗೆ ನೀರು(1 ಕಪ್ ಅಕ್ಕಿಗೆ 2 ಕಪ್ ನೀರು), ಉಪ್ಪು ಸೇರಿಸಿ. ಬೇಯಿಸಿ.ಬೆಂಕಿಯನ್ನು ಕಡಿಮೆ ಮಾಡಿ ಅಕ್ಕಿ ಬೇಯುವ ತನಕ ಬೇಯಿಸಿ. ಅಲಂಕಾರಕ್ಕಾಗಿ ಕೊತ್ತಂಬರಿ ಸೊಪ್ಪನ್ನು ಬಳಸಿ. ನಿಮ್ಮ ಅಡುಗೆಯನ್ನು ಇನ್ನೂ ರುಚಿಯಾಗಿಸಲು ಗೋಡಂಬಿಯನ್ನು ಕೊನೆಗೆ ಸೇರಿಸಿ.

Share this Story:

Follow Webdunia kannada