ಬೇಕಾಗುವ ಸಾಮಾಗ್ರಿ :
ಮಾವಿನ ಕಾಯಿ
ಸೌತೆ ಕಾಯಿ
ಈರುಳ್ಳಿ
ಹಸಿರು ಮೆಣಸಿನ ಕಾಯಿ
ತೆಂಗಿನ ಹಾಲು
ಸಾಸಿವೆ
ಮೆಣಸು
ಕರಿಬೇವು ಸೊಪ್ಪು
ಮಾಡುವ ವಿಧಾನ :
ಮಾವಿನ ಕಾಯಿ ಪಚಡಿಮಾವಿನ ಕಾಯಿ ಮತ್ತು ಸೌತೆ ಕಾಯಿಯನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ. ಈರುಳ್ಳಿ, ಹಸಿರು ಮೆಣಸಿನ ಕಾಯಿ, ತೆಂಗಿನ ಹಾಲು ಮತ್ತು ನೀರು ಸೇರಿಸಿ ಹದ ಉರಿಯಲ್ಲಿ ಬೇಯಿಸಿ. ಸಾಸಿವೆ, ಮೆಣಸು, ಕರಿಬೇವು ಸೊಪ್ಪು ಒಗ್ಗರಣೆ ಕೊಡಿ. ಪಚಡಿ ಸಿದ್ದ.