ಬೇಕಾಗುವ ಪದಾರ್ಥಗಳು
ಮಜ್ಜಿಗೆ, ಶುಂಠಿ, ನಿಂಬೆರಸ, ಹಸಿ ಮೆಣಸಿನಕಾಯಿ, ಕರಿಬೇವು ಎಸಳು, ಕೊತ್ತಂಬರಿ ಸೊಪ್ಪು, ಉಪ್ಪು, ಇಂಗು, ನೀರು.
ಮಾಡುವ ವಿಧಾನ: ಹಸಿ ಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು, ಹಸಿ ಶುಂಠಿ ಎಲ್ಲವನ್ನೂ ಚೆನ್ನಾಗಿ ಜಜ್ಜಿ ಸ್ವಲ್ಪ ಉಪ್ಪು ಹಾಕಿ ಒಂದು ತೆಳುವಾದ ಬಟ್ಟೆಯಲ್ಲಿ ಗಂಟು ಕಟ್ಟಿ ಮಜ್ಜಿಗೆಯೊಳಗೆ ಹಾಕಿಡಿ. ಇದಕ್ಕೆ ನೀರನ್ನೂ ಸೇರಿಸಿ. ನಂತರ ಕುಡಿದರೆ ಮಜ್ಜಿಗೆಯ ರುಚಿ ಬಾಯಾರಿದವರಿಗೆ ಹಿತವಾಗಿರುತ್ತದೆ. ಮಧುಮೇಹಿಗಳೂ ಇದನ್ನು ಕುಡಿಯಬಹುದು. ಇದನ್ನು ಕುಡಿಯುವುದರಿಂದ ಜೀರ್ಣಶಕ್ತಿ ವೃದ್ಧಿಸುತ್ತದೆ.