ಬೇಕಾಗುವ ಸಾಮಾಗ್ರಿಗಳು:
500 ಗ್ರಾಂ ಬೀನ್ಸ್
150 ಗ್ರಾಂ ಹಸಿ ಕಡಲೇಕಾಯಿ
1/2 ಕಪ್ ತುರಿದ ತೆಂಗಿನಕಾಯಿ
2 ಈರುಳ್ಳಿ
2 ಟೊಮೇಟೊ
1 ಚಮಚ ಸಾಸಿವೆ
ಎಣ್ಣೆ, ಉಪ್ಪು
ತಯಾರಿಸುವ ವಿಧಾನ:
ಹಸಿ ಕಡಲೇಯನ್ನು 1 ಗಂಟೆಗಳ ಕಾಲ ನೆನೆಯಿಸಿಡಿ. ಸಿಪ್ಪೆಯನ್ನು ತೆಗೆದು ಬದಿಗಿಟ್ಟುಕೊಳ್ಳಿ. ಬಣಾಲೆಯಲ್ಲಿ ಎಣ್ಣೆಯನ್ನು ಕಾಯಿಸಿ, ಸಾಸಿವೆ ಮತ್ತು ಈರುಳ್ಳಿಯನ್ನು ಕರಿಯಿರಿ. ಈಗ, ಕತ್ತರಿಸಿದ ಬೀನ್ಸ್ ಅನ್ನು ಸೇರಿಸಿ ಮತ್ತೆ ಸ್ವಲ್ಪ ಸಮಯ ಬೇಯಿಸಿ. ನಂತರ, ಹಸಿ ಕಡಲೇ, ತುರಿದ ತೆಂಗಿನಕಾಯಿ, ಉಪ್ಪು ಮತ್ತು ಅಗತ್ಯವಿದ್ದರೆ ನೀರನ್ನು ಸೇರಿಸಿ. 15-20 ನಿಮಿಷಗಳವರೆಗೆ ಬೇಯಿಸಿ. ಕೊನೆಗೆ ಕತ್ತರಿಸಿದ ಟೊಮೇಟೊವನ್ನು ಸೇರಿಸಿ ನಂತರ ಸ್ವಲ್ಪ ಸಮಯ ಬೇಯಿಸಿ. ನಿಮ್ಮ ಬೀನ್ಸ್ ಸ್ಪೇಷಲ್ ಈಗ ರೆಡಿ.