Select Your Language

Notifications

webdunia
webdunia
webdunia
webdunia

ಬಾಸ್ಮತಿ ಪಲಾವ್ ರೈಸ್

ಬಾಸ್ಮತಿ ಪಲಾವ್ ರೈಸ್
ಬೇಕಾಗುವ ಸಾಮಾಗ್ರಿಗಳು:

2 ಕಪ್ ಬಾಸುಮತಿ ಅಕ್ಕಿ
2 ಕಪ್ ತರಕಾರಿ(ಬಟಾಟೆ, ಕ್ಯಾರೆಟ್, ಬೀನ್ಸ್, ಬಟಾಣಿ ಮತ್ತು ಹೂಕೋಸು)
1 ಈರುಳ್ಳಿ
1 ಕಪ್ ಮೊಸರು
2 ಟೊಮೇಟೊ
1 ಚಮಚ ಮೆಣಸಿನ ಪುಡಿ
1 ಚಮಚ ಕೊತ್ತಂಬರಿ ಪೌಡರ್
4 ಲವಂಗ
1 ಏಲಕ್ಕಿ
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
4 ಹಸಿರು ಮೆಣಸು
1 ಚಮಚ ಗರಂ ಮಸಾಲಾ
1 ಚಮಚ ಅರಶಿನ
ತುಪ್ಪ

ಮಾಡುವ ವಿಧಾನ:

15 ನಿಮಿಷ ಅಕ್ಕಿಯನ್ನು ನೀರಿನಲ್ಲಿ ನೆನೆಯಿಸಿಡಿ. ತೊಳೆದು, 4 ಕಪ್ ನೀರು ಹಾಕಿ ಅಕ್ಕಿ ಬೇಯುವ ತನಕ ಸರಿಯಾಗಿ ಬೇಯಿಸಿ. ನಂತರ ಈ ಅಕ್ಕಿಯನ್ನು 30 ನಿಮಿಷಗಳವರೆಗೆ ಮೊಸರಿನಲ್ಲಿ ನೆನೆಸಿಡಿ. ಈರುಳ್ಳಿಯನ್ನು ತುಪ್ಪದಲ್ಲಿ ಕರಿಯಿರಿ. ಕತ್ತರಿಸಿದ ತರಕಾರಿಗಳನ್ನು ಹಾಕಿ 2 ನಿಮಿಷ ಕಾಯಿಸಿ. ಅದ್ದಿಟ್ಟ ಮಸಾಲಾವನ್ನು ತರಕಾರಿಗೆ ಸೇರಿಸಿ, 1 ಕಪ್ ನೀರನ್ನು ಸೇರಿಸಿ, ತರಕಾರಿ ಮೆದುವಾಗುವವರೆಗೆ ಬೇಯಿಸಿ. ತರಕಾರಿ ಬೆಂದ ನಂತರ ನೀರು ಇನ್ನೂ ಉಳಿದಿದ್ದರೆ, ಬಿಸಾಡಿ. ಬೇಯಿಸಿದ ಅನ್ನವನ್ನು ತರಕಾರಿಯೊಂದಿಗೆ 2 ನಿಮಿಷ ಕಲಸಿ. ಈರುಳ್ಳಿ ರೈಥಾದೊಂದಿಗೆ ಬಿಸಿಬಿಸಿಯಾಗಿ ಬಡಿಸಿ.

Share this Story:

Follow Webdunia kannada