Select Your Language

Notifications

webdunia
webdunia
webdunia
webdunia

ಮ್ಯಾಂಗೋ ರೈಸ್

ಮ್ಯಾಂಗೋ ರೈಸ್
ಬೇಕಾಗುವ ಪದಾರ್ಥಗಳು:

2 ಬಟ್ಟಲು ಬಾಸುಮತಿ ಅಕ್ಕಿ
ಒಂದೂವರೆ ಬಟ್ಟಲು ಮಾವಿನ ಹೋಳು
15 ಗೋಡಂಬಿ
20-25 ಒಣದ್ರಾಕ್ಷಿ
2 ಬಟ್ಟಲು ಉದ್ದುದ್ದ ಸೀಳಿದ ಈರುಳ್ಳಿ
2 ಟೇಬಲ್ ಚಮಚ ಮೊಸರು
2 ಟೀ ಚಮಚ ಧನಿಯಾ
5-6 ಹಸಿ ಮೆಣಸಿನಕಾಯಿ
1 ಟೇಬಲ್ ಚಮಚ ಗಸಗಸೆ
2 ಟೀ ಚಮಚ ತೆಂಗಿನ ತುರಿ
ಅರ್ಧ ಹೋಳು ನಿಂಬೆ ರಸ
1 ಚಮಚ ಅಚ್ಚ ಖಾರದ ಪುಡಿ
4 ಏಲಕ್ಕಿ
2 ಇಂಚು ಚಕ್ಕೆ
6 ಲವಂಗ
1 ಚಮಚ ಗರಂ ಮಸಾಲೆ
1 ಬಟ್ಟಲು ಎಣ್ಣೆ
ಉಪ್ಪು ರುಚಿಗೆ ತಕ್ಕಷ್ಟು
1 ಹಿಡಿ ಹೆಚ್ಚಿದ ಕೊತ್ತಂಬರಿ ಸೊಪ್ಪು
1 ಚಮಚ ಜೀರಿಗೆ
2 ಚಮಚ ತುಪ್ಪ


ಮಾಡುವ ವಿಧಾನ:

ಅಕ್ಕಿ ತೊಳೆದು ಹುಡಿ ಹುಡಿಯಾಗಿ ಅನ್ನ ತಯಾರಿಸಿ (ಅನ್ನ ಗಟ್ಟಿಯಾಗಿರಲಿ), ತುಪ್ಪ ಕರಗಿಸಿ ದ್ರಾಕ್ಷಿ, ಗೋಡಂಬಿ ಹುರಿಯಿರಿ. ಎಣ್ಣೆ ಕಾಯಿಸಿ ಜೀರಿಗೆ ಹಾಕಿ ಸಿಡಿಸಿ, ಚಕ್ಕೆ, ಲವಂಗ, ಏಲಕ್ಕಿ ಹಾಕಿ ಹುರಿಯಿರಿ. ಗಸಗಸೆ, ತೆಂಗು, ಧನಿಯಾ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ರುಬ್ಬಿಕೊಳ್ಳಿ. ಒಗ್ಗರಣೆಗೆ ಈರುಳ್ಳಿ ಸೇರಿಸಿ ಹಸಿವಾಸನೆ ಹೋಗುವಂತೆ ಹುರಿದು ರುಬ್ಬಿದ ಮಸಾಲೆ ಹಾಕಿ ಒಂದು ನಿಮಿಷ ಹುರಿದು ಮೊಸರು ಸೇರಿಸಿ, ಉಪ್ಪು ಬೆರೆಸಿ, ನಿಂಬೆರಸ ಸೇರಿಸಿ, ಕಲಸಿ. ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ಅನ್ನ ಹರಡಿ ಅದರ ಮೇಲೆ ಮಸಾಲೆ (ಹುರಿದಿಟ್ಟಿರುವ) ಹರಡಿ ಮಾವಿನ ಹೋಳುಗಳನ್ನು ಸ್ವಲ್ಪ ಹರಡಿ ನಂತರ ಇದರ ಮೇಲೆ ಮತ್ತೆ ಅನ್ನ ಹರಡಿ. ಹೀಗೆ ಎಲ್ಲಾ ಪದಾರ್ಥಗಳನ್ನು ಪದರ ಪದರವಾಗಿ ಹರಡಿ ಕೊನೆಯಲ್ಲಿ ಅನ್ನದ ಮೇಲೆ ಗೋಡಂಬಿ-ದ್ರಾಕ್ಷಿಗಳನ್ನು ಹರಡಿ. ಓವನ್ನಿನಲ್ಲಿ ಇಟ್ಟು ಅರ್ಧ ಗಂಟೆ ಬೇಯಿಸಿ. ಓವನ್ ಇಲ್ಲದವರು ಕುಕ್ಕರಿನಲ್ಲಿ ಒಂದು ಸೀಟಿ ಕೂಗಿಸಿ. ಕೊತ್ತಂಬರಿಯಿಂದ ಅಲಂಕರಿಸಿ, ಬಡಿಸುವಾಗ ಮೇಲಿನ ಪದಾರ್ಥದಿಂದ ಹಿಡಿದ ಪಾತ್ರೆಯ ತಳದವರೆಗೆ ಎಲ್ಲಾ ಪದಾರ್ಥಗಳು ಸಿಗುವಂತೆ ಬಡಿಸುವ ಕೈಯಿಂದ ತೆಗೆದು ಬಡಿಸಿ.

Share this Story:

Follow Webdunia kannada