ಬೇಕಾಗುವ ಸಾಮಗ್ರಿಗಳು - ಮೈದಾ ಹಿಟ್ಟು 1 ಬಟ್ಟಲು, ½ ಬಟ್ಟಲು ಚಿರೋಟಿ ರವೆ , ತೆಂಗಿನ ಕಾಯಿ 1, ಬೆಲ್ಲ -1, ಎಣ್ಣೆ ಕರಿಯಲು, ಚಿಟುಕಿ ಉಪ್ಪು, ಎಳ್ಳು ಒಂದು ಚಮಚ.
ಮಾಡುವ ವಿಧಾನ - ತೆಂಗಿನ ಕಾಯಿಯನ್ನು ತುರಿದುಕೊಳ್ಳಿ. ಬಾಣಲೆ ಮೇಲೆ ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಕುದಿಯಲು ಇಡಿ. ಬೆಲ್ಲ ಕುದಿಯುತ್ತಿರುವ ವೇಳೆ ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಕೈ ಆಡಿಸುತ್ತಿರಿ. 15 ನಿಮಿಷಗಳ ಕಾಲ ಅದನ್ನು ಚೆನ್ನಾಗಿ ಕುದಿಸಿ. ಬೆಲ್ಲ ಹಾಗೂ ತೆಂಗಿನ ತುರಿ ಚೆನ್ನಾಗಿ ಬೆಂದು, ಬಿಡಿ ಬಿಡಿಯಾಗುತ್ತದೆ. ಆಗ ಹುರಿದ ಎಳ್ಳನ್ನು ಸೇರಿಸಿ, ಕೆಳಗಿಳಿಸಿ.
ಮೈದಾ ಹಿಟ್ಟಿಗೆ ಸ್ವಲ್ಪ ಬಿಸಿ ಎಣ್ಣೆ ಸೇರಿಸಿ, ನೀರು ಹಾಕಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು ಪುಟಾಣಿ ರೊಟ್ಟಿ ಸಿದ್ಧಮಾಡಿಕೊಳ್ಳಿ.
ತಟ್ಟಿದ ಮೈದಾ ಮಧ್ಯೆ ಕಾಯಿ ಬೆಲ್ಲದ ಮಿಶ್ರಣವನ್ನಿಟ್ಟು, ಅಂಚುಗಳನ್ನು ಸೇರಿಸಿ, ಸಮೋಸಾದಂತೆ ಜುಟ್ಟ ಮಾಡಿ. ನಂತರ ಬಾಣಲೆಗೆ ಹಾಕಿ, ಮೋದಕವನ್ನು ಸ್ವಲ್ಪ ಕಂದು ಬಣ್ಣಕ್ಕೆ ಬರುವಂತೆ ಕರಿಯಿರಿ.