ಬೇಕಾಗುವ ಸಾಮಾಗ್ರಿಗಳು:
ಸಣ್ಣ ಹುಣಸೆ ಹುಳಿ
ತೊಗರಿ ಬೇಳೆ- 1/2 ಕಪ್ ಬೇಯಿಸಿದ
ಸಾಂಬಾರಿನ ಪುಡಿ-2 ಚಮಚ
7-8 ದೊಡ್ಡ ಬೆಳ್ಳುಳ್ಳಿ
1 ದೊಡ್ಡ ಟೊಮೇಟೊ
3/4 ಚಮಚ ಜೀರಿಗೆ
ಅರಶಿನ ಪುಡಿ
ಇಂಗು
ಬೇವಿನ ಸೊಪ್ಪು
ತಯಾರಿಸುವ ವಿಧಾನ:
ಹುಣಸೆಯನ್ನು ನೀರಿನಲ್ಲಿ ನೆನೆಯಿಸಿಡಿ ಮತ್ತು ಹುರುಳನ್ನು ತೆಗೆಯಿರಿ. 1 ಚಮಚ ಎಣ್ಣೆಯಲ್ಲಿ ಜೀರಿಗೆ, ಮೆಣಸು, ಬೆಳ್ಳುಳ್ಳಿಯನ್ನು ಕರಿಯಿರಿ. ಇದು ತಣ್ಣಗಾದ ಮೇಲೆ ಟೊಮೇಟೊದೊಂದಿಗೆ ಮಿಶ್ರ ಮಾಡಿ ಅರೆಯಿರಿ. ಹುಣಸೆಯನ್ನು ಅರಶಿನ, ಸಾಂಬಾರಿನ ಪುಡಿ, ಇಂಗು ಮತ್ತು ಉಪ್ಪಿನೊಂದಿಗೆ ಕುದಿಸಿ. ಮಿಶ್ರಣವನ್ನು ಇದಕ್ಕೆ ಸೇರಿಸಿ, ಕುದಿಸಿ. ಈಗ ಬೇಳೆಯನ್ನು ಸೇರಿಸಿ ಮತ್ತೆ ಕುದಿಸಿ. ಪರಿಮಳಕ್ಕಾಗಿ ತುಪ್ಪದೊಂದಿಗೆ ಸಾಸಿವೆ, ಜೀರಿಗೆ ಮತ್ತು ಬೇವಿನ ಎಲೆಯನ್ನು ಸೇರಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.