ಬೇಕಾಗುವ ಸಾಮಾಗ್ರಿಗಳು:
250 ಗ್ರಾಂ ಬೆಂಡೆ
250 ಗ್ರಾಂ ಈರುಳ್ಳಿ
30 ಗ್ರಾಂ ಹಸಿರು ಮೆಣಸು
1 ಕಟ್ಟು ಕೊತ್ತಂಬರಿ ಸೊಪ್ಪು
1/4 ಚಮಚ ಅರಶಿನ
75 ಗ್ರಾಂ ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ:
ಬೆಂಡೆಯನ್ನು ತೊಳೆದು, ಒಣಗಿಸಿ, 1 ಚೂರು ಮಾಡಿ. ಬಣಾಲೆಯಲ್ಲಿ ಎಣ್ಣೆಯನ್ನು ಕಾಯಿಸಿ. ಬೆಂಡೆ, ಈರುಳ್ಳಿ, ಹಸಿರು ಮೆಣಸು ಸೇರಿಸಿ. ಬಣಾಲೆಯನ್ನು ಮುಚ್ಚಿ ನಿಧಾನದ ಬೆಂಕಿಯಲ್ಲಿ 15-20 ನಿಮಿಷಗಳ ಸಮಯ ಬೇಯಿಸಿ. ಕಲಸುತ್ತಾ ಇರಿ. ಈಗ ಉಪ್ಪು, ಅರಶಿನ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಕಲಕಿ. ಬೆಂಡೆ ಪ್ಯಾಜ್ ರೆಡಿ.