ರುಚಿಕರ ಎಣ್ಣೆ ರಹಿತ ಸೀಗಡಿ ಪಡವಲ ಖಾದ್ಯ
, ಶನಿವಾರ, 18 ಜನವರಿ 2014 (17:20 IST)
ಬೇಕಾದ ಸಾಮಗ್ರಿಗಳು:ಪಡವಲ ಕಾಯಿ ಒಂದು, ಕತ್ತರಿಸಿರುವ ಈರುಳ್ಳಿ ಅರ್ಧ ಕಪ್ಪು, ಹಸಿಕೊಬ್ಬರಿ ತುರಿ ಅರ್ಧ ಕಪ್ಪು, ಒಣ ಮೆಣಸು ನಾಲ್ಕು,ಉಪ್ಪು ರುಚಿಗೆ ತಕ್ಕಷ್ಟು, ಧನಿಯಾ ಪುಡಿ ಅರ್ಧ ಸ್ಪೂನ್,ಒಣಗಿರುವ ಸೀಗಡಿ ಒಂದು ಕಪ್, ಅರಿಸಿಣ ಅರ್ಧ ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು. ಮಾಡುವ ವಿಧಾನಪಡವಲಕಾಯಿಯ ಬೀಜ ತೆಗೆದು ಚೌಕಾಕಾರದಲ್ಲಿ ಸಣ್ಣ ತುಂಡುಗಳಾಗಿ ಕತ್ತರಿಸ ಬೇಕು . ಆ ಬಳಿಕ ಒಣಮೆಣಸಿನ ಕಾಯಿ, ಹಸಿಕೊಬ್ಬರಿ ಬೆರಸಿ ಪೇಸ್ಟ್ ಮಾಡಿಕೊಳ್ಳ ಬೇಕು. ಅದಾದ ಬಳಿಕ ಸೀಗಡಿಗಳನ್ನು ತೊಳೆದು ಒಂದು ಕಡೆ ಇಡಿ.ಪಾತ್ರೆಯಲ್ಲಿ ಕತ್ತರಿಸಿಟ್ಟ ಈರುಳ್ಳಿ, ಪಡವಲ ಕಾಯಿ ಚೂರುಗಳು, ಸೀಗಡಿಯನ್ನು ಹಾಕಿ ಅವುಗಳ ಮೇಲೆ ಸ್ವಲ್ಪ ನೀರು ಚುಮುಕಿಸಿ ಅದಕ್ಕೆ ಪ್ಲೇಟ್ ಮುಚ್ಚಿ ಬೇಯಲು ಇಡಿ.ಅದು ಅರ್ಧ ಬೆಂದ ಬಳಿಕ ಅದಕ್ಕೆ ಧನಿಯಾ ಪುಡಿ, ಅರಿಸಿಣ, ಕೊಬ್ಬರಿ ಮಿಶ್ರಣವನ್ನು ಹಾಗೂ ಉಪ್ಪು ಹಾಕಿ ಮಿಶ್ರ ಮಾಡಿ. ಬಿಸಿಬಿಸಿ ಅನ್ನಕ್ಕೆ ರುಚಿಕರ ಖಾದ್ಯ. ಇದು ಎಣ್ಣೆ ರಹಿತ ಆಹಾರ.