ಬೇಕಾಗುವ ಸಾಮಾಗ್ರಿಗಳು : ಮೊಸರು, ಸಕ್ಕರೆ, ಬಾಳೆಹಣ್ಣು, ಮೈದಾ, ಬಣ್ಣದ ಪುಡಿ, ಬೇಕಿಂಗ್ ಸೋಡಾ, ಎಣ್ಣೆ,
ಪಾಕ ವಿಧಾನ : ಮೊಸರು ಮತ್ತು ಸಕ್ಕರೆಯನ್ನು ಮಿಶ್ರಮಾಡಿ, ಇದಕ್ಕೆ ಬಣ್ಣ ಹಾಗೂ ಬೇಕಿಂಗ್ ಸೋಡಾ ಸೇರಿಸಿ ಕಲಸಿರಿ. ನಂತರ ಬಾಳೆಹಣ್ಣನ್ನು ಹಿಸುಕಿ ಇದಕ್ಕೆ ಬೆರೆಸಿ. ಮೈದಾ ಹಿಟ್ಟನ್ನು ಇದಕ್ಕೆ ಸೇರಿಸಿ ಚಪಾತಿ ಹಿಟ್ಟಿನ ರೀತಿಯಲ್ಲಿ ಹಿಟ್ಟು ತಯಾರಿಸಿ. 4-5 ಗಂಟೆ ಹಾಗೇ ಬಿಡಿ. ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ, ಪೂರಿಯ ಗಾತ್ರದಲ್ಲಿ ಅದನ್ನು ಲಟ್ಟಿಸಿ, ಎಣ್ಣೆಯಲ್ಲಿ ಕರಿಯಿರಿ.