ಬೇಕಾಗುವ ಸಾಮಗ್ರಿಗಳು : ಬ್ರೇಡ್ 4 ತುಂಡುಗಳು, ಅಲೂಗಡ್ಡೆ 1/4 ಕೆ.ಜಿ, ಈರುಳ್ಳಿ 2, ಹಸಿಮೆಣಸಿನಕಾಯಿ 2, ಕಡಲೆ ಹಿಟ್ಟು 1/4 ಕೆ.ಜಿ, ನಿಂಬೆ ಹಣ್ಣು 1, ಎಣ್ಣೆ, ಕೊತ್ತಂಬರಿ, ಆರಿಸಿನ, ಉಪ್ಪು,ಖಾದರ ಪುಡಿ, ಅಡುಗೆ ಸೋಡಾ.
ತಯಾರಿಸುವ ವಿಧಾನ : ಮೊದಲಿಗೆ ಅಲೂಗಡ್ಡೆಯನ್ನು ಚನ್ನಾಗಿ ಬೇಯಿಸಿಕೊಳ್ಳಿ, ಸಿಪ್ಪೆ ತೆಗೆದು ಪುಡಿ ಮಾಡಿಕೊಳ್ಳಿ, ಎಣ್ಣೆ, ಸಾಸಿವೆ, ಈರುಳ್ಳಿ ಕಂದು ಬಣ್ಣ ಬರುವವರೆಗೂ ಚನ್ನಾಗಿ ಹುರಿದುಕೊಳ್ಳಿ, ಅರಿಸಿನ, ಉಪ್ಪು, ನಿಂಬೆ ಮಿಶ್ರಣ ಮಾಡಿದ ಮೇಲೆ ಪುಡಿ ಮಾಡಿದ ಅಲೂಗಡ್ಡೆಯನ್ನು ಸೇರಿಸಿ ಕಲಿಸಿ.
ಕಡಲೆ ಹಿಟ್ಟು ಖಾರದ ಪುಡಿ, ಉಪ್ಪು ಸೋಡಾ, ಬೋಂಡಾ ಹಿಟ್ಟಿನ ರೀತಿ ಗಟ್ಟಿಯಾಗಿ ಕಲಿಸಿ, ಬ್ರೇಡ್ ತುಣುಕುಗಳನ್ನು ತೆಗೆದುಕೊಂಡು ಎರಡರ ನಡುವೆ ಪಲ್ಯ ತುಂಬಿ ತ್ರಿಕೋನಾಕೃತಿಯಲ್ಲಿ ಕತ್ತರಿಸಿ ಬೋಂಡಾ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಿರಿ.