Publish Date: Wed, 06 Jan 2010 (19:57 IST)
Updated Date: Wed, 06 Jan 2010 (19:57 IST)
ಬೇಕಾಗುವ ಸಾಮಾಗ್ರಿಗಳು: ಕಡಲೇಬೇಳೆ, ನೀರು, ಸನ್‌ಫ್ಲವರ್ ಆಯಿಲ್, ನೀರುಳ್ಳಿ, ಟೊಮೆಟೋ, ಅರಶಿನ ಪುಡಿ, ಮೆಣಸಿನ ಪುಡಿ, ತುಪ್ಪ, ಒಣ ಕೆಂಪು ಮೆಣಸು, ಇಂಗು, ಜೀರಿಗೆ, ಬೆಳ್ಳುಳ್ಳಿ, ಎಸಳುಗಳು, ಉಪ್ಪು.
ಪಾಕ ವಿಧಾನ: ಕಡೆಲೆಬೇಳೆ, ಸನ್‌ಫ್ಲವರ್ ಆಯಿಲ್, ಅರಶಿನ ಪುಡಿ, ಮೆಣಸಿನ ಪುಡಿ, ಉಪ್ಪು, ಸಣ್ಣಗೆ ಹೆಚ್ಚಿದ ಟೊಮ್ಯಾಟೋ ಮತ್ತು ನೀರುಳ್ಳಿ ಎಲ್ಲವಲನ್ನೂ ಕುಕ್ಕರಿನಲ್ಲಿ ಬೇಯಿಸಿ. ಇನ್ನೊಂದು ಸಣ್ಣ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಜೀರಿಗೆ ಹಾಕಿ ಸಿಡಿಸಿ. ಅದು ಸಿಡಿದ ನಂತರ, ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.ನಂತರ ಇದಕ್ಕೆ ಇಂಗು ಸೇರಿಸಿ ಕೂಡಲೇ ಇದನ್ನು ಬೇಯಿಸಿದ ಮಿಶ್ರಣಕ್ಕೆ ಹಾಕಿ. ಇದನ್ನು ಬಿಸಿ ಇರುವಾಗಲೇ ಅನ್ನದೊಂದಿಗೆ ತಿನ್ನಿರಿ.